• ಮುಖಪುಟ
  • ಕರಾವಳಿ
    • ದಕ್ಷಿಣ ಕನ್ನಡ
    • ಉಡುಪಿ
    • ಕಾಸರಗೋಡು
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    • ಆರೋಗ್ಯ
    • ಪಾಕ ಶಾಲೆ
    • ಕಲಾಭೂಮಿಕೆ
    • ವಿಶೇಷ ಅಂಕಣ
    • ಸ್ಟೂಡೆಂಟ್ಸ್ ಗ್ಯಾಲರಿ
    • ತುಳು ಚಾವಡಿ
  • ಗ್ಯಾಲರಿ
Facebook Twitter Instagram
  • Advertising
  • Careers
  • Contact Us
Facebook Twitter LinkedIn Pinterest RSS
CitizenLive News
  • ಮುಖಪುಟ
  • ಕರಾವಳಿ
    1. ದಕ್ಷಿಣ ಕನ್ನಡ
    2. ಉಡುಪಿ
    3. ಕಾಸರಗೋಡು
    Featured

    ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

    By newscordinator newscordinator31/05/2020 : 7:35 PM11937
    Recent

    ಪುತ್ತೂರು: ಸಿಂಗಾಣಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

    15/08/2022 : 11:10 AM

    ಮಂಗಳೂರಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

    15/08/2022 : 10:19 AM

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಾಟಿಂಗ್ ಮಾಡುತ್ತಿದ್ದ ಯುವಕ – ಯುವತಿಯ ತೀವ್ರ ತಪಾಸಣೆ

    14/08/2022 : 7:01 PM
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    1. ಆರೋಗ್ಯ
    2. ಪಾಕ ಶಾಲೆ
    3. ಕಲಾಭೂಮಿಕೆ
    4. ವಿಶೇಷ ಅಂಕಣ
    5. ಸ್ಟೂಡೆಂಟ್ಸ್ ಗ್ಯಾಲರಿ
    6. ತುಳು ಚಾವಡಿ
    Featured

    186 ವರ್ಷದ ಬಳಿಕ ಅಂತ್ಯಕ್ರಿಯೆ ನಡೆಸಲ್ಪಟ್ಟ ಮಹಿಳೆ

    By News Editor29/05/2020 : 1:09 AM8495
    Recent

    ಆ ಸಂಭ್ರಮದ ದಿನಗಳು ಇನ್ನೆಲ್ಲಿ…

    23/09/2022 : 10:11 PM

    ಅಖಂಡವಾಗಿದ್ದ ಈ ರಾಷ್ಟ್ರ ತ್ರಿಖಂಡವಾದದ್ದು ಹೇಗೆ..?

    14/08/2022 : 10:08 AM

    ಕೃಷ್ಣನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿ.. ಅಖಂಡ ಭಾರತದ ಕನಸು ನನಸಾಗಲಿ

    14/08/2022 : 9:33 AM
  • ಗ್ಯಾಲರಿ
CitizenLive News
Home » ಸಿ - ಸ್ಪೆಶಲ್ » ಇಂದು ಅಖಂಡ ಭಾರತ ಸಂಕಲ್ಪ ದಿನ
ಸಿ - ಸ್ಪೆಶಲ್

ಇಂದು ಅಖಂಡ ಭಾರತ ಸಂಕಲ್ಪ ದಿನ

News EditorBy News Editor14/08/2022 : 8:46 AMUpdated:14/08/2022 : 8:46 AM2 Comments2 Mins Read

ಆಗಸ್ಟ್ 15ರಂದು ‘ಅಖಂಡ ಭಾರತ ಸಂಕಲ್ಪ ದಿನ’ ವೆಂದು ಆಚರಿಸುತ್ತಾರೆ. ಪ್ರಾಚೀನ ಭಾರತದ ಭಾಗಗಳಾಗಿದ್ದ ಈಗ ಸ್ವತಂತ್ರ ದೇಶಗಳಾಗಿರುವ ಇಂದಿನ ಪಾಕಿಸ್ತಾನ, ಬಾಂಗ್ಲಾ (ಹಾಗೂ ಇತರ) ವನ್ನು ಮತ್ತೆ ಭಾರತದೊಂದಿಗೆ ಸೇರಿಸಲು ಇಂದು ಪ್ರತಿಜ್ಞೆಗೈಯಲಾಗುತ್ತದೆ. ಈ ಆಚರಣೆ ಮೇಲ್ನೋಟಕ್ಕೆ ದೇಶಭಕ್ತಿಯ ಪ್ರತೀಕವೆಂಬಂತೆ ಕಂಡರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುವ ವಿಷಯವೇ ಎಂಬ ಪ್ರಶ್ನೆ ಬರುವುದು ಸುಳ್ಳಲ್ಲ. ಧರ್ಮ ದ್ವೇಷದ ಆಧಾರದ ಮೇಲೆ ವಿಭಜನೆಯಾಗಿರುವ ಈ ದೇಶಗಳು ಮತ್ತೆ ಭಾರತದೊಂದಿಗೆ ಸೇರುವುದು ಖಂಡಿತ ಅಸಂಭವ…. ಒಂದು ವೇಳೆ ಹಾಗೂ ಹೀಗೂ ಅಖಂಡ ಭಾರತ ನಿರ್ಮಾಣವಾದರೆ ಭಾರತದ ಆಂತರಿಕ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಲೇ ಕಷ್ಟವಾಗುತ್ತದೆ.

ಆಗಸ್ಟ್ 15, 1947 ಭಾರತಕ್ಕೆ ಬ್ರಿಟಿಷರಿಂದ ಸ್ವತಂತ್ರ್ಯ ಸಿಕ್ಕಿದ ದಿನವಾದರೂ, ಅದರ ಮೊದಲೇ ಅಖಂಡವಾಗಿದ್ದ ಭಾರತವನ್ನು ಧರ್ಮದ ಆಧಾರದಲ್ಲಿ ಒಡೆಯುವ ಕೆಲಸವನ್ನು ಬ್ರಿಟಿಷರು ಅದಾಗಲೇ ಮಾಡಿ ಬಿಟ್ಟಿದ್ದರು. ಪಾಕಿಸ್ತಾನ, ಬಾಂಗ್ಲಾ ದೇಶ ಮೊದಲಾದ ಭಾರತದ ಭೂ ಭಾಗಗಳನ್ನು ಭಾರತದಿಂದ ಬೇರ್ಪಡಿಸಿ, ಒಡೆದು ಆಳುವ ನೀತಿಯನ್ನು ಅನುಸರಿಸುವ ಮೂಲಕ ಭಾರತವನ್ನು ತುಂಡರಿಸಿ ಹೋಗಿದ್ದರು ಬ್ರಿಟಿಷರು. ನಾಚಿಕೆಗೇಡಿನ ವಿಷಯವೆನೆಂದರೆ, ಇದಕ್ಕೆ ಭಾರತದ ಕೆಲವು ಜನರ ಬೆಂಬಲವೂ ಅವರಿಗೆ ದೊರೆತಿದೆ. ಇಷ್ಟದರೂ, ಇಂದು ಅಂದರೆ ಆಗಸ್ಟ್ 14 ಅಖಂಡ ಭಾರತ ಸಂಕಲ್ಪ ದಿನವನ್ನು ನಾವು ಆಚರಣೆ ಮಾಡುತ್ತಲೇ ಬಂದಿದ್ದೇವೆ.

ತುಂಡು ತುಂಡಾವಾಗಿರುವ ರಾಷ್ಟ್ರವನ್ನು ಮತ್ತೆ ಅಖಂಡ ಭಾರತವಾಗಿ ಮಾಡುವ ಸಂಕಲ್ಪವನ್ನು ಇಂದಿಗೂ ಮಾಡುತ್ತಲೇ ಇದ್ದೇವೆ. ದೇಶದ ಅಖಂಡತೆಯ ಕನಸನ್ನು ಹೊತ್ತು ಮಡಿದ ಅದೆಷ್ಟೋ ದೇಶಪ್ರೇಮಿ ನಾಯಕರಿಗೆ ನ್ಯಾಯ ಸಲ್ಲಿಸುವ ಸಲುವಾಗಿ ಅಖಂಡ ಭಾರತದ ಕನಸನ್ನು ಇಂದಿಗೂ ಹೊತ್ತುಕೊಂಡೇ ಸಾಗುತ್ತಿದ್ದೇವೆ.

ಆದರೆ ವಾಸ್ತವತೆಯ ಬಗ್ಗೆ ಯೋಚಿಸಿದಾಗ ಭಾರತದ ಭಾಗಗಳಾಗಿದ್ದ ಬಳಿಕ ಇಂಗ್ಲಿಷರ ಕುತಂತ್ರಕ್ಕೆ ಒಳಗಾಗಿ ಭಾರತಕ್ಕೆ ಬೆನ್ನಿಗೆ ಚೂರಿ ಹಾಕಿ ದೇಶದ್ರೋಹವೆಸಗಿದ ಹಲವು ಸೋ ಕಾಲ್ಡ್ ನಾಯಕರ ಅಂದಿನ ತಪ್ಪನ್ನು ಅಷ್ಟು ಸುಲಭವಾಗಿ ಸರಿಪಡಿಸುವುದು ಅಸಾಧ್ಯ. ಭಾಗವಾಗಿ ಹರಿದು ಹಂಚಿ ಹೋಗಿ ಇಂದು ಸ್ವತಂತ್ರ ದೇಶಗಳಾಗಿ ಗುರುತಿಸಿ ಕೊಂಡಿರುವ ರಾಷ್ಟ್ರಗಳನ್ನು ಭಾರತದೊಳಕ್ಕೆ ಸೇರಿಸುವುದು ಸುಲಭದ ಮಾತಿಲ್ಲ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನೇ ಅದು ನಮ್ಮದು, ಅದು ಭಾರತಕ್ಕೆ ಸೇರಿದ್ದು ಎಂದು ಎದೆ ತಟ್ಟಿ ಹೇಳಿಕೊಳ್ಳಬೇಕಾದರೆ ನಮಗೆ ಸ್ವಾತಂತ್ರ್ಯ ದೊರಕಿ ಇಷ್ಟು ವರ್ಷಗಳೇ ಹಿಡಿಯಿತು. ಅದಕ್ಕೊಬ್ಬ ಸಮರ್ಥ ನಾಯಕನ ಆಡಳಿತಕ್ಕಾಗಿ ಭಾರತ ಕಾಯಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಹಂಚಿಕೆಯಾಗಿ ಹೋಗಿರುವ ರಾಷ್ಟ್ರಗಳನ್ನು ಅಷ್ಟು ಸುಲಭವಾಗಿ ಹಿಂದೂಸ್ಥಾನಕ್ಕೆ ಸೇರಿಸಿಕೊಳ್ಳುವುದು ಅಂದುಕೊಂಡಷ್ಟು ಆರಾಮವಲ್ಲ.

ಅಖಂಡ ಭಾರತ ನಿರ್ಮಾಣ ನಮ್ಮ ಕನಸೇನೋ ಹೌದು. ಈ ಕನಸಿನ ಮೂಲಕ ಮಡಿದ ನಮ್ಮ ಹಿರಿಯರ ಆಶಯಗಳನ್ನು ಈಡೇರಿಸುವುದು ನಮ್ಮ ಕಾಯಕವಾಗಬೇಕು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಅದು ಆಧ್ಯತೆ, ಅಗತ್ಯತೆ ಎರಡೂ ಹೌದು. ಆದರೆ ಹಲವಾರು ಆಂತರಿಕ, ಬಾಹ್ಯ ಸವಾಲುಗಳ ನಡುವೆ ನಾವು ಈ ನಮ್ಮ ಸಂಕಲ್ಪ ನನ್ನು ಈಡೇರಿಸಲು ಹೇಗೆ ಸಾಧ್ಯ. ಒಂದು ವೇಳೆ ಸಂಕಲ್ಪ ಪೂರೈಸಬಹುದೆಂದಾದಲ್ಲಿ ನಂತರದ ದಿನಗಳಲ್ಲಿ ಭಾರತ ಎದುರಿಸಬೇಕಾದ ಸವಾಲುಗಳ ಬಗ್ಗೆಯೂ ಇಂದಿನ ದಿನಗಳಲ್ಲಿ ನಾವು ಯೋಚಿಸಲೇ ಬೇಕಿದೆ. ಅದು ಅನಿವಾರ್ಯತೆ….

ಏಕೆಂದರೆ 1947ರ ಮೊದಲಿನ ಪರಿಸ್ಥಿತಿಯೂ ಈಗ ಭಾರತದಲ್ಲಿಲ್ಲ. ಜೊತೆಗೆ ಭಾರತ ಪಾಕಿಸ್ತಾನಗಳೆರಡೂ ಆಜನ್ಮ ಶತ್ರುಗಳೆಂದೇ ಬಿಂಬಿಸಿಕೊಂಡಿವೆ. ನರಿ ಬುದ್ಧಿ ಯ ಪಾಕಿಸ್ತಾನದಂತಹ ಅನಾಹುತಕಾರಿ ದೇಶ ಭಾರತದ ಜೊತೆಗೆ ವಿಲೀನವಾದರೆ ನಮ್ಮ ದೇಶ ಉಳಿದೀತೆ.

ನಸೀರ
ಕೊಲಾಸೊ ಪ್ಯಾರಾ ಮೆಡಿಕಲ್ ಕಾಲೇಜು, ಮಂಗಳೂರು

Share. Facebook Twitter Pinterest LinkedIn Tumblr Email
Previous Articleಸ್ವಾತಂತ್ರ್ಯದ ಅಮೃತ ಮಹೋತ್ಸವ; ಮೆಟ್ರೋದಲ್ಲಿ ಉಚಿತ ಪ್ರಯಾಣ
Next Article ವಿಶ್ವ ಚಾಂಪಿಯನ್‌ಶಿಪ್​ನಿಂದ ಹಿಂದೆ ಸರಿದಿದ ಸಿಂಧು

Related Posts

ಇಂಡೋ-ಪಾಕ್ ಪ್ರೇಮ ಕಥೆ – ಪೋಲೀಸರ ಬಲೆಗೆ ಬಿದ್ದ ಇಕ್ರಾ-ಯಾದವ್ ಜೋಡಿ!

24/01/2023 : 1:32 PM

‘ಗೌಜಿ ಗಮ್ಮತ್‌’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ – ಶೀಘ್ರದಲ್ಲೇ ಸಿನಿಮಾ ಬೆಳ್ಳಿತೆರೆಗೆ!

19/01/2023 : 10:54 PM

ಆ ಸಂಭ್ರಮದ ದಿನಗಳು ಇನ್ನೆಲ್ಲಿ…

23/09/2022 : 10:11 PM

2 Comments

  1. zorivareworilon on 20/08/2022 : 11:34 AM 11:34 AM

    Hmm is anyone else experiencing problems with the pictures on this blog loading? I’m trying to determine if its a problem on my end or if it’s the blog. Any feedback would be greatly appreciated.

  2. this link on 27/08/2022 : 2:27 PM 2:27 PM

    Very interesting information!Perfect just what I was searching for!

Copyright © 2019 CitizenLive News | Designed by:
  • About
  • Privacy
  • Contact

Type above and press Enter to search. Press Esc to cancel.