‘ಜೀವನ ಒಂದು ಸುಂದರ ಪಯಣ ಅದರ ಪಯಣಿಗರು ನಾವು’ ಎಂಬ ಕವಿಯ ಉಕ್ತಿಯನ್ನು ನಂಬಿ ಅದರಂತೆ ಬದುಕಬೇಕೆಂದು ಆಸೆ ಪಟ್ಟವನು ನಾನು. ನನ್ನಂತೆಯೇ ಪ್ರತಿಯೊಬ್ಬರಿಗೂ ಅವರದೇ ಆದ ಕನಸುಗಳಿರುತ್ತವೆ. ಆ ಕನಸುಗಳನ್ನು ನನಸು ಮಾಡಲು ಸದಾಕಾಲ ಶ್ರಮಪಡಬೇಕಷ್ಟೇ ಹೊರತು ಪವಾಡವೇನೂ ಆಗುವುದಿಲ್ಲ !

ಸಾಧನೆ ಎನ್ನುವುದು ಬೀದಿಬದಿಯಲ್ಲಿ ಸಿಗುವ ತಿಂಡಿಯಲ್ಲ. ಅದೊಂದು ಸುಂದರ ಕಲ್ಲುಬಂಡೆ. ಆ ಬಂಡೆಯನ್ನು ನನಸೆಂಬ ಮೂರ್ತಿಯಾಗಿಸಲು ನಮ್ಮ ಗುಂಡಿಗೆ ಗಟ್ಟಿಗೆಯಾಗಿರಬೇಕು. ಸಾಧಿಸಲು ಹೊರಟವನಿಗೆ ಸಾವಿರ ಅಡ್ಡಿಗಳು ಬರದೇ ಇರಲಾರವು. ಗುರಿಯೆಡೆಗಿನ ಚಿತ್ತ, ಅಪಾರ ತಾಳ್ಮೆ, ಕಡುಕಷ್ಟವನ್ನು ಎದುರಿಸುವ ತಾಕತ್ತು, ʼಇದೆಲ್ಲಾ ಸಾಕುʼ ಎಂದು ಕಂಗೆಡಿಸುವ ಭಾವನೆಗಳ ಭಾರವನ್ನು ಹೊರುವ ಮನಸ್ಸನ್ನು ಹಿಡಿದೆಳೆವ ಶಕ್ತಿಯಿದ್ದರಷ್ಟೇ ಸಾಧನೆ ಸಿದ್ದಿಸುತ್ತದೆ. ಕನಸು ಕಂಡರಷ್ಟೇ ಸಾಲದು ಮನ ಸದಾ ಅದಕ್ಕಾಗಿ ತುಡಿಯುತ್ತಿರಬೇಕು.

ʼಮನಸ್ಸು ಸದಾ ತುಡಿಯುತ್ತಿರಬೇಕುʼ…ನಾನು ಎಂಟನೇ ತರಗತಿಯಲ್ಲಿದ್ದಾಗ ನನ್ನ ಶಿಕ್ಷಕರೊಬ್ಬರು ಹೇಳಿದ ಆ ಒಂದು ಮಾತು ನಾನು ಕಲಿಯುವಂತೆ, ನನ್ನಿಷ್ಟದ ಪತ್ರಿಕೋದ್ಯಮ ಪದವಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡಿತು. ದೂರದ ರಾಯಚೂರಿನಿಂದ ಕಡಲ ನಗರಿಗೆ ಬಂದು ವಿಶ್ವವಿದ್ಯಾನಿಲಯ ಕಾಲೇಜೆಂಬ ʼಕೆಂಪುಕೋಟೆʼಯ ಆವರಣ ಪ್ರವೇಶಿಸಿದೊಡನೆ ಅದರ ಸೌಂದರ್ಯಕ್ಕೆ ಮಾರುಹೋದರೂ, ಮನದೊಳಗೆ ಅದೆಂತದ್ದೋ ಕಂಪನ. ಆದರೆ ಮತ್ತೆ ಅಧ್ಯಾಪಕರ ಮಾತುಗಳು ನೆನಪಾದವು.

ಕಾಲೇಜಿನಲ್ಲಿ ಸೀನಿಯರ್‌ಗಳ ಅನುಭವದ ಆಲೋಚನೆಗಳು ಸ್ಫೂರ್ತಿಯಾದವು. ಆದರೆ ಸುಂದರ ಪಯಣವೊಂದು ಆರಂಭವಾಗುವಷ್ಟರಲ್ಲಿ ಕೊರೋನಾ ಮಹಾಮಾರಿಯಿಂದಾಗಿ ದಿಕ್ಕುತಪ್ಪಿದ ದೋಣಿಯಂತಾಗಿತ್ತು. ಕಾಲೇಜಿನ ಸುಂದರ ಕ್ಷಣಗಳಿಲ್ಲ, ಏನನ್ನಾದರೂ ಸಾಧಿಸೋಣವೆಂದರೆ ಅವಕಾಶಗಳಿಲ್ಲ. ಜೀವನ ಸಾಗಿಸಲು ಪದವಿ ಪೂರ್ಣಗೊಳಿಸೋಣವೆಂದರೆ ಪರೀಕ್ಷೆಗಳೇ ಇಲ್ಲ. ಇಷ್ಟಾದರೂ ನನ್ನ ಅಧ್ಯಾಪಕರ ಆ ಮಾತುಗಳು ಕೈ ಹಿಡಿದಿವೆ. ಏನೇ ಆದರೂ ಸತತ ಶ್ರಮಿಸುವೆ, ಶ್ರಮಿಸಿ ಸಾಧಿಸಿ ಜಗತ್ತಿಗೆ ತೋರಿಸುವೆ. ಅಲ್ಲಿಯವರೆಗೆ ಈ ಮನಸ್ಸು ನಿದ್ರಿಸದು….

ಶಂಕರ್ ಓಬಳಬಂಡಿ
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು

Share.

3 Comments

 1. First of all I would like to say great blog! I had
  a quick question in which I’d like to ask if you do not mind.
  I was interested to find out how you center yourself and clear your mind prior to writing.
  I’ve had difficulty clearing my mind in getting my ideas out there.
  I do take pleasure in writing however it just seems like the first 10 to 15 minutes are generally wasted simply just trying
  to figure out how to begin. Any recommendations or hints?

  Thank you!

Leave A Reply