ಮೊಟ್ಟೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮೊಟ್ಟೆ ಎನ್ನುವುದು ಸಂಪೂರ್ಣ ಆಹಾರಗಳಲ್ಲಿ ಒಂದು. ಇದರಲ್ಲಿ ಇರುವ ಸೆಲೆನಿಯಮ್ ಡಿ, ಬಿ6, ಬಿ12, ಸತು, ಕಬ್ಬಿಣ ಮತ್ತು ತಾಮ್ರದಂತಹ ಖನಿಜಗಳನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ಮೊಟ್ಟೆಯಲ್ಲಿ ಇರುವ ಹಳದಿ ಲೋಳೆಯು ಬಿಳಿ ಲೋಳೆಗಳಿಗಿಂತ ಹೆಚ್ಚು ಕ್ಯಾಲೋರಿ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಅವು ವಿಟಮಿನ್ ಎ, ಡಿ, ಇ ಮತ್ತು ಕೆ ಅನ್ನು ಒಳಗೊಂಡಿದೆ. ಇನ್ನೂ ಈ ಮೊಟ್ಟೆಗಳ ಸೇವನೆಯನ್ನು ವಿವಿಧ ಬಗೆಯಲ್ಲಿ ಮಡಲಾಗುವುದು. ಇತರ ನೈಸರ್ಗಿಕ ಆಹಾರ ಪದಾರ್ಥಗಳೊಂದಿಗೆ ಇದನ್ನು ಬೆರೆಸಿ ಸವಿಯುವುದು. ಕಚ್ಚಾ ಮೊಟ್ಟೆಯನ್ನು ಬೇಯಿಸಿ ತಿನ್ನುವುದು ಅಥವಾ ಮೊಟ್ಟೆಯ ರಸವನ್ನು ನೇರವಾಗಿ ಇತರ ಆಹಾರ ಪದಾರ್ಥಗಳಲ್ಲಿ ಬಳಸುವುದು ಮಾಡಲಾಗುತ್ತದೆ. ಇದರಲ್ಲಿ ಎಗ್ ಚಿಲ್ಲಿಯೂ ಒಂದು. ಚಪಾತಿ, ಅನ್ನ ಜೊತೆ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ. ನೀವು ಎಗ್ ಚಿಲ್ಲಿ ಪ್ರಿಯರಾಗಿದ್ದರೆ, ನಿಮ್ಮಿಷ್ಟದ ಎಗ್ ಚಿಲ್ಲಿ ರೆಸಿಪಿಯನ್ನು ಸುಲಭದಲ್ಲಿ ಮಾಡಬಹುದಾಗಿದ್ದು, ವಿಧಾನ ಇಲ್ಲಿದೆ ನೋಡಿ..

ಬೇಕಾಗುವ ಪದಾರ್ಥಗಳು:
ಮೊಟ್ಟೆ 4 ರಿಂದ 6
ಹಸಿಮೆಣಸು 5
ಈರುಳ್ಳಿ 3
ಶುಂಠಿ ಸ್ವಲ್ಪ
ಕ್ಯಾಪ್ಸಿಕಮ್ (ದೊಣ್ಣೆ ಮೆಣಸು)1
ಬೆಳ್ಳುಳ್ಳಿ 1
ಚಿಲ್ಲಿ ಸಾಸ್ 2ಚಮಚ
ಸೋಯಾ ಸಾಸ್ 2ಚಮಚ
ಟೊಮೇಟೊ 1
ಕಾನ್‌ಫ್ಲೋರ್ 2 ಚಮಚ
ಎಣ್ಣೆ
ಕೊತ್ತಂಬರಿ ಸೊಪ್ಪು
ಉಪ್ಪು

ಮಾಡುವ ವಿಧಾನ:
ಮೊಟ್ಟೆ ಬೇಯಿಸಿಕೊಂಡು ನಂತರ ಮೇಲಿನ ಸಿಪ್ಪೆ ಬಿಡಿಸಿ ನಾಲ್ಕು ಭಾಗ ಮಾಡಿಕೊಂಡು ಇಟ್ಟುಕೊಳ್ಳಿ. ಈರುಳ್ಳಿ ಸಣ್ಣಗೆ ಹೆಚ್ಚಿಕೊಳ್ಳಬೇಕು. ಶುಂಠಿ ,ಬೆಳ್ಳುಳ್ಳಿ ನುಣ್ಣಗೆ ಅರೆದು ಪೇಸ್ಟ್ ಮಾಡಿಕೊಳ್ಳಿ. ಕ್ಯಾಪ್ಸಿಕಮ್ ಉದ್ದಕ್ಕೆ ಹೆಚ್ಚಿಕೊಳ್ಳಿ. ಒಂದು ಪಾತ್ರೆಯಲ್ಲಿ ಕಾನ್‌ಫ್ಲೋರ್ ಉಪ್ಪು, ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.
ನಂತರ ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಕಾಯಲು ಇಡಿ. ತುಂಡು ಮಾಡಿಟ್ಟ ಮೊಟ್ಟೆಯನ್ನು ಕಾನ್‌ಫ್ಲೋರ್ ಹಿಟ್ಟಿನಲ್ಲಿ ಮುಳುಗಿಸಿ ಬಿಸಿಯಾಗಿರುವ ಎಣ್ಣೆಗೆ ಹಾಕಿ. ಕೆಂಪಗೆ ಕರಿದು ತೆಗೆದು ಇಟ್ಟುಕೊಳ್ಳಿ. ನಂತರ ಬೇರೆ ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿರುವ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ತದನಂತರ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಹುರಿಯಿರಿ. ಹಸಿ ಮೆಣಸಿನ ಕಾಯಿ, ಕ್ಯಾಪ್ಸಿಕಮ್, ಟೊಮೇಟೊ ಸೇರಿಸಿ. ಫ್ರೈ ಮಾಡಿರುವ ಮೊಟ್ಟೆಯನ್ನು ಸೇರಿಸಿ. ಸೋಯಾ ಸಾಸ್, ಚಿಲ್ಲಿ ಸಾಸ್ ಹಾಕಿ ಎರಡು ನಿಮಿಷಗಳ ಕಾಲ ಫ್ರೈ ಮಾಡಿ. ಉಪ್ಪು ಸೇರಿಸಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಈರುಳ್ಳಿ ಹೂ ಸಣ್ಣಗೆ ಹೆಚ್ಚಿ ಹಾಕಿ. ಸ್ವಲ್ಪ ನೀರು ಹಾಕಿ ಕುದಿಸಿರಿ. ಬಿಸಿ-ಬಿಸಿ ಎಗ್ ಚಿಲ್ಲಿ ಸವಿಯಲು ಸಿದ್ಧ.
1 Comment
free chat online singles
local milfs