ನೀವು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಕ್ರಮ ಹೇಗಿರಬೇಕು ಮತ್ತು ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತಾಗಿ ತಿಳಿಯೋಣ. ಮಧುಮೇಹ ಸಮಸ್ಯೆಯಿಂದ ಅದೆಷ್ಟೋ ಜನ ನರಳುತ್ತಿರಬಹುದು. ನಿಮ್ಮ ಆಹಾರ ಕ್ರಮ ಸರಿಯಾಗಿದ್ದರೆ ಮಾತ್ರ ಸಮಸ್ಯೆಯನ್ನು ಈ ನಿಯಂತ್ರಣಕ್ಕೆ ತರಲು ಸಾಧ್ಯ.
ನಿಯಮಿತವಾಗಿ ಆಹಾರವನ್ನು ಸೇವಿಸಿ. ಜತೆಗೆ ಸರಿಯಾದ ಸಮಯಕ್ಕೆ ನಿಮ್ಮ ಆಹಾರ ವ್ಯವಸ್ಥೆ ಇರಬೇಕು. ಹೆಚ್ಚು ಹೊತ್ತು ಹಸಿವನ್ನು ಕಟ್ಟಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಸಮಸ್ಯೆಯನ್ನುಂಟು ಮಾಡುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಏಕದಳ ಉತ್ಪನ್ನ, ನೂಡಲ್ಸ್, ಬಿಳಿ ಅಕ್ಕಿ, ಬ್ರೆಡ್ ಇತ್ಯಾದಿಗಳಿಂದ ದೂರವಿರಿ. ದೇಹದಲ್ಲಿ ರಕ್ತದ ಮಟ್ಟವನ್ನು ನಿಯಂತ್ರಿಸಲು ವ್ಯಾಯಾಮ ಅಭ್ಯಾಸ ರೂಢಿಯಲ್ಲಿರಲಿ.
ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ:
ಮಧುಮೇಹ ಉತ್ತಮವಾದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಹೀಗಿರುವಾಗ ರಸ್ತೆಯ ಬದಿಯಲ್ಲಿ ಸೇವಿಸುವ ಚಾಟ್ಸ್ ಫುಡ್ಗಳಿಂದ ದೂರವಿಡಿ. ಜಂಕ್ಫುಡ್ಗಳ ಸೇವನೆಯಿಂದ ದೂರವಿರಿ. ಏಕೆಂದರೆ ಇದು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
ಮಧುಮೇಹ ನಿಮ್ಮ ಆರೋಗ್ಯದಲ್ಲಿ ಬೊಜ್ಜು, ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಹ್ರದ್ರೋಗದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಆರೋಗ್ಯದಲ್ಲಿ ಏನೇ ಏರು-ಪೇರು ಕಂಡು ಬಂದರೂ ಸಹ ಹತ್ತಿರದ ವೈದ್ಯರಲ್ಲಿ ಪರೀಕ್ಷೆಗೆ ಒಳಗಾಗುವುದು ಮುಖ್ಯ. ನಿಮ್ಮ ಆರೋಗ್ಯದ ಕುರಿತಾಗಿ ಯಾವುದೇ ನಿರ್ಲಕ್ಷ್ಯ ಬೇಡ. ಅದರಲ್ಲಿಯೂ ಮುಖ್ಯವಾಗಿ ಕೊರೊನಾ ವೈರಸ್ ಸಾಂಕ್ರಾಮಿಕ ಕಾಯಿಲೆಯ ಸಮಯದಲ್ಲಿ ನಿಮ್ಮ ಆರೋಗ್ಯದ ಕುರಿತಾಗಿ ನೀವು ಎಷ್ಟು ಕಾಳಜಿವಹಿಸಿದರೂ ಸಾಲದು.
ಮಧುಮೇಹ ಸಮಸ್ಯೆಯಿಂದ ನಿಯಂತ್ರಣ ಹೊಂದಲು ನಿಮಗೆ ವೈದ್ಯರು ನೀಡಿದ ಔಷಧಿಗಳನ್ನು ಸರಿಯಾಗಿ ಸೇವಿಸಿ. ಜತೆಗೆ ನಿಮ್ಮ ಆಹಾರ ಕ್ರಮ ಸರಿಯಾಗಿರಲಿ. ವೈದ್ಯರು ನೀಡಿದ ಸಲಹೆಗಳಿಗೆ ನಿರ್ಲಕ್ಷ್ಯ ತೋರದೆ ಸರಿಯಾಗಿ ಪಾಲಿಸಿ.
ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ನೇರಳೆ ಹಣ್ಣನ್ನು ಸೇವಿಸಿ:
ಇನ್ನು, ನಾವು ಸಂಪೂರ್ಣವಾಗಿ ಆರೋಗ್ಯವಾಗಿರಲು ಬಯಸಿದರೆ ಪ್ರಕೃತಿಯಲ್ಲಿ ಸುಲಭವಾಗಿ ಲಭ್ಯವಿರುವ ಆಹಾರವನ್ನು ಮೊದಲು ನಾವು ಆಯ್ಕೆ ಮಾಡಿಕೊಳ್ಳಬೇಕು. ನೈಸರ್ಗಿಕವಾಗಿ ದೊರೆಯುವ ಮತ್ತು ಆರೋಗ್ಯಕ್ಕೂ ಕೂಡ ಹೆಚ್ಚು ಉಪಯುಕ್ತವಾದವುಗಳಲ್ಲಿ ನೇರಳೆ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಈ ಹಣ್ಣು ಪೋಷಕಾಂಶ ಭರಿತವಾಗಿದ್ದು, ಹಲವು ಕಾಯಿಲೆಗಳಿಗೆ ಪರಿಹಾರವಾಗಿದೆ. ನೇರಳೆ ಹಣ್ಣು ಮಾತ್ರವಲ್ಲ ಇದರ ಎಲೆ ಮತ್ತು ತೊಗಟೆ ಕೂಡ ದೇಹಕ್ಕೆ ತುಂಬಾ ಒಳ್ಳೆಯದು. ನೇರಳೆ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
- ದೀರ್ಘಕಾಲದವರೆಗೆ ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕಲ್ಮಶಗಳನ್ನು ತೊಡೆದುಹಾಕಲು ನೇರಳೆ ಹಣ್ಣು ತಿನ್ನುವುದು ಒಳ್ಳೆಯದು.
- ಮಧುಮೇಹದಂತಹ ಕಾಯಿಲೆಯಿಂದ ಬಳಲುತ್ತಿರುವವರು ನೇರಳೆ ಹಣ್ಣನ್ನು ಸೇವಿಸುವುದು ಉತ್ತಮ.
- ಕೆಲವೊಮ್ಮೆ ಕರಳಿನಲ್ಲಿ ಕೂದಲು ಸೇರುವ ಸಾಧ್ಯತೆ ಇರುತ್ತದೆ. ಇದನ್ನು ಹೊರಹಾಕುವ ಶಕ್ತಿ ನೇರಳೆ ಹಣ್ಣಿಗೆ ಇದೆ.
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೇರಳೆ ಹಣ್ಣು ಪ್ರಮುಖ ಪಾತ್ರವಹಿಸಿತ್ತದೆ ಮತ್ತು ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
- ಮೂತ್ರದ ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ನೇರಳೆ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ.
- ಬಂಜೆತನ ಇರುವವರು ನೇರಳೆ ಹಣ್ಣು ತಿನ್ನುವುದರಿಂದ ತ್ವರಿತ ಶಕ್ತಿಯನ್ನು ಪಡೆಯುತ್ತಾರೆ.
- ಬೆನ್ನು ನೋವು, ಮೊಣಕಾಲು ನೋನಿನಂತಹ ಸಮಸ್ಯೆಯನ್ನು ದೂರ ಮಾಡುತ್ತದೆ.
- ಅತಿಸಾರದಿಂದ ಬಳಲುತ್ತಿರುವವರಿಗೆ ನೇರಳೆ ಹಣ್ಣಿನ ರಸವನ್ನು ಎರಡು ಮೂರು ಚಮಚ ನೀಡಬೇಕು.
- ಕೆಲವು ಅಧ್ಯಯನಗಳು ನೇರಳೆ ಹಣ್ಣು ಯಕೃತ್ತಿನ ಕಾರ್ಯವನ್ನು ನಿಯಂತ್ರಿಸಲು ಅಥವಾ ಶುದ್ಧೀಕರಿಸಲು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದೆ.
- ಈ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಮೆದುಳಿಗೆ ಮತ್ತು ಹೃದಯಕ್ಕೆ ಹೆಚ್ಚು ಉಪಯುಕ್ತಕಾರಿಯಾಗಿದೆ.
- ಜ್ವರ ಬಂದಾಗ ಕೊತ್ತಂಬರಿ ರಸದೊಂದಿಗೆ ನೇರಳೆ ಹಣ್ಣಿನ ಜ್ಯೂಸ್ ಸೇವಿಸಿದರೆ, ದೇಹದ ಉಷ್ಣತೆ ಕಡಿಮೆಯಾಗುತ್ತದೆ.
- ಮೂತ್ರದ ಉರಿಯೂತವನ್ನು ಕಡಿಮೆ ಮಾಡಲು ನಿಂಬೆ ರಸ ಮತ್ತು ನೇರಳೆ ಹಣ್ಣಿನ ರಸವನ್ನು ಎರಡು ಚಮಚ ನೀರಿನಲ್ಲಿ ಬೇರೆಸಿ ಸೇವಿಸಬೇಕು.
- ಅಧಿಕ ತೂಕ ಹೊಂದಿರುವ ಜನರು ದಿನಕ್ಕೆ ಆರರಿಂದ ಎಂಟು ಬಾರಿ ನೇರಳೆ ಹಣ್ಣನ್ನು ತಿನ್ನಬಹುದು ಏಕೆಂದರೆ ಇದು ಕೊಬ್ಬಿನಾಂಶವನ್ನು ದೂರ ಮಾಡುತ್ತದೆ.
- ದಿನಕ್ಕೆ ಒಂದು ಬಾರಿ ನೇರಳೆ ಹಣ್ಣು ಸೇವಿಸುವುದರಿಂದ ಆಗಾಗ ವೈದ್ಯರನ್ನು ಭೇಟಿಯಾಗಬೇಕಾದ ಅನಿವಾರ್ಯತೆ ಇರುವುದಿಲ್ಲ.
ಗರ್ಭಿಣಿಯರು ನೇರಳೆ ಹಣ್ಣು ತಿನ್ನಬಾರದು. ಏಕೆಂದರೆ ಇದು ಕರಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಈ ಹಣ್ಣುಗಳನ್ನು ಊಟ ಮಾಡಿದ ಒಂದು ಗಂಟೆಯ ನಂತರ ತೆಗೆದುಕೊಂಡರೆ ಆಹಾರ ಜೀರ್ಣವಾಗುತ್ತದೆ.