ಬಿಸಿಲ ಝಳಕ್ಕೆ ದೇಹದಲ್ಲಿ ಬೆವರುವಿಕೆ ಸಮಸ್ಯೆ ಅತಿಯಾಗಿ ಕಂಡು ಬರುವುದರಿಂದ, ದೇಹದಲ್ಲಿ ನೀರಿನಾಂಶ ಕೊರತೆ ಉಂಟಾಗಿ, ನಿರ್ಜಲೀಕರಣ ಸಮಸ್ಯೆ ಕೂಡ ಕಂಡು ಬರಲು ಶುರುವಾಗುತ್ತದೆ. ಆದರೆ ಈ ಸಮಯದಲ್ಲಿ ಮನಸ್ಸು ಕೃತಕ ಸಿಹಿ ಅಂಶ ಇರುವ ತಂಪು ಪಾನೀಯ ಗಳ ಕಡೆಗೆ ಹೆಚ್ಚು ಒಲವು ತೋರುವುದರಿಂದ, ಆದಷ್ಟು ಇದರಿಂದ ದೂರವಿದ್ದು, ಕೆಲವೊಂದು ನೈಸರ್ಗಿಕ ಪಾನೀಯಗಳನ್ನು ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.

ಜೀರಿಗೆ ನೀರು:
- ಪ್ರತಿನಿತ್ಯದ ಅಡುಗೆಯಲ್ಲಿ ಬಳಸುವ ಈ ಜೀರಿಗೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ಹೆಚ್ಚು- ಕಮ್ಮಿ ಎಲ್ಲರಿಗೂ ಗೊತ್ತೇ ಇದೆ. ದೇಹವನ್ನು ತಂಪಾಗಿಡುವ ಎಲ್ಲಾ ಗುಣ ಲಕ್ಷಣಗಳನ್ನು ಹೊಂದಿರುವ ಈ ಪುಟ್ಟ ಕಾಳಿನಲ್ಲಿ, ಕೆಲ ವೊಂದು ಬಗೆಯ ಅನಾರೋಗ್ಯವನ್ನು ದೂರವಿಡುವ ಎಲ್ಲಾ ಗುಣಲಕ್ಷಣಗಳು ಕೂಡ ಇದರಲ್ಲಿ ಕಂಡುಬರುತ್ತದೆ.
- ತನ್ನಲ್ಲಿ ಹೇರಳವಾಗಿ ನಾರಿನಾಂಶವನ್ನು ಹೊಂದಿರುವ ಈ ಪುಟ್ಟಕಾಳು, ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಅಚ್ಚುಕ ಟ್ಟಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಆಯುರ್ವೇದದಲ್ಲಿ ಕೂಡ ಇದೊಂದು ಆರೋಗ್ಯಕಾರಿ ಪಾನೀಯ ಎಂದು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
ಮಜ್ಜಿಗೆ:
- ಹಾಲಿನ ಉತ್ಪನ್ನಗಳನ್ನು ಪ್ರತಿನಿತ್ಯದ ನಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಂಡು ಬಂದರೆ, ಅದರಿಂದ ದೇಹವು ತಂಪಾಗಿ ಇರುವುದರ ಜೊತೆಗೆ ಆರೋಗ್ಯಕ್ಕೆ ಕೂಡ ಹಲವಾರು ರೀತಿಯ ಆರೋಗ್ಯ ಕಾರಿ ಲಾಭಗಳು ಸಿಗುತ್ತವೆ, ಎಂದು ಆಯುರ್ವೇದವು ಹೇಳುತ್ತದೆ. ಅದರಲ್ಲೂ ಹಾಲು, ಮೊಸರು ಹಾಗೂ ಮಜ್ಜಿಗೆಯನ್ನು ನಿಯಮಿತವಾಗಿ, ದಿನಾ ಸೇವಿಸುತ್ತಾ ಬಂದರೆ, ಅದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನಿರೀಕ್ಷಿಸಬಹುದಾಗಿದೆ.
- ಪ್ರತಿದಿನ ಊಟದ ಬಳಿಕ, ದಿನ ಕ್ಕೊಂದು ಲೋಟ ಮಜ್ಜಿಗೆ ಕುಡಿಯುವ ಅಭ್ಯಾಸ ಇಟ್ಟು ಕೊಂಡರೆ, ಜೀರ್ಣ ಕ್ರಿಯೆ ಪ್ರಕ್ರಿಯೆಯು, ಅಚ್ಚುಕಟ್ಟಾಗಿ ಕಾರ್ಯ ನಿರ್ವಹಣೆ ಆಗುವುದು ಮಾತ್ರವಲ್ಲದೆ, ಬೇಸಿಗೆ ಯಲ್ಲಿ ಅತಿಯಾಗಿ ಕಾಡುವ ಸೆಕೆ ಅಥವಾ ಉಷ್ಣತೆ ಇರುವ ಸಂದರ್ಭದಲ್ಲಿ ಇದು ದೇಹಕ್ಕೆ ಶಮನ ನೀಡುವುದು.
ಎಳನೀರು:
ಎಳನೀರು ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳಾದ, ವಿಟಮಿನ್ ಸಿ, ಕಾಲ್ಸಿಯಂ, ಮೆಗ್ನೇಶಿಯಂ, ಪೊಟ್ಯಾಶಿಯಂ ಮತ್ತು ಸೋಡಿಯಂ ಅಂಶಗಳು ಹಾಗೂ ಇತರ ಬಗೆಯ ಖನಿಜಾಂಶಗಳು, ಆರೋಗ್ಯವನ್ನ ಕಾಪಾಡುವುದರ ಜೊತೆಗೆ, ಬೇಸಗೆಯಲ್ಲಿ ದೇಹಕ್ಕೆ ಎಲೆಕ್ಟ್ರೋಲೈಟ್ಸ್‌ನಂತೆ, ಕಾರ್ಯ ನಿರ್ವಹಿಸಿ ನಿರ್ಜಲೀಕರಣ ವಾಗದಂತೆ ತಡೆಯುವುದು.
ಕಬ್ಬಿನ ಹಾಲು:
ಬಿರು ಬಿಸಿಲಿಗೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ, ದೇಹಕ್ಕೆ ತಂಪುಣಿಸುವ ಮೊತ್ತೊಂದು ಪಾನೀಯ ಎಂದರೆ ಅದು ಕಬ್ಬಿನ ಹಾಲು. ಬೇಸಿಗೆಯಲ್ಲಿ ಉರಿ ಬಿಸಿಲಿನಿಂದಾಗಿ ಕಾಡುವ ನಿರ್ಜಲೀ ಕರಣ ಸಮಸ್ಯೆಗೆ ಕಬ್ಬಿನ ಹಾಲು ಅಥವಾ ಕಬ್ಬಿನ ಜ್ಯೂಸ್, ಒಂದು ಒಳ್ಳೆಯ ಪಾನೀಯ ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲದೆ ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ಕಬ್ಬಿಣಾಂಶ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಇತರ ಎಲೆಕ್ಟ್ರೋಲೈಟ್‌ಗಳು, ಈ ಪಾನೀಯದಲ್ಲಿ ಸಮೃದ್ಧ ಪ್ರಮಾಣದಲ್ಲಿ ಕಂಡುಬರುವುದರಿಂದ, ಕಿಡ್ನಿಸ್ಟೋನ್, ಜೀರ್ಣ ಕ್ರಿಯೆ ಸಮಸ್ಯೆ, ಅಥವಾ ಇತರ ಬಗೆಯ ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕಾಗಿ ಎರಡು ಟೇಬಲ್ ಚಮಚ ಆಗುವಷ್ಟು ಜೀರಿಗೆಯನ್ನು ರಾತ್ರಿ ಪೂರ್ತಿ ನೆನೆಸಿಟ್ಟು, ಮರುದಿನ ಕೊಂಚ ಬೆಲ್ಲ ಸೇರಿಸಿ, ಬಾಯಾರಿಕೆ ಆದಾಗ ಕುಡಿಯುತ್ತಾ ಬಂದರೆ, ದೇಹವು ತಂಪಾಗಿರುವುದು, ಆರೋಗ್ಯಕ್ಕೂ ಒಳ್ಳೆಯದು.
ಕಲ್ಲಂಗಡಿ:
ಬೇಸಿಗೆಯ ಸಮಯದಲ್ಲಿ ನೀರಿನಾಂಶ ಅಧಿಕವಾಗಿ ಇರುವ ಹಣ್ಣುಗಳನ್ನು ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಕಲ್ಲಂಗಡಿ ಹಣ್ಣಿನಲ್ಲಿ ಶೇ. 92ರಷ್ಟು ನೀರಿನಾಂಶ ಇರುವುದರಿಂದ, ದೇಹವನ್ನು ಹೈಡ್ರೇಟ್ ಆಗಿಡುವುದು ಮಾತ್ರವಲ್ಲದೆ, ಆರೋಗ್ಯವನ್ನು ಕಾಪಾಡುವುದು.. ಹೀಗಾಗಿ ಬೇಸಿಗೆ ಆದಷ್ಟು, ಈ ಹಣ್ಣಿನ ಜ್ಯೂಸ್ ಮಾಡಿ ಕುಡಿಯುವುದರಿಂದ ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.