ಹಣತೆ ಹಚ್ಚುವುದು ಕತ್ತಲನ್ನು ಗೆದ್ದು ನಿಲ್ಲುತ್ತೇವೆಂಬ ಜಿದ್ದಿನಿಂದಲ್ಲ. ದೀಪದಿಂದ ದೀಪವ ಹಚ್ಚವುದು ಮಾನವ ಪ್ರೀತಿಯನ್ನು ಹಂಚುವ ಸಂಕೇತ.

ದೀಪಾವಳಿಯ ಹೊಸಿಲಲ್ಲಿ ನಾವು ನಿಂತಿದ್ದೇವೆ. ದೀಪಾವಳಿ ಎಂದಾಕ್ಷಣ ನೆನಪಾಗುವುದೇ ಬೆಳಕು. ಪ್ರತಿಯೊಬ್ಬರ ಬದುಕಿಗೂ ಬೆಳಕೇ ಆಧಾರ. ಅಂತರಂಗದ ಬೆಳಕು ನಮ್ಮ ಬದುಕಿಗೆ ದಾರಿಯಾದರೆ, ಬಹಿರಂಗದ ಬೆಳಕು ಜಗತ್ತನ್ನು ಕಾಣಲು ನೆರವಾಗುತ್ತದೆ. ಬೆಳಕೆಂದರೆ ಜ್ಞಾನ, ದೈವ, ಅರಿವು. ಬೆಳಕು ಇಲ್ಲದೆ ಬದುಕೇ ಇಲ್ಲ. ಜೀವನದುದ್ದಕ್ಕೂ ಬೆಳಕು ನಮ್ಮ ಜೊತೆಯಲ್ಲಿರಲಿ ಎನ್ನುವುದರ ಸಾಂಕೇತಿಕತೆಯೇ ದೀಪಾವಳಿ.

ಯಾವುದರಿಂದ ನಾವು ಜೀವನವನ್ನು ನೋಡಬಲ್ಲೆವೋ, ನಮ್ಮನ್ನು ನಾವು ಕಾಣಬಲ್ಲೆವೋ, ನಮ್ಮ ಹಿತಾಹಿತಗಳನ್ನು ಕಂಡುಕೊಳ್ಳಬಲ್ಲೆವೋ ಅವೆಲ್ಲವೂ ಜ್ಞಾನವೇ ಹೌದು, ಅವೆಲ್ಲವೂ ಬದುಕಿನ ಹಾದಿಯಲ್ಲಿ ಒದಗಿದ ಬೆಳಕು. ಅದೇ ಈ ದೀಪಾವಳಿಯ ಸಾರ.

ಯಾವುದೋ ಮೂಲೆಯಲ್ಲಿ ಗಂಟು ಸೇರಿದ್ದ ಹಣತೆಗಳು ದೀಪಾವಳಿಯಂದು ಹೊರ ಬರಲು ಆರಂಭಿಸುತ್ತದೆ. ಮನೆಯ ಮುಂದೆ ಅಕಾಶದಲ್ಲಿನ ನಕ್ಷತ್ರದಂತೆ ದೀಪವು ಪ್ರಜ್ವಲಿಸಲು ಆರಂಭಿಸುತ್ತದೆ. ಕತ್ತಲನ್ನು ಹೊಡೆದೋಡಿಸಿ ಬೆಳಕಿನ ಕಿರಣಗಳನ್ನು ಪಸರಿಸುತ್ತದೆ. ಮುಖ್ಯವಾಗಿ ದೀಪಾವಳಿಯ ಉದ್ದೇಶ ಏನು ಎಂದರೆ ಅಂತರಂಗದ ಕತ್ತಲನ್ನು ಹೊಡೆದೋಡಿಸಿ ಬೆಳಗಿನ ಪ್ರಣತೆಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆಯನ್ನು ಮತ್ತು ಮನವನ್ನು ಬೆಳಗುವ ದಿವ್ಯಜ್ಯೋತಿಯ ಹಬ್ಬವೇ ದೀಪಾವಳಿ. ಹೆಸರೇ ಸೂಚಿಸುವಂತೆ ದೀಪಗಳ ಸಮೂಹ, ಹಣತೆಗಳ ಸಾಲು, ದೀಪಗಳ ಜಗಮಗ, ಪಟಾಕಿಗಳು ಸೃಷ್ಟಿಸುವ ನಕ್ಷತ್ರಲೋಕ.

ದೀಪಾವಳಿ ಹಬ್ಬ ಬಂದಾಕ್ಷಣ ಮಕ್ಕಳಿಗಳಿಗಂತೂ ಎಲ್ಲಿಲ್ಲದ ಉತ್ಸಾಹ. ಯಾಕೆಂದರೆ ಮಕ್ಕಳು ದೀಪಗಳನ್ನು ಹಚ್ಚಲು ಇದೊಂದು ಸುಸಂದರ್ಭ. ಆಕಾಶದಲ್ಲಿ ಚಿಮ್ಮುವ ಬಾಣ ಬಿರುಸು ಕಿವಿಗೆ ಅಪ್ಪಳಿಸುವ ಪಟಾಕಿ ಶಬ್ಧ ಇವೆಲ್ಲವೂ ಮಕ್ಕಳಿಗೆ ಅದೆಷ್ಟೋ ಹರುಷ ತಂದು ಕೊಡುತ್ತದೆ. ಹೊಸಬಟ್ಟೆ ತೊಟ್ಟು, ದೀಪಗಳನ್ನಿಟ್ಟು ಈ ಹಬ್ಬ ಆಚರಿಸುವ ಖುಷಿಯೇ ಬೇರೆ. ಚಿಕ್ಕ ಮಕ್ಕಳಿಂದ ಹಿಡಿದು ಎಂಬತ್ತರ ಆಸುಪಾಸಿನ ಮುದುಕರಿಗೂ ಎಲ್ಲಿಲ್ಲದ ಸಂಭ್ರಮ. ಆದರೆ ದೀಪಾವಳಿ ಹಬ್ಬದ ಪ್ರತಿಯೊಂದು ದಿನವೂ ವಿಶೇಷತೆಯಿಂದ ಕೂಡಿದೆ.

ಮೊದಲನೇ ದಿನ ಎಣ್ಣೆ ಸ್ನಾನ ಮಾಡುವ ಮೂಲಕ ಹಬ್ಬವು ಆರಂಭವಾಗುತ್ತದೆ. ಇದಕ್ಕೆ ಕಾರಣ ಸಮುದ್ರ ಮಂಥನದ ಸಂದರ್ಭದಲ್ಲಿ ಶ್ರೀ ಮಹಾವಿಷ್ಣು ಅಮೃತ ಕಳಸದೊಂದಿಗೆ ಧನ್ವಂತರಿಯಾಗಿ ಅವತಾರ ಎತ್ತಿದ ಎಂದು ಹೇಳಲಾಗುತ್ತದೆ. ಆ ದಿನ ತುಂಬುವ ಸ್ನಾನದ ನೀರಿನಲ್ಲಿ ಗಂಗೆಯು, ಎಣ್ಣೆಯಲ್ಲಿ ಧನಲಕ್ಷಿಯು ಇರುತ್ತಾಳೆ. ಆದ್ದರಿಂದ ನೀರು ತುಂಬುವ ಹಬ್ಬ ಹಾಗೂ ಗಂಗೆಯನ್ನು ಪೂಜಿಸುವ ಹಬ್ಬ ಎಂದೂ ಹೇಳುತ್ತೇವೆ. ನರಕ ಚತುರ್ದಶಿಯ ಮುಂಚಿನ ದಿನ ಸಂಜೆ ಹಂಡೆಯನ್ನು ಸ್ವಚ್ಛವಾಗಿ ತೊಳೆದು ಅದಕ್ಕೆ ಹೂಗಳಿಂದ ಸಿಂಗಾರ ಮಾಡಿ ಬಳಿಕ ನೀರು ತುಂಬಿಸಿ ಮರುದಿನ ಮುಂಜಾನೆ ಎಣ್ಣೆ ಸ್ನಾನ ಮಾಡುವ ಮೂಲಕ ಹಬ್ಬವು ಆರಂಭವಾಗುತ್ತದೆ. ಈ ನೀರಿನಿಂದ ಸ್ನಾನ ಮಾಡುವುದರಿಂದ ಆಯುರಾರೋಗ್ಯ ವೃದ್ಧಿಯಾಗಿ ಸಕಲ ಪಾಪಗಳು ನಿವಾರಣೆಯಾಗುತ್ತದೆ. ನರಕಾಸುರನನ್ನು ಕೊಂದ ಪಾಪದ ಪ್ರತೀಕವಾಗಿ ಆ ದಿನ ಸಾಕ್ಷಾತ್ ವಿಷ್ಣುವೇ ಎಣ್ಣೆ ಸ್ನಾನ ಮಾಡಿದ ಎಂದು ಪುರಾಣಗಳು ಸಾರುತ್ತದೆ.

ಹೀಗೆ ನೀರು ತುಂಬುವ ಹಬ್ಬದೊಂದಿಗೆ ದೀಪಾವಳಿಯ ಸಡಗರ ಶುರುವಾಗುತ್ತದೆ. ಆ ದಿನಮುಂಜಾನೆ ಹೆಚ್ಚಿನ ಮನೆಗಳಲ್ಲಿ ದೋಸೆ, ಅವಲಕ್ಕಿ, ಬಾಳೆಹಣ್ಣು ಇಂತಹ ತಿಂಡಿಗಳನ್ನೇ ಮಾಡಲಾಗುತ್ತದೆ. ಇನ್ನು ಎರಡನೇ ದಿನ ಲಕ್ಷ್ಮೀಪೂಜೆ. ಈ ಪೂಜೆ ಮಾಡುವುದರಿಂದ ಧನ ಲಕ್ಷ್ಮೀಯು ಕೊನೆಯ ತನಕ ಲಕ್ಷ್ಮಿಯ ರೂಪದಲ್ಲಿ ಮನೆಯಲ್ಲಿ ವಾಸಿಸುತ್ತಾಳೆ ಎಂಬ ನಂಬಿಕೆ.

ಹಾಗೆಯೇ ಗೋ ಪೂಜೆ. ಭಾರತೀಯ ಸಂಸ್ಕೃತಿಯಲ್ಲಿ ಆಕಳಿಗೆ ತುಂಬಾ ಮಹತ್ವವಿದೆ. ಇಂತಹ ಗೋಮಾತೆಯನ್ನು ಅವಳ ಕರುಗಳ ಸಹಿತ ಪೂಜೆಮಾಡಿ ದೀಪೋತ್ಸವವನ್ನು ಆಚರಿಸಲಾಗುತ್ತದೆ. ಹಾಗೆಯೇ ಮೂರನೇ ದಿನ ಬಲಿಪಾಡ್ಯಮಿ. ಬಲೀಂದ್ರನ ಆರಾಧನೆಯೊಂದಿಗೆ ಹಬ್ಬದ ಸಂಭ್ರಮ ಎಲ್ಲೆಲ್ಲೂ ಮನೆ ಮಾಡುತ್ತಿರುತ್ತದೆ. ಆ ದಿನ ರಾತ್ರಿ ತುಳಸಿ ಕಟ್ಟೆಯ ಮುಂದೆ ಕೈ ಮುಗಿದು ನಿಂತು 3 ಬಾರಿ “ಬಲ ಬಲೀಂದ್ರಾ ಕೂ” ಎಂದು ಕೂಗುವ ಮೂಲಕ ಬಲೀಂದ್ರಾನನ್ನು ಕರೆಯಲಾಗುತ್ತದೆ. ಹೀಗೆ ಅಂಗಡಿ ಪೂಜೆ ಇನ್ನು ಕೆಲವರು ಆಯುಧ ಪೂಜೆಯನ್ನು ದೀಪಾವಳಿಯಂದೇ ಆಚರಿಸುತ್ತಾರೆ.

ಆದರೆ ಈಗ ಕಾಲಚಕ್ರ ವೇಗವಾಗಿ ಚಲಿಸುತ್ತಿದೆ. ದೀಪಾವಳಿ ಎಂದಾಕ್ಷಣ ನಮಗೆ ನೆನಪಾಗುವುದು ಸಿಡಿಮದ್ದುಗಳು, ರಾಕೆಟ್ ಗಳು, ಬಾಣ ಬಿರುಸುಗಳು. ದೀಪಾವಳಿ ಸಂಭ್ರಮ ಮತ್ತು ಸಂತಸದ ಪ್ರತೀಕವಾಗಿದ್ದರೂ ಈ ಪಟಾಕಿ, ಸಿಡಿಮದ್ದು ಮತ್ತು ಬಾಣಬಿರುಸುಗಳಿಂದ ಆಗುವ ಅನಾಹುತ ಮತ್ತು ದುರಂತಗಳಿಗೆ ಎಣೆಯೇ ಇಲ್ಲ. ಇದೇ ಕಾರಣದಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ಶ್ವಾಸಕೋಶ ಸಂಬಂಧಿ ರೋಗಗಳಾದ ಅಸ್ತಮ, ಚರ್ಮರೋಗ ಇತ್ಯಾದಿಗಳು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಬರುತ್ತದೆ. ಅದೇ ರೀತಿ ಭಾರೀ ಸದ್ದಿನ ಪಟಾಕಿ ಸಿಡಿಸುವುದರಿಂದ ಉಂಟಾಗುವ ಸದ್ದಿನಿಂದ ಶ್ರವಣಶಕ್ತಿ ಕುಂದುತ್ತದೆ. ಸಾಕು‌ ಪ್ರಾಣಿಗಳು, ಪಕ್ಷಿ ಸಂಕುಲಗಳು ಬೆದರಿ ಹಿಂಸೆಗೊಳಗಾಗುತ್ತದೆ. ಮಕ್ಕಳು ತುಂಬಾ ಸದ್ದಿನ ಪಟಾಕಿಯನ್ನು ಸಿಡಿಸಿದಾಗ ಭಯ ಭೀತರಾಗಬಹುದು. ಅಜಾಗರೂಕತೆಯಿಂದ ಸಿಡಿಮದ್ದನ್ನು ಬಳಸಿದಲ್ಲಿ ಕೈ-ಕಾಲುಗಳಿಗೆ, ಕಣ್ಣುಗಳಿಗೆ ಹಾನಿಯಾಗಬಹುದು. ಹಾಗೆಯೇ ಪಟಾಕಿ ಸುಡುವ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸಬಹುದು.

ಸಾವಿರಾರು ರೂಪಾಯಿ ಮೌಲ್ಯದ ಸಿಡಿಮದ್ದನ್ನು ಪ್ರತಿವರ್ಷವೂ ದೀಪಾವಳಿಯಂದೇ ಸಿಡಿಸಲಾಗುತ್ತದೆ. ಆದರೆ ಈ ಬಾರಿ ಕೋವಿಡ್-19 ಸೋಕಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಈ ದೀಪಾವಳಿ ಸಂದರ್ಭ ಪಟಾಕಿ ಸಿಡಿಸುವುದನ್ನು ನಿಷೇಧಿಸಿ ಹಸಿರು ಪಟಾಕಿಯನ್ನು ಬಳಸುವಂತೆ ಕರೆ ನೀಡಿದೆ. ಹಸಿರು ಪಟಾಕಿ ಎಂದರೆ ಸಾಮಾನ್ಯ ಪಟಾಕಿಗಿಂತ ಕಡಿಮೆ ಮಾಲಿನ್ಯ ಮಾಡುವ ಪಟಾಕಿಯಾಗಿದೆ. ಹಸಿರು ಪಟಾಕಿಯನ್ನು ಹೊರತುಪಡಿಸಿ ಇತರೆ ಯಾವುದೇ ರೀತಿಯ ಪಟಾಕಿಗಳನ್ನು ಬಳಸುವಂತಿಲ್ಲ. ಪಟಾಕಿ ಸಿಡಿಸುವುದು ಪರಿಸರದ ಜತೆಗೆ ಜನರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ. ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ, ಪರಿಸರ ಕಲುಷಿತವಾಗುವ ಜೊತೆಗೆ ಶ್ವಾಸಕೋಶದ ಸಮಸ್ಯೆ ಇರುವುದರಿಂದ ಇನ್ನಷ್ಟು ತೊಂದರೆ ಉಂಟಾಗಬಹುದು.

ದೀಪಗಳಿಂದ ದೀಪಗಳನ್ನು ಹಚ್ಚುತ್ತ ಮನೆಮನಗಳ ಬೆಳಗುತ್ತ ಸುಡುಮದ್ದಿಗೆ ವಿದಾಯ ಹೇಳುತ್ತ ರುಚಿಯಾದ ಭೋಜನ ಸವಿಯುತ್ತ ಕಳೆಯೋಣ ಸಂತಸದ ಕ್ಷಣಗಳ ಎಲ್ಲರೂ ಒಗ್ಗೂಡುತ್ತಾ. ಹೀಗೆ ದೀಪಾವಳಿ ಎನ್ನುವುದು ಬರೀ ಹೊಸಬಟ್ಟೆ, ಹಬ್ಬದೂಟ ಮತ್ತು ಸುಡುಮದ್ದಿನ ಆರ್ಭಟಕ್ಕೆ ಸೀಮಿತವಾಗಬಾರದು. ಆ ಶುಭಗಳಿಗೆಯಲ್ಲಿ ಮನೆಮಂದಿಯೆಲ್ಲಾ ಒಟ್ಟು ಸೇರಿ ಊರಕೇರಿಯ ಜನರೆಲ್ಲಾ ಒಂದಾಗಿ ಅಜ್ಞಾನ, ಅಂಧಕಾರ ತೊಡೆದು ಜ್ಞಾನದ ದೀಪವನ್ನು ಹಚ್ಚೋಣ. ದ್ವೇಷ, ಅಸೂಯೆ ಬಿಟ್ಟು ಪ್ರೀತಿಯ ಜ್ಯೋತಿ ಬೆಳಗೋಣ. ಜಾತಿ, ಧರ್ಮ, ಕುಲ-ಮತ ಎನ್ನದೆ ಸಂತಸದಿಂದ ದೀಪ ಹಚ್ಚುವುದರ ಮೂಲಕ ಜಗತ್ತಿಗೆ ಅಂಟಿದ ಮಹಾಮಾರಿ ಕೋರೊನವನ್ನು ದೂರಮಾಡೋಣ. ಬೆಳಕಿನ ಹಬ್ಬ ದೀಪಾವಳಿಯನ್ನು ನಾವು ನೀವೆಲ್ಲಾ ಸೇರಿ ಆಚರಿಸೋಣ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು.

Share.

10 Comments

  1. When I initially commented I clicked the “Notify me when new comments are added” checkbox and now each time a comment is added I get three e-mails with the same comment. Is there any way you can remove people from that service? Bless you!

  2. My spouse and i ended up being absolutely joyful that Michael managed to complete his investigation from the precious recommendations he had from your own site. It’s not at all simplistic just to find yourself releasing information which usually people today may have been making money from. And we acknowledge we need the blog owner to appreciate for this. Those illustrations you have made, the simple blog navigation, the relationships you can make it easier to foster – it’s everything exceptional, and it’s really assisting our son in addition to us feel that that topic is enjoyable, which is especially serious. Thank you for the whole thing!

Leave A Reply