ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬ ರಾಮಾಯಣದಲ್ಲಿ ಶ್ರೀರಾಮನ ಮಾತು ಇಂದಿಗೂ ವಿಶ್ವದ ಇತರೆ ರಾಷ್ಟ್ರಗಳಿಗೂ ಭಾರತಕ್ಕೂ ಇರುವ ಪ್ರಮುಖ ವ್ಯತ್ಯಾಸಕ್ಕೆ ಹಿಡಿದ ಕೈಗನ್ನಡಿಯಂತಿದೆ. ಅವರು ಭೂಮಿಯನ್ನು ಭೋಗದ ವಸ್ತುವನ್ನಾಗಿ ಕಾಣುತ್ತಾರೆ, ನಾವು ನಮ್ಮ ಹೊತ್ತ ತಾಯಿಯೆಂದು ಸ್ವರ್ಗಕ್ಕಿಂತ ಮಿಗಿಲಾಗಿ ಪೂಜಿಸುತ್ತೇವೆ. ಆದರೆ ದುರ್ದೈವದ ಸಂಗತಿಯೆಂದರೆ ನಮ್ಮ ರಾಷ್ಟ್ರದಲ್ಲೂ ಕೂಡ ಅಧಿಕಾರದ ದಾಹದಿಂದ, ನೀಚ ರಾಜಕೀಯ ನಿಲುವುಗಳಿಂದ ಭೂಮಿತಾಯಿ ಎನ್ನುವುದನ್ನು ಮರೆತು ತಾಯಿಯ ಗರ್ಭವನ್ನೇ ಎರಡಾಗಿಸಿದ ನಿದರ್ಶನ ಐತಿಹಾಸಿಕ ದುರಂತಗಳಲ್ಲೊಂದು.
ಉತ್ತರಮ್ ಯತ್ ಸಮುದ್ರಸ್ಯ ಹಿಮಾದ್ರೈಶ್ಚೈವ ದಕ್ಷಿಣಂ
ವರ್ಷಂ ತದ್ ಭಾರತಂ ನಾಮ, ಭಾರತೀ ಯತ್ತ ಸಂತತಿ
ಎಂಬ ಸಾಲುಗಳಂತೆ ಸಮುದ್ರಗಳ ಉತ್ತರಕ್ಕೆ, ಹಿಮಾಲಯದ ದಕ್ಷಿಣಕ್ಕೆ ವಿಸ್ತಾರವಾಗಿ ವ್ಯಾಪಿಸಿರುವ ಈ ನಾಡನ್ನು ಭಾರತವೆಂದೂ, ಇಲ್ಲಿನ ಜನರನ್ನು ಭಾರತೀಯರೆಂದೂ ಕರೆಯಲಾಗುತ್ತದೆ. ಇಷ್ಟು ವಿಶಾಲವಾಗಿದ್ದ ಭಾರತ ಪ್ರಸ್ತುತ ಅನೇಕ ಕಾರಣಗಳಿಂದಾಗಿ ತನ್ನ ನಿಜ ಸ್ವರೂಪವನ್ನು ಕಳೆದುಕೊಂಡಿದೆ. ಈ ನಾಡಿನ ಸರ್ವ ಭೂಭಾಗಗಳನ್ನು ಒಳಗೊಂಡೇ ಸ್ವರಾಜ್ಯವನ್ನು ಗಳಿಸಬೇಕೆಂದು ತ್ಯಾಗಕ್ಕೆ ಮಾಡಿದ ಸಹಸ್ರಾರು ವ್ಯಕ್ತಿಗಳಿದ್ದಾರೆ. ಆದರೆ ಪರಕೀಯರ ದಾಳಿಗಳಿಂದ, ನಮ್ಮವರ ಸಂಕುಚಿತ ಮನಸ್ಥತಿಯಿಂದ, ಅಧಿಕಾರದಲ್ಲಿದ್ದವರ ಇಚ್ಛಾಶಕ್ತಿಯ ಕೊರತೆಯಿಂದ ನಮ್ಮ ನಾಡಿನ ಭಾಗವೇ ಆಗಿದ್ದ ಹಲವನ್ನು ನಾವು ಕಳೆದುಕೊಂಡಿದ್ದೇವೆ.
ನಾವು ಕಳೆದುಕೊಂಡ ಭೂ ಪ್ರದೇಶಗಳಲ್ಲಿ ಇಂದು ಪ್ರತ್ಯೇಕ ದೇಶದ ಸ್ಥಾನಮಾನ ಪಡೆದ ಅಫ್ಘಾನಿಸ್ತಾನ, ಶ್ರೀಲಂಕಾ, ಬ್ರಹ್ಮದೇಶ (ಮ್ಯಾನ್ಮಾರ್), ನೇಪಾಳ, ಟಿಬೆಟ್, ಭೂತಾನ್, ಪಾಕಿಸ್ತಾನ, ಬಾಂಗ್ಲದೇಶ ದೇಶಗಳಿವೆ! ಹಾಗಿದ್ದರೆ ಅಖಂಡವಾಗಿದ್ದ ಭಾರತ ಈ ಪರಿಯ ವಿಭಜನೆಗೆ ತುತ್ತಾಗಿದ್ದು ಹೇಗೆ? ಇದಕ್ಕೆ ಉತ್ತರವೊಂದೆ ನಾವು ನಮ್ಮ ತನವನ್ನು ಮರೆತು ವರ್ತಿಸಿದ್ದು.
ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಹೊರತುಪಡಿಸಿ ಈ ರಾಷ್ಟ್ರದ ಭಾಗವಾಗಿದ್ದ ಇತರೆ ರಾಷ್ಟ್ರಗಳು ಪರಕೀಯರ ದಬ್ಬಾಳಿಗೆ ಬಲಿಯಾದ ಕಾರಣ ಕಳೆದುಕೊಂಡರೆ. ಭಾರತ ತನ್ನ ವಿದೇಶಿಗರ ದಾಸ್ಯದ ಸಂಕೋಲೆಯನ್ನು ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳ ಸಹಕಾರದಿಂದ ಬಿಡಿಸಿಕೊಳ್ಳುವ ವೇಳೆ ದುಡುಕಿ ತೆಗೆದುಕೊಂಡ ಒಂದು ನಿರ್ಧಾರ ಪಕ್ಕದಲ್ಲೇ ಭಯೋತ್ಪಾದಕರನ್ನು ಇರಿಸಿಕೊಂಡು ಜೀವನ ಸಾಗಿಸುವಂತಹ ಸ್ಥಿತಿಗೆ ತಂದಿರಿಸಿತು.
ಭಾರತಕ್ಕೆ ಕಾಲಿಟ್ಟ ವಿದೇಶಿಗರಲ್ಲಿ ನಮ್ಮ ದೌರ್ಬಲ್ಯವನ್ನು ಗುರುತಿಸಿ ನಮ್ಮನ್ನು ಒಡೆದು ಆಳುವ ನೀತಿಯಿಂದಲೇ ಬ್ರಿಟಿಷರು ತಮ್ಮ ಆಳ್ವಿಕೆಯನ್ನು ಮಾಡಿದರು. ಭಾರತದಿಂದ ಅನಿವಾರ್ಯವಾಗಿ ತಮ್ಮ ದೇಶಕ್ಕೆ ಮರಳಬೇಕಾದ ಪರಿಸ್ಥಿತಿ ಎದುರಾದಾಗಲೂ ರಾಷ್ಟ್ರವನ್ನು ಧರ್ಮಾಧಾರಿತವಾಗಿ ವಿಭಜಿಸಿ ಶಾಶ್ವತವಾಗಿ ಎರಡು ದೇಶಗಳ ನಡುವೆ ಗೊಂದಲವನ್ನು ಸೃಷ್ಟಿಸುವ ಹುನ್ನಾರವನ್ನು ಮಾಡಿದರು. ಅವರ ಹುನ್ನಾರವನ್ನು ಅರಿತಿದ್ದರೂ ಅಧಿಕಾರದ ಲಾಲಸೆಯಿಂದ ಮರುಮಾತಾಡದೆ ವಿಭಜನೆಗೆ ಒಪ್ಪಿದ ಬ್ರಿಟಿಷರ ಬಾಲಬುಡುಕರಂತಿದ್ದ ನಾಯಕರು ಅಖಂಡವಾಗಿದ್ದ ಈ ರಾಷ್ಟ್ರವನ್ನು ತ್ರಿಖಂಡವನ್ನಾಗಿಸಲು ಒಪ್ಪಿದರು.
ಇದರ ಪರಿಣಾಮವಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುವ ಈ ಸಂದರ್ಭದಲ್ಲಿ ನಮ್ಮದೇ ಭಾಗವಾಗಿದ್ದು ಬೇರಾದ ಪಾಕಿಸ್ತಾನದ ಕಾರಣದಿಂದಾಗಿ ನಾಲ್ಕು ಯುದ್ಧಗಳನ್ನು, ಹಲವು ಭಯೋತ್ಪಾದಕ ಕೃತ್ಯಗಳನ್ನು, ಸಹಸ್ರಾರು ಸೈನಿಕರನ್ನು ಕಳೆದುಕೊಂಡ ಘಟನೆಗಳಿಗೆ ನಾವೆಲ್ಲರೂ ಅನಿವಾರ್ಯವಾಗಿ ಸಾಕ್ಷಿಗಳಾಗಿದ್ದೇವೆ. ಪಾಕಿಸ್ತಾನದ ಈ ಪರಿಯ ಉಗ್ರವಾದಕ್ಕೆ ಪಕ್ಕದ ಚೀನಾ ಹಾಗೂ ಇತರೆ ರಾಷ್ಟ್ರಗಳ ಬೆಂಬಲವೂ ದೊಡ್ಡ ಮಟ್ಟದಲ್ಲೇ ಇದೆ. ಈ ಸನ್ನಿವೇಷಗಳೆಲ್ಲವೂ ನಿರ್ಮಾಣವಾಗುವುದಕ್ಕೆ ಅಂದು ನಮ್ಮನ್ನಾಳಬೇಕೆಂದು ಬಯಸಿದ ನಾಯಕರುಗಳು ತೆಗೆದುಕೊಂಡ ಒಂದು ತಪ್ಪು ನಿರ್ಧಾರ ಕಾರಣ.
ವ್ಯಕ್ತಿಗಾಗಲಿ, ರಾಷ್ಟ್ರಕ್ಕಾಗಲಿ ತನ್ನ ಇತಿಹಾಸ ಹಲವು ಪಾಠಗಳನ್ನು ಕಲಿಸುತ್ತದೆ. ಭಾರತದ ಲಕ್ಷಾಂತರ ಮಂದಿ ವಿವಿಧ ಮಜಲುಗಳಲ್ಲಿ ಹೋರಾಡಿ ದೊರಕಿಸಿಕೊಟ್ಟ ಸ್ವಾತಂತ್ರ್ಯ ಹಾಗೂ ಕನಸು ಕಂಡ ಸಂಪೂರ್ಣ ಸ್ವರಾಜ್ಯದ ಕಲ್ಪನೆಯನ್ನು ಮರಳಿ ನೆನಪಿಸುತ್ತಲೇ ಇರುತ್ತದೆ. ಇತಿಹಾಸ ಕಲಿಸಿದ ಪಾಠವನ್ನು ಮರೆತು ಕೂರುವುದು ಪ್ರಯೋಗಶೀಲ ರಾಷ್ಟ್ರವೊಂದರ ಲಕ್ಷಣವಲ್ಲ ಎಂಬ ಕಾರಣಕ್ಕೆ ಕೆಳದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಅಗಸ್ಟ್ 14 ನ್ನು “ವಿಭಜನ್ ವಿಭಿಶಿಕ ಸ್ಮೃತಿ ದಿವಸ್” ಎಂಬ ಹೆಸರಲ್ಲಿ ಆಚರಿಸುವ ಮೂಲಕ ವಿಭಜನೆ ರಾಷ್ಟ್ರಕ್ಕೆ ಉಂಟು ಮಾಡುವ ಸಮಸ್ಯೆಗಳನ್ನು ತಿಳಿಯುವ ಪ್ರಯತ್ನವಾಗಬೇಕು. ಅಖಂಡತೆ ಬೌದ್ಧಿಕವಾಗಿ ಮೊದಲು ಸಾಧ್ಯವಾಗಿ, ನಂತರ ಭೌಗೋಳಿಕವಾಗಿಯೂ ವಿಸ್ತರಿಸಬೇಕಿದೆ. ನಮ್ಮ ಕಲ್ಪನೆಗಳನ್ನು ವಿರಾಜಮಾನಗೊಳಿಸಿ, ರಾಷ್ಟ್ರದ ದುರಂತಗಳ ಪಾಠಗಳಿಂದ ಕಲಿತು ಮುನ್ನುಗ್ಗಬೇಕಾದ ಅನಿವಾರ್ಯತೆ.
ಅರುಣ್ ಕಿರಿಮಂಜೇಶ್ವರ
ಪುತ್ತೂರು ವಿವೇಕಾನಂದ ಕಾಲೇಜು

3 Comments
Thanks for sharing excellent informations. Your site is so cool. I’m impressed by the details that you have on this web site. It reveals how nicely you understand this subject. Bookmarked this website page, will come back for extra articles. You, my friend, ROCK! I found simply the information I already searched all over the place and simply couldn’t come across. What a perfect web site.
Excellent post. I used to be checking constantly this weblog and I’m inspired! Very helpful info specifically the closing section 🙂 I maintain such info much. I was looking for this certain info for a very long time. Thanks and best of luck.
Yay google is my queen assisted me to find this great site! .