ಸರಾಸರಿ ತೂಕಕ್ಕಿಂತ ದೇಹದ ತೂಕವು ಹೆಚ್ಚಾಗಿ ಬೊಜ್ಜು ಆವರಿಸಿಕೊಂಡರೆ ಆಗ ಕಪಾಟಿನಲ್ಲಿರುವಂತಹ ಯಾವುದೇ ಬಟ್ಟೆ ಕೂಡ ಧರಿಸಲು ಆಗದು, ಇದು ಮಾತ್ರವಲ್ಲದೆ ಲಿಫ್ಟ್ ಕೆಟ್ಟು ಹೋದರೆ ಎರಡು ಮಹಡಿ ಮೆಟ್ಟಿಲು ಏರಿಕೊಂಡು ಹೋಗಲು ಅಸಾಧ್ಯವಾಗುವುದು. ಈ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಕೆಲವರು ಹಾಗೆ ಬೊಜ್ಜು ದೇಹದೊಂದಿಗೆ ಜೀವನ ಸಾಗಿಸುತ್ತಾ ಇರುವರು. ಇನ್ನು ಕೆಲವರು ಅಂತಿಮ ಹಂತದಲ್ಲಿ ತಮ್ಮ ದೇಹದ ತೂಕ ಇಳಿಸಲು ವೈದ್ಯರು ಹೇಳಿದ ಕಾರಣದಿಂದಾಗಿ ತೂಕ ಇಳಿಸಲು ಪ್ರಯತ್ನಿಸುವರು. ಸರಿಯಾದ ವ್ಯಾಯಾಮ ಮತ್ತು ಕಠಿಣ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ತೂಕ ಇಳಿಸಿಕೊಳ್ಳಬಹುದು.
ದೇಹದ ತೂಕ ಇಳಿಸಲು ನಿಮ್ಮ ದಿನಚರಿ ಹೀಗೆ ಇರಬೇಕು..
- ಸರ್ವ ಕಾಯಿಲೆಗೆ ಯೋಗ ಮದ್ದಿನಂತೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಎದ್ದು ಕನಿಷ್ಟ ಒಂದು ಗಂಟೆ ಯೋಗ ಮಾಡಿ. ಅಥವಾ ವ್ಯಾಯಾಮ ಮಾಡಿ. ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯದು.
- ವ್ಯಾಯಾಮ ಮುಗಿದ ಬಳಿಕ ಒಂದು ದೊಡ್ಡ ಲೋಟಕ್ಕೆ ಬಿಸಿ ನೀರು ಹಾಕಿ. ಅದಕ್ಕೆ ಅರ್ಧ ಭಾಗದಷ್ಟು ನಿಂಬೆರಸ ಹಾಕಿ ಕುಡಿಯಿರಿ.
- ದೇಹಕ್ಕೆ 8 ಗಂಟೆ ನಿದ್ರೆ ಅನಿವಾರ್ಯ. ಹೀಗಾಗಿ ರಾತ್ರಿ ಬೇಗ ಮಲಗಿ. 8 ಗಂಟೆ ನಿದ್ರೆ ಮಾಡಿ.
- ಉಪ್ಪು ಶರೀರದಲ್ಲಿ ಕೊಬ್ಬನ್ನು ಸಂಗ್ರಹಿಸುತ್ತದೆ. ಹೀಗಾಗಿ ಊಟದಲ್ಲಿ ಉಪ್ಪಿನ ಅಂಶ ಕಡಿಮೆ ಇರಲಿ…
- ದಿನಕ್ಕೆ ಎರಡರಿಂದ ಮೂರು ಕಿಲೋಮೀಟರ್ ನಡೆಯಿರಿ. ಇದರಿಂದ ದೇಹದ ತೂಕ ಕಡಿಮೆಯಾಗುವುದು.
- ಬೆಳಿಗ್ಗೆ ಉಪಹಾರ ತಪ್ಪಿಸಬೇಡಿ. ಮಧ್ಯಾಹ್ನದ ಊಟ ಸ್ವಲ್ಪವಾಗಿರಲಿ. ಜೊತೆಗೆ ರಾತ್ರಿ ಹಣ್ಣು- ತರಕಾರಿ ತಿನ್ನಿ. ಜಂಕ್ ಫುಡ್ ತಿನ್ನಬಾರದು.

ಕೆಲವೊಂದು ಆಹಾರವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದರಿಂದ ತೂಕ ಕಳೆದುಕೊಳ್ಳಲು ಸಹಕಾರಿ ಆಗಲಿದೆ. ಆ ಆಹಾರಗಳು ಯಾವುದು..?
ಪಪ್ಪಾಯಿ: ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿಂದರೆ ಅದರಿಂದ ತೂಕ ಇಳಿಸಲು ತುಂಬಾ ನೆರವಾಗಲಿದೆ. ಯಾಕೆಂದರೆ ಈ ಅದ್ಭುತ ಹಾಗೂ ರುಚಿಕರ ಹಣ್ಣಿನಲ್ಲಿ ಪಪೈನ್ ಎನ್ನುವ ಅಂಶವಿದೆ ಮತ್ತು ಇದು ಕೊಬ್ಬು ಕರಗಿಸಿ, ಫ್ರೀ ರ್ಯಾಡಿಕಲ್ ನ್ನು ದೂರ ಮಾಡುವುದು ಹಾಗೂ ದೇಹದಲ್ಲಿರುವಂತಹ ಅತಿಯಾದ ನೀರಿನಾಂಶವನ್ನು ತೆಗೆಯುವುದು. ಇದರಲ್ಲಿ ಹೀರಿಕೊಳ್ಳಬಹುದಾದ ನಾರಿನಾಂಶವಿದೆ ಮತ್ತು ತುಂಬಾ ಕಡಿಮೆ ಕ್ಯಾಲರಿ ಇದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಆಗ ಖಂಡತವಾಗಿಯೂ ದೇಹಕ್ಕೆ ಹಲವಾರು ಲಾಭಗಳು ಸಿಗುವುದು ಮತ್ತು ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಇದು ಹೆಚ್ಚು ತೂಕ ಕೂಡ ಹಾಕುವುದಿಲ್ಲ.
ಸಲಾಡ್: ಹಣ್ಣುಗಳು ಹಾಗೂ ತರಕಾರಿಯಿಂದ ತಯಾರಿಸಿಕೊಂಡಿರುವಂತಹ ಸಲಾಡ್ ಅನ್ನು ಬೆಳಗ್ಗೆ ಸೇವಿಸಿದರೆ, ಖಂಡತವಾಗಿಯೂ ಅದರಿಂದ ಹಲವಾರು ಲಾಭಗಳು ಇವೆ. ತರಕಾರಿ ಹಾಗೂ ಹಣ್ಣುಗಳಲ್ಲಿ ಹೀರಿಕೊಳ್ಳಬಹುದಾದ ನಾರಿನಾಂಶವಿದೆ ಮತ್ತು ಇದು ಹೊಟ್ಟೆಯನ್ನು ತುಂಬುವಂತೆ ಮಾಡುವುದು. ಅದೇ ರೀತಿಯಾಗಿ ಇವುಗಳಲ್ಲಿ ಕ್ಯಾಲರಿ ಅಂಶವು ಕಡಿಮೆ ಇದೆ. ಇದರಿಂದ ಹೊಟ್ಟೆ ಭಾರ ಮತ್ತು ಅಹಿತರವಾಗಿ ಇರದು. ತರಕಾರಿ ಹಾಗೂ ಹಣ್ಣುಗಳಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇವೆ ಮತ್ತು ಇದರೊಂದಿಗೆ ವಿಟಮಿನ್ ಹಾಗೂ ಖನಿಜಾಂಶಗಳು ಯಥೇಚ್ಛವಾಗಿದೆ.
ಸೇಬು: ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎನ್ನುವ ಮಾತಿದೆ. ಸೇಬಿನಲ್ಲಿ ಇರುವಂತಹ ಅದ್ಭುತವಾದ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಸಹಕಾರಿ ಮತ್ತು ಇದು ಆರೋಗ್ಯವನ್ನು ಕಾಪಾಡುವುದು. ತೂಕ ಇಳಿಸಿಕೊಳ್ಳಲು ಬಯಸಿದರೆ ಈ ಹಣ್ಣು ತುಂಬಾ ಪರಿಣಾಮಕಾರಿ. ಸೇಬಿನಲ್ಲಿ ಹೆಚ್ಚಿನ ಪ್ರಮಾಣದ ನೀರು ಇದೆ ಮತ್ತು ಹೀರಿಕೊಳ್ಳಬಹುದಾದ ನಾರಿನಾಮಶವಿದೆ. ಇದು ಬೇಗನೆ ಹೊಟ್ಟೆ ತುಂಬುವಂತೆ ಮಾಡುವುದು ಮತ್ತು ದೇಹಕ್ಕೆ ಯಾವುದೇ ಹೆಚ್ಚುವರಿ ಕ್ಯಾಲರಿ ಸೇರ್ಪಡೆ ಆಗುವುದಿಲ್ಲ.
ಕಲ್ಲಂಗಡಿ: ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನೀರು ಹಾಗೂ ಹೀರಿಕೊಳ್ಳಬಹುದಾದ ನಾರಿನಾಂಶವಿದೆ. ಇದರಿಂದ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿಂದರೆ ಅದು ಎರಡು ದೊಡ್ಡ ಲೋಟ ನೀರು ಕುಡಿದಷ್ಟು ಸಮಾನವಾಗಿರುವುದು. ಇದರಿಂದ ನೀವು ತೂಕ ಇಳಿಸಲು ಬಯಸಿದ್ದರೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಿರಿ.
ಲಿಂಬೆ ಹಣ್ಣು: ತಾಜಾ ಲಿಂಬೆ ಹಣ್ಣಿನ ರಸ ತೆಗೆದು ಅದನ್ನು ಒಂದು ಲೋಟ ಬಿಸಿ ನೀಡಿಗೆ ಹಿಂಡಿಕೊಂಡು, ಸಕ್ಕರೆ ಮತ್ತು ಉಪ್ಪು ಹಾಕದೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆಗ ಖಂಡಿತವಾಗಿಯೂ ತೂಕ ಇಳಿಸಲು ಇದು ಸಹಕಾರಿ. ಯಾಕೆಂದರೆ ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. ಇದು ಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುವುದು ಮತ್ತು ಚಯಾಪಚಯ ಕ್ರಿಯೆ ವೃದ್ಧಿಸುವುದು.
1 Comment
cheap generic cialis canada buy generic cialis canada