ಪ್ರತಿಯೊಬ್ಬರು ಬೊಜ್ಜು ಕರಗಿಸಿಕೊಂಡು, ಸಮತೋಲಿತ ತೂಕ ಪಡೆಯಲು ಬಯಸುವರು. ಇಂತಹ ಸಂದರ್ಭದಲ್ಲಿ ಕೆಲವರು ಕಠಿಣ ವ್ಯಾಯಾಮ ಹಾಗೂ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುವರು. ಸರಿಯಾದ ರೀತಿಯಲ್ಲಿ ಬದ್ಧತೆಯಿಂದ ಇದನ್ನು ಮಾಡಿಕೊಂಡು ಹೋದರೆ, ಆಗ ಖಂಡಿತವಾಗಿಯೂ ದೇಹದ ತೂಕ ಇಳಿಸಲು ಇದು ಸಹಕಾರಿ ಆಗಿರುವುದು. ನಾವು ಪ್ರತಿನಿತ್ಯವೂ ಬಳಸುವಂತಹ ಹಣ್ಣು ಹಾಗೂ ತರಕಾರಿಗಳು ಕೂಡ ದೇಹದ ತೂಕ ಇಳಿಸಲು ನೆರವಾಗಲಿದೆ. ನಾವು ಈ ಲೇಖನದಲ್ಲಿ ದೇಹದ ತೂಕ ಇಳಿಸಲು ಸಹಕಾರಿಯಾಗಬಲ್ಲ ಕೆಲವು ಹಣ್ಣುಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.
ಕೊಬ್ಬು ಕರಗಿಸುವ ಹಣ್ಣುಗಳು ಹೇಗೆ ನೆರವಾಗುವುದು?
- ಕೊಬ್ಬು ದೇಹಕ್ಕೆ ಶತ್ರು ಎನ್ನುವುದು ನಮಗೆಲ್ಲರಿಗೂ ತಿಳಿದೇ ಇರುವಂತಹ ವಿಚಾರ. ನೈಸರ್ಗಿಕವಾಗಿ ಕೊಬ್ಬು ಕರಗಿಸುವಂತಹ ಕೆಲವೊಂದು ಆಹಾರಗಳು ದೇಹದಲ್ಲಿ ಕೊಬ್ಬು ಶೇಖರಣೆ ಆಗದಂತೆ ನೋಡಿಕೊಳ್ಳುವುದು.
- ಇದು ಚಯಾಪಚಯ ನಿಧಾನವಾಗಿಸುವುದು, ಹಸಿವು ಮತ್ತು ಹಾರ್ಮೋನ್ ಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದನ್ನು ಸರಿಪಡಿಸುವುದು.
- ದೇಹವು ಕೊಬ್ಬನ್ನು ಕರಗಿಸಿ, ಶಕ್ತಿಯನ್ನಾಗಿ ಮಾಡುವ ಕ್ರಿಯೆಯನ್ನು ಚಯಾಪಚಯ ಎಂದು ಕರೆಯಲಾಗುತ್ತದೆ. ಕೊಬ್ಬು ಕರಗಿಸುವ ಕ್ರಿಯೆಯು ತುಂಬಾ ನಿಧಾನವಾದರೆ ಆಗ ದೇಹದಲ್ಲಿ ಕೊಬ್ಬು ಜಮೆ ಆಗುವುದು. ಕೊಬ್ಬು ಕರಗಿಸುವಂತಹ ಹಣ್ಣುಗಳು ಚಯಾಪಚಯ ವದ್ದಿ ಮಾಡುವುದು ಹಾಗೂ ಅದೇ ರೀತಿಯಲ್ಲಿ ಕೊಬ್ಬು ಕೂಡ ಕಡಿಮೆ ಮಾಡುವುದು.
- ಆಹಾರ ಸೇವನೆಯು ತುಂಬಾ ಕಡಿಮೆ ಅಂತರದಲ್ಲಿದ್ದರೆ, ಆಗ ಇದು ದೇಹದಲ್ಲಿ ಕೊಬ್ಬು ವಿಘಟಿಸಲು ಕಷ್ಟಪಡುವುದು. ಹಣ್ಣು ಮತ್ತು ಇತರ ಕೆಲವು ಕೊಬ್ಬು ಕರಗಿಸುವಂತಹ ಆಹಾರಗಳು ಹಸಿವನ್ನು ಕಡಿಮೆ ಮಾಡುವುದು ಹಾಗೂ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುವುದು. ನೀವು ಕಡಿಮೆ ಆಹಾರ ಸೇವನೆ ಮಾಡಿದ ವೇಳೆ ದೇಹಕ್ಕೆ ಕ್ಯಾಲರಿ ಕಡಿಮೆ ಸಿಗುವುದು ಹಾಗೂ ತೂಕ ಇಳಿಸಲು ಇದು ಸಹಕಾರಿ.
- ಅಧಿಕ ಮಟ್ಟದ ಈಸ್ಟ್ರೋಜನ್ ಮತ್ತು ಕಡಿಮೆ ಮಟ್ಟದ ಪ್ರೊಜೆಸ್ಟೆರಾನ್ ಅಂಶವು ಕೂಡ ಚಯಾಪಚಯ ಉತ್ತೇಜಿಸುವ ಪರಿಣಾಮವಾಗಿ ದೇಹದ ತೂಕದಲ್ಲಿ ಹೆಚ್ಚಳವಾಗುವುದು. ಎಲ್ಲಾ ಆಹಾರಗಳು ಚಯಾಪಚಯವನ್ನು ವೃದ್ಧಿಸುವುದು ಎನ್ನುವುದನ್ನು ಒಪ್ಪಿಕೊಳ್ಳಬೇಕಾದ ವಿಚಾರ.

ಕೊಬ್ಬು ಕರಗಿಸಬಲ್ಲ ಹಣ್ಣುಗಳು:
ದೇಹದ ತೂಕ ಇಳಿಸುವ ಸಂದರ್ಭದಲ್ಲಿ ಆಹಾರ ಕ್ರಮದಲ್ಲಿ ನೀರಿನಾಂಶ, ರಸವತ್ತಾಗಿರುವ ಹಾಗೂ ರುಚಿಕರವಾಗಿ ಇರುವಂತಹ ಕೆಲವೊಂದು ಹಣ್ಣುಗಳನ್ನು ಸೇವನೆ ಮಾಡಬೇಕು. ಇವುಗಳಲ್ಲಿ ನೈಸರ್ಗಿಕ ಸಕ್ಕರೆ ಮಟ್ಟವು ಉತ್ತಮ ಪ್ರಮಾಣದಲ್ಲಿದ್ದು, ಇದು ಹೊಟ್ಟೆ ತುಂಬಿದಂತೆ ಮಾಡುವುದು. ಅಧಿಕ ನಾರಿನಾಂಶ ಮತ್ತು ಪೆಕ್ಟಿನ್ ಹೊಂದಿರುವ ಇದು ಚಯಾಪಚಯ ವೃದ್ಧಿಸಲು ಸಹಕಾರಿ. ಹಣ್ಣಗಳಲ್ಲಿ ಉನ್ನತ ಮಟ್ಟದ ಫ್ಲಾವನಾಯ್ಡ್ ಎನ್ನುವ ಆಂಟಿಆಕ್ಸಿಡೆಂಟ್ ಗಳಿದ್ದು, ಇದು ಉರಿಯೂತ ಶಮನಕಾರಿ ಕೂಡ ಆಗಿದೆ. ಇವುಗಳಲ್ಲಿ ಕೊಬ್ಬಿನ ಪ್ರಮಾಣವು ತುಂಬಾ ಕಡಿಮೆ ಇದ್ದು, ಇದರಿಂದಾಗಿ ವ್ಯಕ್ತಿಯೊಬ್ಬ ಸೇವನೆ ಮಾಡುವ ಕ್ಯಾಲರಿ ಮಟ್ಟವು ಹೆಚ್ಚಾಗುವುದು. ಎಲ್ಲಾ ಹಣ್ಣುಗಳಲ್ಲಿ ಭಿನ್ನ ಭಿನ್ನ ಅಂಶಗಳಿದ್ದು, ಇದರಿಂದ ದೇಹಕ್ಕೆ ಪೋಷಣೆ ಕೂಡ ಸಿಗುವುದು. ಕೆಲವು ಹಣ್ಣುಗಳಲ್ಲಿ ಕೊಬ್ಬು ಕರಗಿಸುವ ಗುಣವಿದ್ದು, ಆ ಹಣ್ಣುಗಳು ಇಲ್ಲಿವೆ.
ಅವಕಾಡೊ
ಅವಕಾಡೊವು ಒಂದು ವಿಶಿಷ್ಠ ಬಗೆಯ ಹಣ್ಣಾಗಿದ್ದು, ಹೆಚ್ಚಿನ ಹಣ್ಣುಗಳಲ್ಲಿ ಕಾರ್ಬ್ಸ್ ಇದ್ದರೆ, ಇದರಲ್ಲಿ ಆರೋಗ್ಯಕಾರಿ ಕೊಬ್ಬು ಇದೆ. ಅವಕಾಡೊದಲ್ಲಿ ಕೊಬ್ಬು ಮಾತ್ರವಲ್ಲದೆ, ನಾರಿನಾಂಶ ಹಾಗೂ ನೀರಿನಾಂಶವು ಉತ್ತಮ ಪ್ರಮಾಣದಲ್ಲಿದೆ. ಅವಕಾಡೊವು ತರಕಾರಿಗಳಲ್ಲಿ ಇರುವಂತಹ ಕ್ಯಾರೊಟೆನಾಯ್ಡ್ ಆಂಟಿಆಕ್ಸಿಡೆಂಟ್ ನ ಹೀರುವಿಕೆಯನ್ನು ಶೇ.2.6ರಿಂದ 15 ಪಟ್ಟು ಹೆಚ್ಚು ಮಾಡುವುದು ಎಂದು ಅಧ್ಯಯನಗಳು ಹೇಳಿವೆ.
ಕಲ್ಲಗಂಡಿ
ಕಲ್ಲಂಗಡಿಯನ್ನು ತೂಕ ಇಳಿಸುವ ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ, ತುಂಬಾ ಲಾಭಕಾರಿ. ಇದರಲ್ಲಿ ಕೇವಲ 30 ಕ್ಯಾಲರಿ ಮಾತ್ರ ಇದೆ. ಹೆಚ್ಚಿನ ಪ್ರಮಾಣದಲ್ಲಿ ನೀರಿನಾಂಶವನ್ನು ಹೊಂದಿರುವ ಇದು ಹೊಟ್ಟೆ ತುಂಬಿದಂತೆ ಮಾಡಿ, ಹಸಿವು ಕಡಿಮೆ ಮಾಡುವುದು ಹಾಗೂ ನಿರ್ಜಲೀಕರಣ ತಡೆಯುವುದು. ಅರ್ಜಿನೈನ್ ಎನ್ನುವ ಅಮಿನೋ ಆಮ್ಲವು ಕಲ್ಲಂಗಡಿಯಲ್ಲಿದ್ದು, ಕೊಬ್ಬು ಕರಗಿಸಲು ಸಹಕಾರಿ.

ಪೇರಳೆ ಅಥವಾ ಸೀಬೆ ಹಣ್ಣು
ಪೇರಳೆ ಹಣ್ಣಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಇದ್ದು, ಮಧುಮೇಹಿಗಳು ಹಾಗೂ ತೂಕ ಇಳಿಸಲು ಬಯಸುವವರಿಗೆ ಸಹಕಾರಿ. ನಾರಿನಾಂಶವು ಉತ್ತಮ ಪ್ರಮಾಣದಲ್ಲಿ ಇರುವ ಈ ಹಣ್ಣು, ಮಲಬದ್ಧತೆ ನಿವಾರಣೆ ಮಾಡಿ, ಚಯಾಪಚಯ ಕ್ರಿಯೆಯನ್ನು ಸಕ್ರಿಯಗೊಳಿಸುವುದು.
ಪಿಯರ್
ವಿಟಮಿನ್ ಸಿ ಮತ್ತು ನಾರಿನಾಂಶ ಹೊಂದಿರುವಂತಹ ಪಿಯರ್ ಹಣ್ಣು ನಿಧಾನವಾಗಿ ಜೀರ್ಣವಾಗುವುದು. ಇದರಿಂದ ಹೊಟ್ಟೆ ತುಂಬಿರುವಂತೆ ಆಗುವುದು. ಇದು ಕೊಲೆಸ್ಟ್ರಾಲ್ ನ್ನು ನಿಯಂತ್ರಣದಲ್ಲಿ ಇಟ್ಟು, ದೇಹದ ತೂಕ ಕಾಪಾಡುವುದು.
ಕಿತ್ತಳೆ
ಕಡಿಮೆ ಕ್ಯಾಲರಿ ಹೊಂದಿರುವಂತಹ ವಿಟಮಿನ್ ಸಿ ಹೊಂದಿರುವ ಕಿತ್ತಳೆಯು ತೂಕ ಇಳಿಸಲು ತುಂಬಾ ಸಹಕಾರಿ. ಒಂದು ಸಾಮಾನ್ಯ ಕಿತ್ತಳೆಯಲ್ಲಿ 47 ಕ್ಯಾಲರಿ ಇದೆ. ಇದು ದೇಹವು ದಹಿಸುವ ಕ್ಯಾಲರಿಗಿಂತಲೂ ಕಡಿಮೆ ಇದೆ. ಹೀಗಾಗಿ ಇದನ್ನು ಕ್ಯಾಲರಿ ನಗಣ್ಯವಾಗಿರುವ ಹಣ್ಣು ಎಂದು ಕರೆಯುವರು. ಹೆಚ್ಚಾಗಿ ಇದರ ಜ್ಯೂಸ್ ನಿಂದಲೇ ಕೆಲವರು ದಿನದ ಆರಂಭ ಮಾಡುವರು.
ಸ್ಟ್ರಾಬೆರ್ರಿ
ಸ್ಟ್ರಾಬೆರ್ರಿಯಲ್ಲಿ ಆಂಥೋಸಯಾನಿನ್ಸ್ ಅಂಶವು ಉತ್ತಮ ಪ್ರಮಾಣದಲ್ಲಿದ್ದು, ಇದು ದೇಹದಲ್ಲಿ ಅಡಿಪೋನೆಕ್ಟಿನ್ ಹಾರ್ಮೋನ್ ನ ಉತ್ಪತ್ತಿಯನ್ನು ಉತ್ತಮಪಡಿಸುವುದು. ಅಡಿಪೋನೆಕ್ವಿನ್ ಹಾರ್ಮೋನ್ ಚಯಾಪಚಯ ವೃದ್ಧಿ ಮಾಡುವುದು ಮತ್ತು ತೂಕ ಇಳಿಸಲು ಇದು ಸಹಕಾರಿ. ತೂಕ ಇಳಿಸಲು ಮಾತ್ರವಲ್ಲದೆ, ಸ್ಟ್ರಾಬೆರ್ರಿಯಲ್ಲಿ ವಿಟಮಿನ್ ಸಿ ಅಂಶವಿದ್ದು, ಇದು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು.

ಈ ಹಣ್ಣುಗಳನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡುವುದು ಹೇಗೆ?
ಈ ಹಣ್ಣುಗಳನ್ನು ಹಾಗೆ ನೀವು ಸೇವನೆ ಮಾಡಬಹುದು. ಇದನ್ನು ತಿಂಡಿಯ ಬದಲಿಗೆ ಸೇವನೆ ಮಾಡಿ. ಇದನ್ನು ಬೆಳಗ್ಗೆ ಉಪಾಹಾರದ ಜತೆಗೆ ಸೇವನೆ ಮಾಡಬಹುದು ಅಥವಾ ಸಲಾಡ್ ರೂಪದಲ್ಲೂ ಬಳಸಬಹುದು. ಇದರಲ್ಲಿ ನೈಸರ್ಗಿಕ ಸಕ್ಕರೆ ಅಂಶವು ಉತ್ತಮವಾಗಿರುವ ಕಾರಣದಿಂದಾಗಿ ಇದು ಚಾಕಲೇಟಿಗೆ ಒಳ್ಳೆಯ ಪರ್ಯಾಯವಾಗಿರಲಿದೆ. ದೇಹವನ್ನು ಯಾವಾಗಲೂ ಹೈಡ್ರೇಟ್ ಆಗಿಡುವುದು ಅತೀ ಅಗತ್ಯ. ನೀವು ಹಣ್ಣಿನ ಬದಲು ಜ್ಯೂಸ್ ಕುಡಿದರೆ, ಅದರಲ್ಲಿ ನಾರಿನಾಂಶವು ಕಡಿಮೆ ಆಗುವುದು. ನಾರಿನಾಂಶವು ಹಸಿವಿನ ಮೇಲೆ ಪ್ರಮುಖ ಪಾತ್ರ ವಹಿಸುವುದು.
3 Comments
Дом Гуччи смотреть онлайн 2021
http://buysildenshop.com/ – Viagra
Дизайн человека