ಆಗಲೇ ನಮ್ಮ ಹತ್ತನೇ ತರಗತಿಯ ಪರೀಕ್ಷೆಗಳು ಮುಗಿದು ಫಲತಾಂಶವೂ ಪ್ರಕಟವಾಗಿತ್ತು. ಎಲ್ಲರದ್ದೂ ಒಂದೇ ಪ್ರಶ್ನೆ …”ನೆಕ್ಷ್ಟ್ ಓಲು ಕಾಲೇಜ್?” ಅನ್ನೋದು! ಕೆಲವರು “ಯಾನ್ ಪುತ್ತೂರು, ಯಾನ್ ಕುಡ್ಲ” ಹೀಗೆ ಬಗೆಬಗೆಯ ಉತ್ತರ ನೀಡಿದರೆ, ಹಲವರದ್ದು ಒಂದೇ ಉತ್ತರ- “ಎನನ್ ಆತ್ ದೂರಾಗ್ ಪೂರಾ ಇಲ್ಲಡ್ ಬುಡ್ಪುಜೆರ್ ಯ, ಯಾನ್ ಮುಲ್ಪನೆ ಒಂಜಿ ಉಂಡತ ಎಸ್.ಎಸ್.ಪಿ.ಯು ಐಕೆ,” ಎಂಬುದು!

ಹೀಗೆ 2 ತಿಂಗಳ ಶೈಕ್ಷಣಿಕ ರಜೆ ಕಳೆದು ಕಾಲೇಜಿನ ಮೆಟ್ಟಿಲು ಹತ್ತುವ ತವಕದಲ್ಲಿ “ಎಸ್.ಎಸ್.ಪಿ.ಯು ಕಾಲೇಜ್ ಸುಬ್ರಹ್ಮಣ್ಯ” ಎಂಬ ನಾಮಧೇಯ ಹೊಂದಿರುವ ಕಾಲೇಜಿಗೆ ಹೋಗಿ ನನ್ನ ಹೊಸ ತರಗತಿಯಲ್ಲಿ ಕುಳಿತೆ. ಮನಸ್ಸಲ್ಲಿ ಹತ್ತಾರು ಯೋಚನೆಗಳು, ಹೇಳಿಕೊಳ್ಳಲು ಗೆಳೆಯರೇ ಇಲ್ಲ ಎಂಬ ಬೇಸರ. ಹೀಗಿರುವಾಗಲೇ ಮೇಡಂವೊಬ್ಬರು ಬಂದು ತಮ್ಮ ಪರಿಚಯ ಹೇಳಿ ನಮ್ಮ ಪರಿಚಯ ಮಾಡಿಕೊಂಡರು. ಆ ದಿನ ಮತ್ತೇನೂ ಹೆಚ್ಚು ನಡೆಯಲಿಲ್ಲ.

ಮರುದಿನದಿಂದಲೇ ಪಾಠ, ಪ್ರವಚನ ಆರಂಭವಾಯಿತು. ಮತ್ತೆ ನೋಡಿದರೆ ನನ್ನ 90% ಸಹಪಾಠಿಗಳು ಹೈಸ್ಕೂಲ್‌ನಲ್ಲಿ ಜೊತೆಗಿದ್ದವರೇ ಆಗಿದ್ದರು. ಆದರೂ ಬರೆದು ಬರೆದೂ ಕೈ ನೋವಾದಾಗ “ಯಾನ್ ದಾಯೆ ಆಂಡ್ಲ ಆರ್ಟ್ಸ್ ದೆತೊಂಡೆನಾ!” ಎಂದು ಅನಿಸಿದ್ದೇನೋ ನಿಜ. ಹೀಗೆ ದಿನಗಳು ಕಳೆದಂತೇ, ಗೆಳೆಯ ಗೆಳತಿಯರ ಬರ ನೀಗಿತು. ಕಾಲೇಜಿನ ನಿಜವಾದ ಪ್ರಾಮುಖ್ಯತೆ ನಮಗೆ ತಿಳಿದದ್ದೇ ನಂತರ.

ನಮ್ಮ ಅದೃಷ್ಟವೆಂಬಂತೆ ಎಷ್ಟೋ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಕಾಲೇಜಿನ ಎನ್. ಎಸ್. ಎಸ್ ಘಟಕವನ್ನು ನಾವು ಸೇರಿದ ವರ್ಷವೇ ಪುನರಾರಂಭಿಸಲಾಯಿತು. ಹೀಗೆ ಪರೀಕ್ಷೆಗಳು, ಎನ್.ಎಸ್.ಎಸ್ ಕ್ಯಾಂಪ್‌, ಕಾಲೇಜ್ ಡೇ, ಸ್ಪೋರ್ಟ್ಸ್ ಡೇಗಳ ನಡುವೆ ನಮ್ಮ ಪ್ರಥಮ ಪಿಯುಸಿ ಮುಗಿದದ್ದೇ ತಿಳಿಯಲಿಲ್ಲ. ನಂತರ ಬರಲಿದ್ದ “ದ್ವಿತೀಯ ಪಿಯುಸಿ” ಈ ಪದ ಕೇಳಿಯೇ ನಮಗೆಲ್ಲ ಏನೋ ಒಂಥರಾ ಭಯ! ಕಾಲೇಜಲ್ಲಿ ಉಪನ್ಯಾಸಕರ “ಒಳ್ಳೆ ಓದಿ ಇಲ್ಲ ಅಂದ್ರೆ ಈ ಸಲ ಬಾಕಿ ಆಗ್ತೀರಾ…” ಎನ್ನುವ ಮಾತುಗಳಾದರೆ, ಮನೆಯಲ್ಲಿ “ಇತ್ತೆ ಸೆಕೆಂಡ್ ಪಿಯುಸಿ ದುಂಬುದಂಚನೆ ಮರ್ಲ್ ಬತ್ತುಂಡ ಆವಂದ್..” ಎನ್ನುವ ಅಪ್ಪ,ಅಮ್ಮನ ಬೆದರಿಕೆಯ ಡೈಲಾಗ್ ಗಳು!

ನನ್ನ ಎರಡು ವರ್ಷದ ಪಿಯುಸಿ ಕಾಲೇಜ್ ಜೀವನದಲ್ಲಿ ಮರೆಯಲಾಗದ ಹಲವಾರು ಸಂಗತಿಗಳಿವೆ. ಅದರಲ್ಲಿ ಎನ್.ಎಸ್.ಎಸ್ ಕ್ಯಾಂಪ್ ಕೂಡ ಒಂದು. ಇದಕ್ಕೆ ಕಾರಣ ಅಲ್ಲಿನ ಸಂಯೋಜನಾಧಿಕಾರಿಗಳು ನಮ್ಮೊಂದಿಗೆ ಗೆಳೆಯರ ಅಂತೆ ಇದ್ದು ನಮ್ಮನ್ನು ಹುರಿದುಂಬಿಸುತ್ತಿದ್ದ ರೀತಿ. ಅಲ್ಲಿಯ ಶಿಕ್ಷಕ ವೃಂದವೇ ನಮ್ಮ ಎಲ್ಲಾ ಸಾಧನೆಗಳಿಗೆ ಕಾರಣ ಎಂದರೆ ತಪ್ಪಾಗಲಾರದು. ಕಾಲೇಜಿನ ಕೊನೆಯ ದಿನದಂದು ಎಲ್ಲರ ಕಣ್ಣಿನಂಚಿನಲ್ಲಿದ್ದ ಕಣ್ಣೀರೇ ಆ ಕಾಲೇಜು ಜೀವನ ಎಷ್ಟು ಅದ್ಭುತವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿತ್ತು. ಒಟ್ಟಿನಲ್ಲಿ ಹೇಳುವುದಾದರೆ “ಎಸ್.ಎಸ್. ಪಿ.ಯು ಕಾಲೇಜ್” ನಾ ಕಂಡ ದೇವಾಲಯವೇ ಸರಿ…

 

Share.

5 Comments

  1. Youre so cool! I dont suppose Ive read anything like this before. So nice to search out somebody with some authentic ideas on this subject. realy thanks for beginning this up. this website is something that is needed on the net, someone with just a little originality. useful job for bringing something new to the web!

  2. I absolutely love your blog.. Pleasant colors & theme.
    Did you develop this amazing site yourself? Please reply
    back as I’m attempting to create my own personal blog and want to find out where you got this
    from or just what the theme is named. Thanks!

  3. Attractive section of content. I just stumbled upon your website and in accession capital to assert that I acquire in fact enjoyed account your blog posts. Anyway I’ll be subscribing to your feeds and even I achievement you access consistently fast.

Leave A Reply