ಗೋಡಂಬಿಯನ್ನು ಅತಿ ಹೆಚ್ಚು ತಿಂದರೆ ಪಿತ್ತ, ಬೊಜ್ಜು ಹೆಚ್ಚುತ್ತದೆ ಎಂಬು ಮಾತು ಸುಳ್ಳು. ಫೈಬರ್, ಕಾರ್ಬೋಹೈಡ್ರೇಟ್, ಮೆಗ್ನಿಶಿಯಂ, ಜಿಂಕ್, ವಿಟಮಿನ್ ಕೆ, ಬಿ6 ಸೇರಿದಂತೆ ಅಪಾರ ಪೋಷಕಾಂಶ ಹೊಂದಿರುವ ಗೋಡಂಬಿ ಸೇವನೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿದೆ. ಡಯಾಬಿಟಿಸ್ ಇದ್ದವರಿಗಂತೂ ಗೋಡಂಬಿ ರಾಮಬಾಣ. ಗೊತ್ತಿರಲಿ.. ಗೋಡಂಬಿಯಲ್ಲಿರುವ ಪೋಷಕಾಂಶಗಳು ಕೇವಲ ದೇಹಕ್ಕೆ ಅಷ್ಟೇ ಅಲ್ಲ, ಚರ್ಮ ಮತ್ತು ತಲೆಗೂದಲ ರಕ್ಷಣೆಗೂ ಸಾಕಷ್ಟು ನೆರವಾಗುತ್ತದೆ.

ಗೋಡಂಬಿಯಲ್ಲಿ ತಾಮ್ರ, ಸತು, ಮೆಗ್ನೀಶಿಯಂ, ಕಬ್ಬಿಣ ಮತ್ತು ರಂಜಕದಂತಹ ಖನಿಜಾಂಶಗಳಿಂದ ಸಮೃದ್ಧವಾಗಿರುತ್ತದೆ. ಇದರ ಜೊತೆಯಲ್ಲಿ ಇದು ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದೆ. ಜತೆಗೆ ಗೋಡಂಬಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಅಧಿಕ ಪ್ರೋಟೀನ್, ಫೈಬರ್ ಮತ್ತು ಕೊಬ್ಬುಗಳಿರುವುದರಿಂದ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

ತೂಕ ಇಳಿಕೆಗೆ ಸಹಾಯಕ
ಕಡಲೆಕಾಯಿ, ಬಾದಾಮಿಗೆ ಹೋಲಿಸಿದರೆ ಗೋಡಂಬಿ ಬೀಜಗಳಲ್ಲಿ ಕೊಬ್ಬು ಮತ್ತು ಕ್ಯಾಲೊರಿ ಅಂಶ ಕಡಿಮೆ. ಹಾಗಾಗಿ ಇದು ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯಕವಾಗಿದೆ. ದೇಹದಕ್ಕೆ ಬೇಕಾದ ವಿಟಮಿನ್, ಕ್ಯಾಲೊರಿಯನ್ನು ಒದಗಿಸುತ್ತದೆ. ಉತ್ತಮ ಫೈಬರ್ಯುಕ್ತವಾಗಿರುವದರಿಂದ ಆರೋಗ್ಯಕ್ಕೆ ಉತ್ತಮ.
ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ
ಎಲ್ಡಿಎಲ್ ಮತ್ತು ಹೆಚ್ಡಿಎಲ್ ಎಂಬ ಎರಡು ಕೊಲೆಸ್ಟ್ರಾಲ್ಗಳನ್ನು ಇದು ಹೊಂದಿದೆ. ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗೋಡಂಬಿಯನ್ನು ಆಹಾರದಲ್ಲಿ ಸೇರಿಸುವುದು ಹೆಚ್ಡಿಎಲ್ ಕೊಲೆಸ್ಟ್ರಾಲ್ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಹೃದಯಕ್ಕೆ ಒಳ್ಳೆಯದು
ವಾರಕ್ಕೆ ನಾಲ್ಕು ಬಾರಿ ಗೋಡಂಬಿಯನ್ನು ಸೇವಿಸುವವರಿಗೆ ಹೃದಯದ ಖಾಯಿಲೆಯ ಅಪಾಯವು ಶೇ.37ರಷ್ಟು ಕಡಿಮೆ. ಗೋಡಂಬಿ ಹೃದಯ ನಾಳದ ಖಾಯಿಲೆಗಳ ಅಪಾಯವನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ.
ಜೀವಕೋಶದ ಹಾನಿಯನ್ನು ತಡೆಗಟ್ಟುತ್ತದೆ
ಗೋಡಂಬಿ ಬೀಜಗಳು ಉತ್ಕರ್ಷಣ ನಿರೋಧಕ ಅಂಶಕ್ಕೆ ಹೆಸರುವಾಸಿಯಾಗಿದೆ. ಅವು ಹಾನಿ ಉಂಟುಮಾಡುವ ಕೋಶಗಳನ್ನು ತಡೆಯಲು ಸಹಾಯ ಮಾಡುತ್ತವಡ. ದೇಹವನ್ನು ರೋಗಗಳಿಂದ ರಕ್ಷಿಸುತ್ತವೆ. ಜತೆಗೆ ಉರಿಯೂತವನ್ನು ಕಡಿಮೆ ಮಾಡುತ್ತವೆ. ಹುರಿದ ಗೋಡಂಬಿ ಹಸಿ ಗೋಡಂಬಿಗಿಂತ ಹೆಚ್ಚಿನ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೊಂದಿದೆ.
ಚರ್ಮಕ್ಕೆ ಒಳ್ಳೆಯದು
ಗೋಡಂಬಿ ಮೆಗ್ನೀಷಿಯಂ, ಝಿಂಕ್, ಕಬ್ಬಿಣ ಹಾಗೂ ಫಾಸ್ಫರಸ್ ಅಂಶ ಹೆಚ್ಚಿರುತ್ತದೆ. ಅಲ್ಲದೆ, ಪ್ರೋಟೀನ್‌ಗಳು ಹಾಗೂ ಸೆಲೆನಿಯಂ ಸೇರಿ ಆ್ಯಂಟಿಆಕ್ಸಿಡೆಂಟ್ಸ್ ಸಹ ಹೆಚ್ಚಿರುತ್ತದೆ.. ಅದರಿಂದ ನಿಮ್ಮ ಚರ್ಮಕ್ಕೆ ಒಳ್ಳೆಯದು. ಜತೆಗೆ, ಗೋಡಂಬಿ ತಿನ್ನುವುದಾಗಲೀ, ಗೋಡಂಬಿ ಎಣ್ಣೆಯನ್ನು ನೆತ್ತಿ ಮೇಲೆ ಹಚ್ಚಿಕೊಳ್ಳುವುದರಿಂದ ಚರ್ಮ ಹಾಗೂ ಕೂದಲಿಗೆ ಮೆಲಾನಿನ್ ಪಿಗ್ಮೆಂಟ್ ಉತ್ಪತ್ತಿಯಾಗಲು ನೆರವಾಗುತ್ತದೆ. ಇನ್ನೊಂದೆಡೆ, ಕೂದಲಿಗೆ ನಯವಾದ ವಿನ್ಯಾಸವನ್ನೂ ಇದು ನೀಡುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಗೋಡಂಬಿ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಗೋಡಂಬಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಹೀಗಾಗಿ ಇದು ನಿಧಾನವಾಗಿ ಮತ್ತು ಸ್ಥಿರವಾಗಿ ಗ್ಲುಕೋಸ್ಅನ್ನು ಬಿಡುಗಡೆ ಮಾಡುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳವನ್ನು ತಡೆಯಲು ಸಹಾಯಕ.
ಕಣ್ಣಿಗೆ ಸೋಂಕು ಹರಡದಂತೆ ತಡೆಯಲು ಸಹಾಯ ಮಾಡುತ್ತದೆ
ವಾತಾವರಣದಲ್ಲಿ ಹೆಚ್ಚು ಮಾಲಿನ್ಯವಿದ್ದರೂ ಸಹ ಗೋಡಂಬಿಯನ್ನುತಿನ್ನುವುದರಿಂದ ಕಣ್ಣಿಗೆ ಸೋಂಕು ಬರದಂತೆ ತಡೆಯುತ್ತದೆ. ಯಾಕೆಂದರೆ ಇದು ಪ್ರಬಲ ಆ್ಯಂಟಿಆಕ್ಸಿಡೆಂಟ್ ಪಿಗ್ಮೆಂಟ್ ಹೊಂದಿದೆ. ಹೀಗಾಗಿ, ರೆಟಿನಾ ಮೇಲೆ ರಕ್ಷಣಾತ್ಮಕ ಪದರವನ್ನು ಸೃಷ್ಟಿ ಮಾಡಲಿದ್ದು, ಇದರಿಂದ ಹಾನಿಕರ ಯುವಿ ಕಿರಣಗಳನ್ನು ತಡೆಯುತ್ತದೆ.
7 Comments
Новые танцы 6 выпуск
paypal log in, komoot американские истории ужасов смотреть онлайн в хорошем
вк, airbnb
airbnb, hardwaredealz американская история ужасов 8 coinbase, hd filme
Цены на услуги и консультации психолога.
Психолог Онлайн
Консультация психолога онлайн.
Услуги консультации психолога.
Профессиональные психологи.
Консультация психолога. Услуги аналитического психолога,
психотерапевта. Онлайн-консультация у
психолога.
Миллиарды 6 сезон 1 серия
Смотреть кино, сериалы, мультфильмы
все сезоны и серии подряд лучшие фильмы 2021 дюна смотреть онлайн
смотреть популярные фильмы 2021-2021 года легально онлайн
I enjoy browsing your websites. With thanks! http://multiessay.com