2019ರ ಫೆಬ್ರವರಿ 14 ಸಂಜೆ 3:15ರ ವೇಳೆಗೆ ಉಗ್ರರ ಅಟ್ಟಹಾಸಕ್ಕೆ ಭಾರತೀಯ ಸೈನಿಕರು ಪ್ರಾಣತೆತ್ತಿದ್ದರು. ಬಹುಶಃ ಭಾರತ ದೇಶ ಎಂದೆಂದಿಗೂ ಮರೆಯದ ಭೀಕರ ಘಟನೆಯಿದು. ಮಧ್ಯಾಹ್ನದವರೆಗೆ ಎಲ್ಲವೂ ಎಂದಿನಂತಿತ್ತು… ಆದರೆ ಸಂಜೆ ವೇಳೆಗೆ ಇಡೀ ಭಾರತದ ಜನ ಕಣ್ಣೀರಲ್ಲಿ ಕೈತೊಳೆದಿದ್ದರು. ಅದು ಭಾರತದ ಪಾಲಿಗೆ ಕಹಿನೆನಪು.
ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್‌ಪೋರಾ ಬಳಿಯ ಅವಾಂತಿಪೋರಾ ಸಮೀಪ ರಾ.ಹೆ 44ರಲ್ಲಿ 78 ಸೇನಾ ವಾಹನಗಳು ಸಿಆರ್‌ಪಿಎಫ್ ಯೋಧರನ್ನು ಕರೆದುಕೊಂಡು ಸಾಲಾಗಿ ಸಾಗುತ್ತಿದ್ದವು. ಈ ವೇಳೆ 350 ಕೆಜಿ ಸ್ಫೋಟಕಗಳನ್ನು ಹೊತ್ತ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುಪಿಯೊಂದು ನೇರವಾಗಿ ಸೇನಾ ವಾಹನಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ಕ್ಷಣ ಮಾತ್ರದಲ್ಲೇ 76ನೇ ಬೆಟಾಲಿಯನ್‌ನ 40 ಯೋಧರು ಹುತಾತ್ಮರಾದರು.

ಅಂದು ಏನೆಲ್ಲಾ ಆಗಿತ್ತು, ಇಲ್ಲಿದೆ ಆ ಭೀಕರ ಘಟನೆಯ ನೆನಪು…
ಈ ಭಯೋತ್ಪಾದಕ ದಾಳಿಯಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಬಾಂಧವ್ಯ ಮತ್ತೆ ಹದಗೆಟ್ಟಿತು. ದಾಳಿ ನಡೆದ ಮರುದಿನ ಅಂದರೆ 2019ರ ಫೆಬ್ರವರಿ 15ರಂದು ಈ ದಾಳಿಯನ್ನು ಪಾಕಿಸ್ತಾನ ಪ್ರಾಯೋಜಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿತು. ಉಗ್ರ ದಾಳಿಯಿಂದ ಗಾಯಗೊಂಡ ಹುಲಿಯಂತಾಗಿದ್ದ ಭಾರತೀಯ ಸೇನೆ ಸಶಸ್ತ್ರ ಪಡೆಯ ಮೂಲಕ ಫೆಬ್ರವರಿ 26ರಂದು ಜೈಶ್-ಎ-ಮೊಹಮ್ಮದ್ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಸರ್ಜಿಕಲ್ ಸ್ಟ್ರೈಕ್ ನಡೆಸಿದವು. ಈ ದಾಳಿ ನಡೆದು ಹದಿನೆಂಟು ತಿಂಗಳ ನಂತರ 2020ರ ಆಗಸ್ಟ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಜಮ್ಮುವಿನ ವಿಶೇಷ ನ್ಯಾಯಾಲಯದಲ್ಲಿ 13,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತು. ಈ ಚಾರ್ಜ್‌ಶೀಟ್‌ನಲ್ಲಿ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸೇರಿದಂತೆ 19 ಜನ ಪಾಕ್ ಉಗ್ರರು ಪುಲ್ವಾಮ ದಾಳಿ ನಡೆಸಿರುವ ಬಗ್ಗೆ ಉಲ್ಲೇಖಿಸಲಾಗಿತ್ತು.
ಆತ್ಮಹತ್ಯಾ ಬಾಂಬರ್ ಆದಿಲ್ ಅಹ್ಮದ್ ದಾರ್ 200 ಕೆಜಿ ಸ್ಪೋಟಕವನ್ನು ಹೊತ್ತ ವಾಹನವನ್ನು ಚಲಾಯಿಸುತ್ತಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಉಗ್ರ ಮಸೂದ್ ಅಜರ್, ಆತನ ಸಹೋದರರಾದ ಅಬ್ದುಲ್ ರವೂಫ್, ಅಮ್ಮರ್ ಅಲ್ವಿ ಮತ್ತು ಸೋದರಳಿಯ ಮೊಹಮ್ಮದ್ ಉಮ್ಮರ್ ಫಾರೂಕ್, 2018ರಲ್ಲಿ ಭಾರತಕ್ಕೆ ನುಸುಳಿದ್ದರು. ಇವರು ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದರು.
ಎನ್‌ಐಎ ಕೋರ್ಟ್‌ಗೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿರುವ 19 ಮಂದಿಯಲ್ಲಿ 12 ಜನರು ಕಾಶ್ಮಿರದ ನಿವಾಸಿಗಳಾಗಿದ್ದರೆ, ಏಳು ಮಂದಿ ಪಾಕಿಸ್ತಾನದ ಪ್ರಜೆಗಳಾಗಿದ್ದಾರೆ. ಮಸೂದ್ ಅಜರ್ ಅಲ್ವಿ, ರವೂಫ್ ಅಸ್ಗರ್ ಅಲ್ವಿ, ಅಮ್ಮರ್ ಅಲ್ವಿ, ಕ್ವಾರಿ ಮುಫ್ತಿ ಯಾಸೀರ್ (ಕೊಲ್ಲಲ್ಪಟ್ಟವ), ಮೊಹಮ್ಮದ್ ಇಸ್ಮಾಯಿಲ್, ಮೊಹಮ್ಮದ್ ಉಮ್ಮರ್ ಫಾರೂಕ್ (ಎನ್‌ಕೌಂಟರ್) ಕಮ್ರಾನ್ ಅಲಿ (ಎನ್‌ಕೌಂಟರ್) ಪಾಕ್ ಪ್ರಜೆಗಳೆಂದು ಎಂದು ಗುರುಸಲಾಗಿದೆ.
ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾದ ಕಾಶ್ಮೀರಿ ನಿವಾಸಿಗಳೆಂದರೆ ಶಾಕಿರ್ ಬಶೀರ್, ಇನ್ಶಾ ಜಾನ್, ಪೀರ್ ತಾರಿಕ್ ಅಹ್ಮದ್ ಶಾ, ವೈಜ್-ಉಲ್-ಇಸ್ಲಾಮ್, ಮೊಹಮ್ಮದ್ ಅಬ್ಬಾಸ್ ರಾಥರ್, ಬಿಲಾಲ್ ಅಹ್ಮದ್ ಕುಚೆ, ಮೊಹಮ್ಮದ್ ಇಕ್ಬಾಲ್ ರಾಥರ್, ಸಮೀರ್ ಅಹ್ಮದ್ ದಾರ್, ಅಶಾಕ್ ಅಹ್ಮದ್ ನೆಂಗ್ರೂ, ಆದಿಲ್ ಅಹ್ಮದ್ ದಾರ್ (ಕೊಲ್ಲಲ್ಪಟ್ಟ ಆತ್ಮಹತ್ಯಾ ಬಾಂಬರ್), ಸಜ್ಜದ್ ಅಹ್ಮದ್ ಭಟ್ (ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟರು), ಮುದಾಸಿರ್ ಅಹ್ಮದ್ ಖಾನ್ (ಕೊಲ್ಲಲ್ಪಟ್ಟರು).
1 Comment
I know this if off topic but I’m looking into starting my own blog and was wondering what all is required to get setup? I’m assuming having a blog like yours would cost a pretty penny? I’m not very web savvy so I’m not 100 positive. Any recommendations or advice would be greatly appreciated. Thank you