• ಮುಖಪುಟ
  • ಕರಾವಳಿ
    • ದಕ್ಷಿಣ ಕನ್ನಡ
    • ಉಡುಪಿ
    • ಕಾಸರಗೋಡು
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    • ಆರೋಗ್ಯ
    • ಪಾಕ ಶಾಲೆ
    • ಕಲಾಭೂಮಿಕೆ
    • ವಿಶೇಷ ಅಂಕಣ
    • ಸ್ಟೂಡೆಂಟ್ಸ್ ಗ್ಯಾಲರಿ
    • ತುಳು ಚಾವಡಿ
  • ಗ್ಯಾಲರಿ
Facebook Twitter Instagram
  • Advertising
  • Careers
  • Contact Us
Facebook Twitter LinkedIn Pinterest RSS
CitizenLive News
  • ಮುಖಪುಟ
  • ಕರಾವಳಿ
    1. ದಕ್ಷಿಣ ಕನ್ನಡ
    2. ಉಡುಪಿ
    3. ಕಾಸರಗೋಡು
    Featured

    ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

    By newscordinator newscordinator31/05/2020 : 7:35 PM11937
    Recent

    ಪುತ್ತೂರು: ಸಿಂಗಾಣಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

    15/08/2022 : 11:10 AM

    ಮಂಗಳೂರಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

    15/08/2022 : 10:19 AM

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಾಟಿಂಗ್ ಮಾಡುತ್ತಿದ್ದ ಯುವಕ – ಯುವತಿಯ ತೀವ್ರ ತಪಾಸಣೆ

    14/08/2022 : 7:01 PM
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    1. ಆರೋಗ್ಯ
    2. ಪಾಕ ಶಾಲೆ
    3. ಕಲಾಭೂಮಿಕೆ
    4. ವಿಶೇಷ ಅಂಕಣ
    5. ಸ್ಟೂಡೆಂಟ್ಸ್ ಗ್ಯಾಲರಿ
    6. ತುಳು ಚಾವಡಿ
    Featured

    186 ವರ್ಷದ ಬಳಿಕ ಅಂತ್ಯಕ್ರಿಯೆ ನಡೆಸಲ್ಪಟ್ಟ ಮಹಿಳೆ

    By News Editor29/05/2020 : 1:09 AM8495
    Recent

    ಆ ಸಂಭ್ರಮದ ದಿನಗಳು ಇನ್ನೆಲ್ಲಿ…

    23/09/2022 : 10:11 PM

    ಅಖಂಡವಾಗಿದ್ದ ಈ ರಾಷ್ಟ್ರ ತ್ರಿಖಂಡವಾದದ್ದು ಹೇಗೆ..?

    14/08/2022 : 10:08 AM

    ಕೃಷ್ಣನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿ.. ಅಖಂಡ ಭಾರತದ ಕನಸು ನನಸಾಗಲಿ

    14/08/2022 : 9:33 AM
  • ಗ್ಯಾಲರಿ
CitizenLive News
Home » ಸಿ - ಸ್ಪೆಶಲ್ » ಕೃಷ್ಣನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿ.. ಅಖಂಡ ಭಾರತದ ಕನಸು ನನಸಾಗಲಿ
ಸಿ - ಸ್ಪೆಶಲ್

ಕೃಷ್ಣನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿ.. ಅಖಂಡ ಭಾರತದ ಕನಸು ನನಸಾಗಲಿ

News EditorBy News Editor14/08/2022 : 9:33 AMUpdated:14/08/2022 : 9:36 AM3 Comments2 Mins Read

ಭಾರತ ಎಂದಾಗ ಸುಂದರವಾದ ಭೂಪಟವೊಂದು ಕಣ್ಣಮುಂದೆ ಬರುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಚ್’ನಿಂದ ಅರುಣಾಚಲ ಪ್ರದೇಶದವರೆಗೆ ಹರಡಿರಿವ ಮನೋಹರ ಭಾರತವೊಂದು ಎದುರಾಗುತ್ತದೆ. ಆದರೆ ಭಾರತದ ನೈಜ ಸ್ವರೂಪವೇನು…? ಭಾರತ ಎಂದರೆ ಅಷ್ಟೆಯೇ..? ಖಂಡಿತ ಅಲ್ಲ.

ಅಗಣಿತ ವಿಶ್ವವೇ ಭಾರತ ಎಂದು ನಂಬಿದ್ದ ಭಾರತದ ಆಳ ಮತ್ತು ಅಗಲ ಅಪರಿಮಿತ. ಭಾರತವನ್ನು ಅಖಂಡಭಾರತವಾಗಿ ಕಂಡ ಅನೇಕರಿಗೆ ಪ್ರಸ್ತುತ ಭಾರತದ ಭೂಪಟ ಎಷ್ಟೇ ಸುಂದರವಾಗಿದ್ದರೂ ಅದು ರುಚಿಸುವುದಿಲ್ಲ. ಅದಕ್ಕೆ ಅದರದ್ದೇ ಕಾರಣಗಳಿವೆ. ಅಖಂಡ ಭಾರತದಲ್ಲಿ ಭಾರತದ ಅಸ್ಮಿತೆ‌ ಭಾವ ಇದೆ. ವೇದಗಳಲ್ಲಿ ಉಲ್ಲೇಖಿತ ತ್ರಿವಿಷ್ಠಪ ಇಂದು ಚೀನಾ ಆಗಿದೆ. ಗಾಂಧಾರ ಅಪಘಾನಿಸ್ಥಾನ ಆಗಿದೆ. ಕಂಬು ಮುನಿ ಸೃಷ್ಟಿಸಿದ ಎಂದು ಹೇಳವಾಗುವ ಕಾಂಬೋಡಿಯ ಭಾರತದ ಅಖಂಡತೆಗೆ ಸಾಕ್ಷಿ ಅಲ್ಲವೇ. ಸಿಂಧೂ ನದಿಯ ತಟದ ಭೂಮಿ ಎಂದು ಹೇಳಿಕೊಳ್ಳುವ ಸೌಭಾಗ್ಯ ಇಂದಿಗೆ ಭಾರತೀಯರಿಗೆ ಉಳಿದಿಲ್ಲ. ಇನ್ನೂ, ಎಪ್ಪತ್ತೈದು ಶೇಖಡ ಸಿಂಧೂನದಿ ಪಾಕಿಸ್ಥಾನದಲ್ಲಿದೆ.

ಭಾರತದ ಅಂತರಾತ್ಮವಾದ ಶಿವನ ಆವಾಸಸ್ಥಾನ ಕೈಲಾಸ ಪರ್ವತ. ಆದರೆ ಆ ಕೈಲಾಸ ಇಂದು ಚೈನಾ ಕೈಯ್ಯಲ್ಲಿದೆ‌. ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಬುದ್ದ ಭಾರತೀಯ. ಆದರೆ ಇಂದು ಆ ಬುದ್ಧ ಹುಟ್ಟಿದ ಸ್ಥಳ ಭಾರತದಲ್ಲಿಲ್ಲ. ಚೈನ ಬುದ್ದ ಹುಟ್ಟಿದ ಕಾರಣಕ್ಕೆ ಭಾರತವನ್ನು ಆದರಿಸುತ್ತದೆ, ಆದರೆ ಇಂದಿಗೆ ಆ ಲುಂಬಿನಿ ನೇಪಾಳದಲ್ಲಿದೆ. ಜಗತ್ತಿನ ಜನರು ಮಾತನಾಡಲು ಹೆಣಗಾಡುತ್ತಿದ್ದ ಹೊತ್ತಿಗೆ ಭಾರತದ ತಕ್ಷಶಿಲಾ ವಿಶ್ವವಿದ್ಯಾಲಯವು ವಿಶ್ವಕ್ಕೆ ಪಾಠ ಮಾಡುತ್ತಿದ್ದರು. ಆದರೆ ಇಂದು ಆ ಪುಣ್ಯಭೂಮಿ ಭಾರತದಲ್ಲಿಲ್ಲ, ಬದಲಾಗಿ, ಪಾಕಿಸ್ಥಾನದ ಕೈಯ್ಯಲ್ಲಿ ನಲುಗಿ ಹೋಗುತ್ತಿದೆ. ಮಹಾ ಪತಿವ್ರತೆ ಗಾಂಧಾರಿಗೆ ಜನ್ಮ ನೀಡಿದ ಗಾಂಧಾರ ಇಂದು ಅಫ್ಘಾನಿಸ್ಥಾನವಾಗಿ ತನ್ನತನವನ್ನೇ ಕಳೆದುಕೊಂಡು ಕುಳಿತಿದೆ. ಪ್ರಭು ಶ್ರೀರಾಮ ಸೇತುವೆ ಕಟ್ಟಿ ತನ್ನ ಮಡದಿಯನ್ನು ಕಾಪಾಡಿ ಕರೆತಂದ ಮಹಾನ್ ಶಿವ ಭಕ್ತ‌ ರಾವಣನ ಸ್ವರ್ಣ ಲಂಕೆ ಇಂದು ಆರ್ಥಿಕ ಹೊಡತೆದಿಂದ ಒಡೆದು ಹೋಗಿದೆ.

ಇಂತೆಲ್ಲಾ ಪರಿಸ್ಥಿತಿಯಲ್ಲಿ ಅಖಂಡ ಭಾರತದ ಕನಸು ಕಾಣುತ್ತಿರುವ ದೇಶಭಕ್ತ ಹೇಗೆತಾನೆ ಸಂತೋಷದಿಂದಿರಲು ಸಾಧ್ಯ ಹೇಳಿ…. ದೇಶ ದೇಶ ಎಂದು ಹೋರಾಡಿದ ಲಾಲಾ ಲಜಪತ್ ರಾಯರು ತಮ್ಮ ಕೊನೆಯುಸಿರೆಳೆದ್ದು, ಲಾಹೋರ್ ಅಲ್ಲಿ.. ನಂತರದಲ್ಲಿ ಅದೇನಾದರೂ ಭಾರತದಲ್ಲಿ ಇಲ್ಲ ಎಂದು ತಿಳಿದರೆ ಅವರ ಆತ್ಮ ಪಡಬಹುದಾದ ನೋವಾದರೂ ಎಂತಹದ್ದು.. ಒಮ್ಮೆ ಯೋಚಿಸಿ ನೋಡಿ.. ಭಾರತಕ್ಕಾಗಿ ಪ್ರಾಣ ಕೊಟ್ಟ ಭಗತ್ ಸಿಂಗ್ ಹುಟ್ಟಿದ್ದು ಪಾಕಿಸ್ಥಾನದಲ್ಲಿ… ಅವರಿಗೂ ತಾವು ಹುಟ್ಟಿದ ನೆಲದ‌ ಬಗ್ಗೆ ಅಪಾರವಾದ ಗೌರವವಿತ್ತು. ಆದರೆ ಆ ನೆಲ ತಮ್ಮ ಅಂತಸತ್ವವನ್ನೇ ತೊರೆದಿದೆ ಎಂದರೆ ಹೇಗಾಗಬಹುದು… ಕಲ್ಪನೆಗೂ ಅಸಾಧ್ಯವಲ್ಲವೇ..?

ಭಾರತ ಯಾವತ್ತಿಗೂ ಅಖಂಡವೇ ಅದು ಅಖಂಡವಾಗಿಯೇ ಉಳಿಯಬೇಕು, ಬೆಳೆಯಬೇಕು. ಪ್ರಸ್ತುತ ಜಗತ್ತಿನಲ್ಲಿ ಯಾವುದೇ ವೈಪರಿತ್ಯಗಳು ನಡೆಯುತ್ತಿದ್ದರೂ ಭಾರತ ಯಾವತ್ತಿಗೂ ತನ್ನವರ ತನ್ನತನದ ವಿರುದ್ಧ ಹೋಗುವುದಿಲ್ಲ. ಅದು ಭಾರತದ ಶ್ರೇಷ್ಟತೆ. ಇವೆಲ್ಲವುಗಳು ಇಂದು ಭಾರತದ ಭಾಗವಾಗದೆ ಇರಬಹುದು.. ಆದರೆ ಅದು ಯಾವತ್ತಿಗೂ ಭಾರತವೇ…. ಭಗವಾನ್ ಕೃಷ್ಣನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿ.. ಅಖಂಡ ಭಾರತದ ಕನಸು ನನಸಾಗಲಿ.

ಲತೇಶ್ ಸಾಂತ
ವಿ.ವಿ ಕಾಲೇಜು, ಮಂಗಳೂರು

Share. Facebook Twitter Pinterest LinkedIn Tumblr Email
Previous Articleವಿಶ್ವ ಚಾಂಪಿಯನ್‌ಶಿಪ್​ನಿಂದ ಹಿಂದೆ ಸರಿದಿದ ಸಿಂಧು
Next Article ಅಖಂಡವಾಗಿದ್ದ ಈ ರಾಷ್ಟ್ರ ತ್ರಿಖಂಡವಾದದ್ದು ಹೇಗೆ..?

Related Posts

ಇಂಡೋ-ಪಾಕ್ ಪ್ರೇಮ ಕಥೆ – ಪೋಲೀಸರ ಬಲೆಗೆ ಬಿದ್ದ ಇಕ್ರಾ-ಯಾದವ್ ಜೋಡಿ!

24/01/2023 : 1:32 PM

‘ಗೌಜಿ ಗಮ್ಮತ್‌’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ – ಶೀಘ್ರದಲ್ಲೇ ಸಿನಿಮಾ ಬೆಳ್ಳಿತೆರೆಗೆ!

19/01/2023 : 10:54 PM

ಆ ಸಂಭ್ರಮದ ದಿನಗಳು ಇನ್ನೆಲ್ಲಿ…

23/09/2022 : 10:11 PM

3 Comments

  1. PG JOKER on 19/08/2022 : 10:07 AM 10:07 AM

    PG JOKER มีโปรโมชั่นมากมาย ให้คุณได้เลือก สิทธิพิเศษ สำหรับสมาชิกสุดพิเศษของพวกเรา เมื่อลงทะเบียนสมัครสมาชิกใหม่ รับโบนัสโดยทันที ของยอดฝาก เกมสนุกแถมได้เงินไม่อั้น พีจีสล็อต เว็บเดียวเท่านั้น

  2. zorivareworilon on 20/08/2022 : 2:14 PM 2:14 PM

    I’m impressed, I must say. Really rarely do I encounter a weblog that’s both educative and entertaining, and let me inform you, you might have hit the nail on the head. Your concept is outstanding; the difficulty is one thing that not enough persons are speaking intelligently about. I am very joyful that I stumbled throughout this in my search for something regarding this.

  3. adminiodY on 21/08/2022 : 11:25 PM 11:25 PM

    Tegretol Without Prescription online pharmacy stromectol

Copyright © 2019 CitizenLive News | Designed by:
  • About
  • Privacy
  • Contact

Type above and press Enter to search. Press Esc to cancel.