ಕಣ್ಣಿಗೆ ಕಾಣುವ ದೇವರು ನಾನಂತೆ
ನನಗಾರತಿಯಿಲ್ಲ, ಕೀರುತಿಯಿಲ್ಲ
ನನಪಾಲಿನದೊಂದೆ ಸಾಲದ ಕಂತೆ
ನೀನರಿಯೆ ಈ ಬರಿಗೈ ಅಪ್ಪನ ಕತೆ
ಜೋಗುಳ ಹಾಡಲಿಲ್ಲ ನಾನು
ಗಡಸು ಧ್ವನಿಗೆ ಹೆದರುವೆ ಎಂದು
ಆದರೂ ನಿನ್ನ ತೂಗದೆ ಬಿಟ್ಟಿಲ್ಲ
ನಿನ್ನ ನಿದ್ರೆಗೆ ಕಾವಲು ಕಾದಿರುವೆ
ನಿನ್ನ ಮೊದಲ ಹೆಜ್ಜೆಗೆ ಕೈ ನೀಡಲಿಲ್ಲ
ನೀನೇ ನಡೆಯುತ್ತಿ ಎಂಬ ಒಲವಿನಿಂದ
ನಿನ್ನ ಒಬ್ಬನೇ ನಡೆಯಲು ಬಿಟ್ಟಿಲ್ಲ
ಆದರೆ ನೀ ಬಿದ್ದಾಗ ಮೇಲೆತ್ತಿರುವೆನಲ್ಲ
ಮುದ್ದಿಸಿ ತಲೆಸವರಿಲ್ಲ ನಾನು
ನಿನ್ನ ಕಾಲಲ್ಲಿ ನೀ ನಿಲ್ಲಲೆಂದು
ಆದರೂ ಕೂಸುಮರಿ ಮಾಡಿರುವೆ
ನಿನ್ನ ತಲೆತ್ತಗಿಸಲು ಬಿಟ್ಟಿಲ್ಲ…
ಆದರೂ ನನಗೆ ನಿನ್ನ ಗುಡಿಯಿಲ್ಲ
ಗುಡಿಯನ್ನು ನಾ ಬಯಸಿಲ್ಲ
ಆದರೂ ನಾ ನಿನ್ನ ನಗಿಸದೆ ಇರಲಿಲ್ಲ
ನಿನ್ನ ಅಳಿಸದೆ, ಬೆಳಿವಂತೆ ಮಾಡಿದೆ
ಕವನ: ಶಿವಪ್ರಸಾದ್ ಬೋಳಂತೂರು
2 Comments
Thanks for sharing, this is a fantastic blog article.Really thank you!
I value the blog article.Really looking forward to read more.