• ಮುಖಪುಟ
  • ಕರಾವಳಿ
    • ದಕ್ಷಿಣ ಕನ್ನಡ
    • ಉಡುಪಿ
    • ಕಾಸರಗೋಡು
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    • ಆರೋಗ್ಯ
    • ಪಾಕ ಶಾಲೆ
    • ಕಲಾಭೂಮಿಕೆ
    • ವಿಶೇಷ ಅಂಕಣ
    • ಸ್ಟೂಡೆಂಟ್ಸ್ ಗ್ಯಾಲರಿ
    • ತುಳು ಚಾವಡಿ
  • ಗ್ಯಾಲರಿ
Facebook Twitter Instagram
  • Advertising
  • Careers
  • Contact Us
Facebook Twitter LinkedIn Pinterest RSS
CitizenLive News
  • ಮುಖಪುಟ
  • ಕರಾವಳಿ
    1. ದಕ್ಷಿಣ ಕನ್ನಡ
    2. ಉಡುಪಿ
    3. ಕಾಸರಗೋಡು
    Featured

    ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

    By newscordinator newscordinator31/05/2020 : 7:35 PM11937
    Recent

    ಪುತ್ತೂರು: ಸಿಂಗಾಣಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

    15/08/2022 : 11:10 AM

    ಮಂಗಳೂರಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

    15/08/2022 : 10:19 AM

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಾಟಿಂಗ್ ಮಾಡುತ್ತಿದ್ದ ಯುವಕ – ಯುವತಿಯ ತೀವ್ರ ತಪಾಸಣೆ

    14/08/2022 : 7:01 PM
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    1. ಆರೋಗ್ಯ
    2. ಪಾಕ ಶಾಲೆ
    3. ಕಲಾಭೂಮಿಕೆ
    4. ವಿಶೇಷ ಅಂಕಣ
    5. ಸ್ಟೂಡೆಂಟ್ಸ್ ಗ್ಯಾಲರಿ
    6. ತುಳು ಚಾವಡಿ
    Featured

    186 ವರ್ಷದ ಬಳಿಕ ಅಂತ್ಯಕ್ರಿಯೆ ನಡೆಸಲ್ಪಟ್ಟ ಮಹಿಳೆ

    By News Editor29/05/2020 : 1:09 AM8495
    Recent

    ಆ ಸಂಭ್ರಮದ ದಿನಗಳು ಇನ್ನೆಲ್ಲಿ…

    23/09/2022 : 10:11 PM

    ಅಖಂಡವಾಗಿದ್ದ ಈ ರಾಷ್ಟ್ರ ತ್ರಿಖಂಡವಾದದ್ದು ಹೇಗೆ..?

    14/08/2022 : 10:08 AM

    ಕೃಷ್ಣನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿ.. ಅಖಂಡ ಭಾರತದ ಕನಸು ನನಸಾಗಲಿ

    14/08/2022 : 9:33 AM
  • ಗ್ಯಾಲರಿ
CitizenLive News
Home » ಸಿ - ಸ್ಪೆಶಲ್ » ಹನಿಮಳೆ…. ಜೊತೆಗೆ ನೆನಪುಗಳ ಹಾಳೆ..!
ಸಿ - ಸ್ಪೆಶಲ್

ಹನಿಮಳೆ…. ಜೊತೆಗೆ ನೆನಪುಗಳ ಹಾಳೆ..!

News EditorBy News Editor04/08/2022 : 12:08 PMUpdated:04/08/2022 : 12:08 PM8 Comments4 Mins Read

ಪೆನ್ನು ಹಾಳೆ ಹಿಡಿದು ಬೆಟ್ಟದ ಕಡೆ ಹೊರಟಿದ್ದೇನೆ. ಬೆಟ್ಟದ ಕಡೆ ಹೋದಾಗ ಕಾಲುಗಳು ಭಾರವಾಗುತ್ತವೆ ನಿಜ, ಆದರೆ ಮನಸ್ಸು ಹಗುರವಾಗುತ್ತೆ. ಅಲ್ಲಿ ಬೀಸುವ ಗಾಳಿಗೆ ಯಾವ ನೋವೂ ಹೆಚ್ಚು ಕಾಲ ಉಳಿಯುವುದಿಲ್ಲ. ಅವಳಂತೂ ಜೊತೆಗಿಲ್ಲ ಅವಳ ನೆನಪುಗಳಾದರೂ ಇರಲಿ ಎಂದು ಬರೆಯುತ್ತಿದ್ದೇನೆ..

ದೊರೆತರೂ ಅದು ಪ್ರೀತಿಯೇ, ನಮ್ಮನ್ನು ತೊರೆದರೂ ಅದು ಪ್ರೀತಿಯೇ. ಆದರೆ ಇವೆರಡನ್ನೂ ಮೀರಿದಂತಹ ಪ್ರೀತಿಯೆಂದರೆ ಕಾಯುವುದು. ಕ್ಷಣ ಕ್ಷಣ ಅವಳನ್ನೇ ಕನವರಿಸಿ ಹೃದಯ ಸೋತಿದ್ದರೂ ಮರುಕ್ಷಣ ಮನಸ್ಸಿಗೆ ಅವಳ ನೆನಪೇ ಬೇಕು. ಕಾಯೋ ಪ್ರೀತಿ ಅಂದ್ರೆನೇ ಹಾಗೆ… ಹನಿ ಮಳೆಯಲಿ ಅವಳ ನಿಜ ಸ್ಪರ್ಶ ಪಡೆಯುತ್ತಾ, ಹಕ್ಕಿಗಳ ಚಿಲಿಪಿಲಿಯಲಿ ಅವಳ ದನಿ ಕೇಳುತ್ತಾ, ಸಂಜೆಯಾದಾಗ ಸೂರ್ಯನನ್ನು ತಳ್ಳಿ ಆಗಸಕ್ಕೆ ಬರುವ ಆ ಚಂದ್ರನೇ ಅವಳು ಎಂದು ಆರಾಧಿಸುತ್ತಾ, ನೋಡುತ್ತಾ, ಮಾತನಾಡುತ್ತ ದಿನ ಕಳೆಯುವ ಪರಿಯೇ ಬೇರೆ…

ಹೇಳಿಕೇಳಿ ನನ್ನ ಸ್ವಂತ ಸಂಗೀತದ ಜೊತೆ ಸಾಹಿತ್ಯವನ್ನೂ ಸೇರಿಸಿ ಹಾಡುವ ಹವ್ಯಾಸ ನನಗಿರುವುದರಿಂದ ಅವಳ ನೆನಪಿನ ಪ್ರತಿ ಸಂದರ್ಭದಲ್ಲೂ ಒಂದೊಂದು ಹಾಡು ಬರೆದು ಗುನುಗುತ್ತಾ ಬರುವ ಮಾರ್ಚ್ ಬಂದರೆ ಒಂದು ವರ್ಷ ಅವಳ ನೆನಪಿನಲ್ಲಿ ಕಳೆದಂತಾಗುತ್ತದೆ. ಹೌದು, ಜೊತೆಗಿದ್ದ ಪ್ರೀತಿ ಈಗ ಬರೀ ನೆನಪಾಗಿದೆ. ಎರಡು ವರ್ಷದ ಹಿಂದೆ ಕೆಲವು ಕಾರಣಗಳಿಂದ ಹಾಸನದಿಂದ ಕಾಸರಗೋಡಿಗೆ ಬಂದು ನಲೆಸುವಂತಾಯಿತು. ಕಾಸರಗೋಡಿನಲ್ಲಿ ನಾವು ಇರಲು ಆರಿಸಿಕೊಂಡಿದ್ದು ಒಂದು ಪುಟ್ಟ ಮನೆ. ಮನೆ ಹಿಂದೆ ಇರೋ ಬೆಟ್ಟ, ಮನೆ ಮುಂದೆ ಆಗೊಂದು ಈಗೊಂದು ವಾಹನಗಳು ಬರುವ ರಸ್ತೆ. ಇವೆರಡು ನನ್ನ ಭಾವನೆಗಳನ್ನು ಕಲ್ಲು ಹೊಡೆದು, ಹೊಡೆದು ಎಚ್ಚರಿಸುತ್ತಿದ್ದವು.

ಮನೆಗೆ ಬಂದ ಮೊದಲ ದಿನವದು. ಮಳೆಗಾಲದ ಸಮಯ ಬೇರೆ. ನಾನು ಅಪ್ಪ-ಅಮ್ಮ ಸೇರಿ ಮನೆಯ ಸಾಮಾಗ್ರಿಗಳನ್ನು ಜೋಡಿಸುತ್ತಿದ್ದೆವು. ಬೆಳಕಿಲ್ಲವೆಂದು ಕಿಟಕಿ ತೆರೆದರೆ ಆಗಸದಿಂದ ಮಳೆರಾಯ ಭೂಮಿಗೆ ಧುಮುಕುತ್ತಿದ್ದ. ಮಳೆ ಕಂಡ ತಕ್ಷಣ ನಾ ಬೇಡ ಎಂದರು ಮನ ಕೇಳುವುದೇ ಇಲ್ಲ, ನೆನೆಯಲೇಬೇಕು ಎಂದು ಹಟ ಹಿಡಿಯುತ್ತದೆ. ಮನೆ ಮುಂದೆ ನೆನೆದರೆ ಅಮ್ಮ “ಹೇಗೂ ನೆಂದಿದ್ದೀಯಲ್ಲ ಬಿಸಿಲಿಗೆ ಒಣಗಿ ನಂತರ ಮನೆ ಒಳಗೆ ಬಾʼ ಎಂದು ಬಾಗಿಲು ಹಾಕಿಬಿಡುತ್ತಾರೆಂದು ತಂದ ವಸ್ತುಗಳ ನಡುವೆ ಯಾವುದೋ ಮೂಲೆಯಲ್ಲಿ ಅಡಗಿದ್ದ ಕೊಡೆಯನ್ನು ತೆಗೆದುಕೊಂಡು ಬೆಟ್ಟದ ಕಡೆ ಹೊರಟೆ.

ಆಗಾಗಲೇ ನನಗಿಂತ ಮೊದಲು ನನಗಿಂತ ಮಳೆಯನ್ನು ಪ್ರೀತಿಸುವ ʼಅಮೃತʼ ಮಳೆಯಲ್ಲಿ ನೆನೆಯುತ್ತಾ ಕುಣಿಯುತ್ತಿದ್ದಳು. ಅವಳ ಭೇಟಿಗೂ ಮೊದಲೇನು ಅವಳ ಹೆಸರು ತಿಳಿದಿರಲಿಲ್ಲ. ಆದರೆ ಈ ಬರಹ ಬರೆಯುವ ಸಂದರ್ಭದಲ್ಲಿ ಹೆಸರು ಅಳಿಯದೆ ಉಳಿದಿದೆ… ನಾನು ಕೊಡೆಯನ್ನು ಮಡಚಿ ಸಮೀಪವಿದ್ದ ಒಂದು ಕಲ್ಲಿನ ಮೇಲೆ ಅವಳನ್ನು ನೋಡುತ್ತಾ ವರ್ಷವಿಡೀ ಮಳೆ ಹೀಗೆ ಸುರಿಯಲಿ ಎಂದು ದೇವರಲ್ಲಿ ಬೇಡುತ್ತಾ ಕುಳಿತೆ. ನನ್ನ ಬೇಡಿಕೆ ಕೇಳಿದ ವರುಣ ಯಾಕೋ ಐದೇ ನಿಮಿಷಕ್ಕೆ ನಿಂತುಬಿಟ್ಟ. ಶಕುನವೋ ಅಪಶಕುನವೋ ತಿಳಿಯದೆ, ಮಳೆಯೇ ಹೀಗೆ, ಬೇಕು ಎಂದಾಗ ಬರದೆ ಬೇಡ ಎಂದಾಗ ಬಂದು ಸತಾಯಿಸುತ್ತದೆ ಎಂದು ಮನಸ್ಸಲ್ಲಿ ಅಂದುಕೊಂಡೆ.

ನಾ ಬಂದಾಗಲೇ ಅವಳು ನನ್ನನು ಗಮನಿಸಿದ್ದನ್ನು ನಾ ಗಮನಿಸಿರಲಿಲ್ಲ. ಮಳೆ ನಿಂತ ತಕ್ಷಣ ನನ್ನ ಹತ್ತಿರ ಬಂದು ಯಾರು ನೀನು? ನಿನ್ನನ್ನು ಇಲ್ಲಿ ಯಾವತ್ತೂ ನೋಡೇ ಇಲ್ಲ? ನಿನ್ನ ಮನಯೆಲ್ಲಿ? ಎಂದು ಸರಣಿ ಪ್ರಶ್ನೆಗಳನ್ನು ಅವಳ ಹಣೆ ಮೇಲಿದ್ದ ಮಳೆ ಹನಿಗಳನ್ನು ಒರೆಸುತ್ತಾ ಕೇಳಿದಳು. ಹಿಂದೆಂದೂ ಯಾವ ಹುಡುಗಿಯೊಂದಿಗೆ ನೇರವಾಗಿ ಮಾತನಾಡದ ಭಯದಲ್ಲಿದ್ದ ನಾನು ತೊದಲುತ್ತಾ, ಈ ಊರಿಗೆ ಇವತ್ತು ಬಂದೆವು, ನಾನು ದರ್ಶನ್ , ಬೆಟ್ಟದ ಮೇಲಿಂದ ನಮ್ಮ ಮನೆ ಕಾಣುತ್ತಿದ್ದರಿಂದ ಕೈ ತೋರಿಸಿ ಹೇಳಿದೆ. ಯಾಕೆ ಈ ರೀತಿ ತೊದಲುತ್ತ ಭಯದಿಂದ ಮಾತಾಡ್ತಾ ಇದ್ದೀಯಾ ಏನಾಯ್ತು ಎಂದು ಕೇಳಿದಳು. ಅದಕ್ಕೆ ನಾನೂ ʼಏನಿಲ್ಲ, ಗೊತ್ತಿಲ್ಲʼ ಅಂದೆ. ನನ್ನ ಭಯವನ್ನರಿತ ಅವಳು, ಬಾ ಕೂತು ಮಾತನಾಡುವ ಎಂದಳು. ಕಲ್ಲಿನ ಮೇಲೆ ಕುಳಿತೆವು. ಮಾತು ಮುಗಿಯಿತು. ಬಿದ್ದ ಮಳೆ ಇಂಗಿ, ತಲೆ ಮೇಲಿದ್ದ ಸೂರ್ಯ ಕೆಳಗೆ ಬಂದಾಗಿತ್ತು.

ಅಷ್ಟರಲ್ಲಿ ನಮ್ಮಪ್ಪ ಕಾಲ್ ಮಾಡಿ ಮನೆಗೆ ಬಾ ಅಂದರು. ಆಯ್ತು ಅಣ್ಣ ಬರ್ತೀನಿ ಅಂದೆ… ನನ್ನ ಸಂಪೂರ್ಣ ಪರಿಚಯವನ್ನು ಅವಳಿಗೆ ಹೇಳಿದ್ದರಿಂದ ನಾನು ಒಬ್ಬನೇ ಮಗ ಎಂದು ಅವಳಿಗೆ ತಿಳಿದಿತ್ತು. ಯಾರಿಗೆ ನೀನು ಅಣ್ಣ ಅಂತ ಫೋನಲ್ಲಿ ಮಾತಾಡಿದ್ದು ಅಂತ ಕೇಳಿದಳು. ಅದಕ್ಕೆ ನಾನು ನಗುತ್ತಾ ನಮ್ಮ ಕಡೆ ಅಪ್ಪನಿಗೆ ಅಣ್ಣ ಅಂತಾರೆ ಎಂದು ಬೆಟ್ಟದಿಂದಿಳಿದು ಮನೆ ಕಡೆಗೆ ಹೊರಟೆವು.

ಬೀಳೋ ಮಳೆ ಜೊತೆ ಕಾಣೋ ಕನಸಿನ ಜೊತೆ ವಾರದಲ್ಲೆರಡು ದಿನ ಕಾಲೇಜು ಮುಗಿದ ನಂತರ ಸಂಜೆ ಭೇಟಿ. ಕೆಲವೊಂದು ಸಲ ಜಗಳದ ಘಾಟಿ, ಇನ್ನೂ ಕೆಲವೊಂದು ಸಲ ಅವಳ ಪುಟ್ಟ ತಮ್ಮನನ್ನು ಕರೆದುಕೊಂಡು ಬರುತ್ತಿದ್ದಳು. ಮಾತೊಂದು ಬಿಟ್ಟರೆ ಅವಳಿಗೂ ನನಗೂ ಏನು ಗೊತ್ತಿರ್ಲಿಲ್ಲ. ಹಾಗೇ ಕಾಲದ ಜೊತೆ ನಮ್ಮ ಗೆಳೆತನವೂ ಸಾಗಿತ್ತು. ಅವಳು ಕಾಸರಗೋಡಿನಲ್ಲಿ ಕಾಲೇಜಿಗೆ ಹೋಗ್ತಿದ್ರೆ ನಾನು ಮಂಗಳೂರಿಗೆ ಹೋಗುತ್ತಿದ್ದೆ. ಕೇರಳದಲ್ಲಿ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆ ನಮಗಿಂತ ಒಂದು ವಾರದ ಮೊದಲೇ ನಡೆದುಹೋಗಿತ್ತು. ನನಗೂ ರಜೆ ಆರಂಭವಾದ ಬಳಿಕ ಪ್ರತಿ ಸಂಜೆಯ ಭೇಟಿ, ಮುಂಜಾನೆಯಿಂದ ಸಂಜೆಯ ಭೇಟಿಯಾಯ್ತು. ಮಧ್ಯಾಹ್ನ ಊಟ ಅವಳೇ ತರುತ್ತಿದ್ದರಿಂದ ಊಟಕ್ಕೇನು ತೊಂದರೆ ಇರ್ತಿರ್ಲಿಲ್ಲ.

ಅವತ್ತು ಶನಿವಾರ. ಬೆಳಗ್ಗೆ ಎದ್ದು ಎಲ್ಲ ಕೆಲಸ ಮುಗಿಸಿ ಬೆಟ್ಟದ ಕಡೆ ಹೊರಟೆ. ನನಗಿಂತ ಮೊದಲು ಬಂದು ಕುಳಿತಿದ್ದ ಅವಳು ನನ್ನನ್ನು ನೋಡಿದ ತಕ್ಷಣ ಒಂದು ಪುಟ್ಟ ನಗೆಯೊಂದಿಗೆ ಹಾಯ್ ಅಂದ್ಲು. ಆ ನಗು ಸಾಮಾನ್ಯವಾಗಿ ಅವಳದ್ದಾಗಿರಲಿಲ್ಲ. ಅಂದ್ರೆ ನಗುವಿನ ಹಿಂದೆ ಏನೋ ಆತಂಕವಿದ್ದಂತಿತ್ತು. ಯಾಕೆ ಏನಾಯ್ತು ಅಂತ ಕೇಳಿದೆ ಕಣ್ಣೊರೆಸುತ್ತಾ ಉತ್ತರಿಸಿದ ಅವಳು. ನಿನ್ನನ್ನು ಮಳೆ ಮರೆಯಲ್ಲಿ ನೋಡಿದ ಮೊದಲ ದಿನವೇ ನಾ ನಕ್ಕಿದ್ದು. ನಗುವೆಂಬುದು ಮರೆತುಹೋಗಿದ್ದ ದಿನಗಳಲ್ಲಿ ಆಗಿದ್ದು ನಿನ್ನ ಗೆಳೆತನ. ಒಂದು ದಿನ ನಿನ್ನನ್ನು ನೋಡದೇ ಹೋದರೂ ಕಂಬನಿ ತುಂಬುತ್ತೆ. ನಾನತ್ತಾಗ ನೀನೊರೆಸೋ ಕಂಬನಿ, ನಾ ನಕ್ಕಾಗ ನೀ ಅದನ್ನು ಮುಂದುವರೆಸುವ ರೀತಿ ನಿನ್ನ ಮುಗಿಯದ ಮಾತು ಇವೆಲ್ಲವೂ ನೀನಿರುವೆ ಎಂಬ ಧೈರ್ಯದ ಜೊತೆ, ನೀ ನನ್ನನ್ನು ಬಿಟ್ಟು ಹೋದರೆ ನಾ ಹೇಗಿರುವೆ ಎನ್ನುವ ಭಯವನ್ನೂ ನೀಡುತ್ತಿತ್ತು. ನೀನಂದ್ರೆ ನಂಗೆ ತುಂಬಾ ಇಷ್ಟ. ಆದ್ರೆ! ಅಷ್ಟರಲ್ಲಿ ನಾನವಳ ಕಂಬನಿ ಒರೆಸುತ್ತಾ ಪ್ರತಿಸಲ ನೀನಂದ್ರೆ ನಂಗೆ ತುಂಬಾ ಇಷ್ಟ ಅಂತ ಹೇಳೋಕೆ ಹೊರಟಾಗ್ಲು ನಂಗೆ ಅನ್ನಿಸಿದ್ದು ಒಂದೇ. ನಿನಗೆಲ್ಲಾ ನಾನು ಸೆಟ್ ಆಗಲ್ಲ, ನನಗಿಂತ ಒಳ್ಳೆ ಹುಡುಗ ಸಿಗ್ಬೇಕು, ನೀನು ಚೆನ್ನಾಗಿರ್ಬೇಕು ಅಂತ ಅನ್ನಿಸ್ತಾ ಇತ್ತು, ಆದ್ರೆ ಆ ಒಳ್ಳೆ ಹುಡ್ಗನ್ ಜೊತೆ ನಿನ್ನ ನೋಡ್ದಾಗ ನನ್ ಲೈಫ್ ಚೆನ್ನಾಗಿರಲ್ಲ ಅಂತ ಅನ್ಸೋಕೆ ಶುರುವಾಯ್ತು. ಅದಕ್ಕೆ ಇವತ್ತು ಬೆಳಗ್ಗೆ ಬೇಗ ಎದ್ದು ನಿನ್ನ ಹತ್ತಿರ ಇದೆ ವಿಷ್ಯ ಮಾತಾಡ್ಬೇಕು ಅಂತ ಓಡೋಡಿ ಬಂದೆ ಅಂತ ಹೇಳಿದೆ!

ನನ್ನ ಮಾತಿನ ನಡುವೆ ನಿಲ್ಲದ ಅವಳ ಕಂಬನಿಯನ್ನು ನೋಡಿ ʼಯಾಕೆ ಏನಾಯ್ತುʼ ಅಂತ ಕೇಳಿದೆ. ಅವಳು ನಾನು ಇವತ್ತು ಸಂಜೆ ಅಮ್ಮನ ಜೊತೆ ನನ್ನ ಅಜ್ಜಿ ಮನೆ ಕಾರವಾರಕ್ಕೆ ಹೋಗಬೇಕು ಅಲ್ಲೇ ಕಾಲೇಜಿಗೆ ಸೇರ್ಬೇಕಂತೆ ಅಂದಾಗ ಪ್ರತೀ ಬಾರಿ ಅವಳ ಕಂಬನಿ ಒರೆಸುತ್ತಿದ್ದ ನಾನೇ ಕಣ್ಣೀರಾಗಿದ್ದೆ. ನಿಲ್ಲದ ನನ್ನ ಕಂಬನಿಯನ್ನು ಅವಳು ಒರೆಸುತ್ತಾ ನಾನು ಪ್ರತಿ ದಿನ ಫೋನಲ್ಲಿ ನಿಂಜೊತೆ ಮಾತಾಡ್ತೀನಿ ಅಂದಳು. ʼಜಾಸ್ತಿ ಅಳಬೇಡ, ನನ್ನ ಹತ್ತಿರ ಈಗ ಜಾಸ್ತಿ ಸಮಯ ಇಲ್ಲ, ನನ್ನಾಣೆಗೂ ನಾನು ಖಂಡಿತ ಬರ್ತೀನಿʼ ಎಂದಳು.

ಅವಳನ್ನು ಮನೆಗೆ ಕರೆಯುತ್ತಿದ್ದ ಅವಳಮ್ಮನ ಕರೆ ಬಂದಿತ್ತು. ನಂತರ ಹೊರಟ ಅವಳನ್ನು ಅವತ್ತು ನೋಡಿದ್ದೆ ಕೊನೆಯ ಬಾರಿ. ಒಂದೆರಡು ವಾರ ಅವಳ ಕರೆ ಹಾಗೂ ಸಂದೇಶ ಬಂದರೂ ಕಾಲಕ್ಕೆ ನಿಂತ ಮಳೆಗಾಲದಂತೆ ಅದೂ ನಿಂತು ಹೋಯ್ತು. ಮಳೆಯೂ ಇಲ್ಲ ಅವಳು ಇಲ್ಲದ ಜೀವನ ಕೆಲವೊಂದು ಬಾರಿ ಸಾಕು ಎನಿಸುತ್ತಿತ್ತು. ಆದರೆ ಕಾಯುವ ಪದ ಆರಾಧನೆಗೆ ಸಮ ಎಂದು ಹೇಳುತ್ತಾರೆ. ಆದರೆ ಈ ಏಕಾಂತದ ಜೊತೆ ಬೇಡ ಎಂದರೂ ಬರುತ್ತಿರುವ ಕಣ್ಣೀರನ್ನು ಗಮನಿಸುವವರು ಯಾರು? ಸಾಂತ್ವಾನಿಸುವವರು ಯಾರು? ಗೊತ್ತಿಲ್ಲ.

ಕಾಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಯಾವುದೋ ಜನ್ಮದಲ್ಲಿ ನಾ ಮಾಡಿದ ಮೋಸಕ್ಕೆ ಈಗ ನನ್ನೊಂದಿಗೆ ಹಗೆ ತೀರಿಸಿಕೊಳ್ಳುತ್ತಿದೆ ಎಂದನಿಸುತ್ತದೆ. ಆಣೆ ಮುರಿದರೂ, ನನ್ನ ಮರೆತರೂ, ನೀನಿರದಾಗಬೇಡ. ಜನುಮಗಳೇ ಕಾಯುವೆ. ಅಯ್ಯೋ, ಬೆಳಗ್ಗೆ ಬೆಟ್ಟದ ಮೇಲೆ ಪೆನ್ನು ಹಾಳೆ ಹಿಡಿದು ಬಂದ ನಾನು ಇನ್ನೂ ಹೋಗಿಲ್ವಲ್ಲ ಎಂದು ಈ ನೆನಪಿನ ಹಾಳೆ, ಭಾರವಾದ ಮನಸ್ಸಿನ ಜೊತೆ ಮನೆಗೆ ಹೊರಟೆ. ಮತ್ತೆ ಹನಿಮಳೆಯ ನಿರೀಕ್ಷೆಯಲಿ…

ದರ್ಶನ್ ಕುಮಾರ್
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

Share. Facebook Twitter Pinterest LinkedIn Tumblr Email
Previous Articleಸುರತ್ಕಲ್ ತಲವಾರ್ ದಾಳಿ; ಗಾಯಾಳು ಯುವಕನ ಮೃತ್ಯು!
Next Article ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ – ಅಪರಾಧ ಎಸಗಿದವರಿಗೆ ಕಠಿಣ ಕ್ರಮ – ಶಾ ಭರವಸೆ

Related Posts

ಇಂಡೋ-ಪಾಕ್ ಪ್ರೇಮ ಕಥೆ – ಪೋಲೀಸರ ಬಲೆಗೆ ಬಿದ್ದ ಇಕ್ರಾ-ಯಾದವ್ ಜೋಡಿ!

24/01/2023 : 1:32 PM

‘ಗೌಜಿ ಗಮ್ಮತ್‌’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ – ಶೀಘ್ರದಲ್ಲೇ ಸಿನಿಮಾ ಬೆಳ್ಳಿತೆರೆಗೆ!

19/01/2023 : 10:54 PM

ಆ ಸಂಭ್ರಮದ ದಿನಗಳು ಇನ್ನೆಲ್ಲಿ…

23/09/2022 : 10:11 PM

8 Comments

  1. J. Cole ringtones on 07/08/2022 : 11:04 AM 11:04 AM

    excellent article! J. Cole ringtones

  2. Israel xclub on 08/08/2022 : 2:48 AM 2:48 AM

    Itís difficult to find educated people in this particular topic, however, you seem like you know what youíre talking about! Thanks

  3. sead-hair de on 10/08/2022 : 7:36 PM 7:36 PM

    Magnificent items from you, man. I have be mindful your
    stuff previous to and you are just too excellent.

    I really like what you’ve bought right here, really like what you’re stating and the best way through which
    you say it. You are making it enjoyable and
    you still care for to stay it smart. I can’t wait to
    learn much more from you. This is actually a great website.

    my web page sead-hair de

  4. bestautoservice.at on 11/08/2022 : 1:55 PM 1:55 PM

    hello there and thank you for your information – I have definitely picked up anything new from right
    here. I did however expertise several technical issues using this site, as I experienced to
    reload the site lots of times previous to I could get it to load correctly.
    I had been wondering if your hosting is OK? Not that I am complaining, but sluggish loading instances times will very frequently affect your placement in google and could damage your quality score if advertising and marketing with Adwords.
    Anyway I am adding this RSS to my e-mail and can look out for much more of your respective
    exciting content. Make sure you update this again very soon.

    My blog post; bestautoservice.at

  5. Hershel on 11/08/2022 : 2:39 PM 2:39 PM

    I’m really loving the theme/design of your web site.
    Do you ever run into any web browser compatibility issues?

    A handful of my blog visitors have complained about my website not operating correctly in Explorer but looks great in Safari.
    Do you have any recommendations to help fix this problem?

    Feel free to visit my site :: wie kann ich gewinnen an spielautomaten (Hershel)

  6. Candy on 13/08/2022 : 3:17 AM 3:17 AM

    Awesome! Its in fact remarkable post, I
    have got much clear idea concerning from this
    article.

    Here is my website: online gokspelletjes (Candy)

  7. regiotime-hechingen de on 13/08/2022 : 3:34 AM 3:34 AM

    Have you ever thought about adding a little bit more than just your
    articles? I mean, what you say is important and all.

    But imagine if you added some great pictures or videos to give your posts more, “pop”!
    Your content is excellent but with images and clips, this blog could certainly be one of the
    most beneficial in its niche. Fantastic blog!

    Feel free to visit my blog post regiotime-hechingen de

  8. Pushkinhouse.Co.kr on 14/08/2022 : 8:38 PM 8:38 PM

    I’m not sure why but this blog is loading very slow for me.

    Is anyone else having this problem or is it a problem on my end?

    I’ll check back later on and see if the problem still exists.

    Also visit my webpage; bitcoin casino Spelen (Pushkinhouse.Co.kr)

Copyright © 2019 CitizenLive News | Designed by:
  • About
  • Privacy
  • Contact

Type above and press Enter to search. Press Esc to cancel.