ಒಂದು ಅಧ್ಯಯನವು ಹೆಚ್ಚು ಚುಂಬಿಸಿದರೆ, ಅದರಿಂದ ಕೆಲವು ಆರೋಗ್ಯ ಲಾಭಗಳು ಕೂಡ ಇವೆ ಎಂದು ಹೇಳಿವೆ… ಪ್ರೀತಿಯ ಸೂಚಕವಾಗಿ ಪ್ರೀತಿ ಪಾತ್ರರರನ್ನು ಚುಂಬಿಸುತ್ತೇವೆ. ಇದು ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರೀತಿ ವ್ಯಕ್ತಪಡಿಸುವ ಒಂದು ಹಾದಿ. ಮಕ್ಕಳಿಗೆ ಹಣೆಯ ಮೇಲೆ ಮತ್ತು ವೃದ್ಧರಿಗೆ ಕೆನ್ನೆಗೆ ಮತ್ತು ಪ್ರೀತಿಯ ಸಂಗಾತಿಗೆ ತುಟಿಗೆ ಚುಂಬಿಸುತ್ತೇವೆ. ಇದರಿಂದ ಆರೋಗ್ಯಕ್ಕೂ ಒಳ್ಳೆಯದಾಗುತ್ತದೆ ಎಂದು ಹೇಳುತ್ತದೆ ಅಧ್ಯಯನ.
ರೋಗನಿರೋಧಕ ಶಕ್ತಿ ಹೆಚ್ಛಾಗುತ್ತದೆ: ಚುಂಬಿಸಿದ ವೇಳೆ ದೇಹದಲ್ಲಿ ರೋಗನಿರೋಧಕವು ಸೃಷ್ಟಿ ಆಗುವುದು ಮತ್ತು ಇದು ಬಾಹ್ಯ ಬ್ಯಾಕ್ಟೀರಿಯಾ ವಿರುದ್ಧ ಹೋರಾಟ ನಡೆಸುವುದು. ಹೀಗಾಗಿ ಚುಂಬನವು ತುಂಬಾ ಪರಿಣಾಮಕಾರಿ ಆಗಿರುವುದು. ಯಾರನ್ನಾದರೂ ಚುಂಬಿಸಿದರೆ ಆಗ ದೇಹದಲ್ಲಿ ಆಕ್ಸಿಟೊಸಿನ್, ಎಂಡ್ರೋಪಿನ್ ಮತ್ತು ಡೊಪಮೈನ್ ಎನ್ನುವ ರಾಸಾಯನಿಕವು ಬಿಡುಗಡೆ ಆಗುವುದು. ಇದರಿಂದ ಒತ್ತಡ ಕಡಿಮೆ ಆಗಿ, ಮನಸ್ಥಿತಿ ಸುಧಾರಣೆ ಆಗುವುದು. ಇದಕ್ಕಾಗಿ 20 ಸೆಕೆಂಡು ಕಾಲ ನೀವು ತುಟಿಗಳಿಗೆ ಚುಂಬಿಸಬೇಕು.

ಹಿಸ್ಟಮೈನ್ ಉತ್ಪತ್ತಿಯು ಕಡಿಮೆಯಾಗುತ್ತದೆ: 30 ನಿಮಿಷ ಕಾಲ ಚುಂಬಿಸಿದರೆ ಆಗ ದೇಹದಲ್ಲಿ ಹಿಸ್ಟಮೈನ್ ಉತ್ಪತ್ತಿಯು ಕಡಿಮೆ ಆಗುವುದು. ಹಿಸ್ಟಮೈನ್ ದೇಹದ ಯಾವುದೇ ಅಂಗಾಂಶಕ್ಕೆ ಹಾನಿಯಾದಾಗ, ಅಲರ್ಜಿ ಮತ್ತು ಉರಿಯೂತದ ವೇಳೆ ಬಿಡುಗಡೆ ಆಗುವುದು. ಇದೇ ವೇಳೆ ಇದು ಶೀತ ಮತ್ತು ಮೂಗು ಸೋರುವಿಕೆಯಿಂದಲೂ ಪರಿಹಾರ ನೀಡುವುದು.
ದಂತಗಳು ಬಲಿಷ್ಠವಾಗುತ್ತದೆ: ಚುಂಬನದ ವೇಳೆ ಬಾಯಿಯಲ್ಲಿ ಹೆಚ್ಚಿನ ಜೊಲ್ಲು ಉತ್ಪತ್ತಿ ಆಗುವುದು. ಇದರಿಂದ ಆಮ್ಲವು ತಟಸ್ಥವಾಗುವುದು ಮತ್ತು ಬಾಯಿಯಲ್ಲಿ ಇರುವ ಆಹಾರದ ಕಣಗಳು ಮತ್ತು ಕೀಟಾಣುಗಳನ್ನು ಇದು ದೂರ ಮಾಡುವುದು. ಜೊಲ್ಲಿನಲ್ಲಿ ಇರುವಂತಹ ಖನಿಜಾಂಶ ಉಪ್ಪು ದಂತಗಳನ್ನು ಬಲಿಷ್ಠವಾಗಿಸಲು ನೆರವಾಗುವುದು.
ದೇಹದ ಬೊಜ್ಜು ಕಡಿಮೆಯಾಗುತ್ತದೆ: ಚುಂಬಿಸುವುದರಿಂದ ಒಂದು ನಿಮಿಷಕ್ಕೆ ಸುಮಾರು ಆರು ಕ್ಯಾಲರಿ ದಹಿಸಬಹುದು ಎಂದು ಹೇಳಲಾಗುತ್ತದೆ. ಆರು ಕಿ.ಮೀ. ನಡೆದಾಗ ಸಾಮಾನ್ಯ ವ್ಯಕ್ತಿಯು 6.67 ಕ್ಯಾಲರಿ ದಹಿಸಬಹುದು. ಆದರೆ ಕೇವಲ ಚುಂಬಿಸುವುದರಿಂದ ದೇಹವು ಬೊಜ್ಜನ್ನು ಸಂಪೂರ್ಣವಾಗಿ ಕರಗಿಸುವುದಿಲ್ಲ. ಇದಕ್ಕಾಗಿ ವ್ಯಾಯಾಮವು ಅಗತ್ಯವಾಗಿದೆ.
ಮುಖದ ಸ್ನಾಯುಗಳಿಗೆ ವ್ಯಾಯಾಮ: ಚುಂಬಿಸುವ ವೇಳೆ ಮುಖದ ಸ್ನಾಯುಗಳಿಗೆ ಸರಿಯಾದ ವ್ಯಾಯಾಮವು ಸಿಗುವುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಚುಂಬನದಿಂದಾಗಿ ಮುಖದಲ್ಲಿ ರಕ್ತಸಂಚಾರವು ಉತ್ತಮವಾಗುವುದು ಹಾಗೂ ಚರ್ಮವು ಜೋತು ಬೀಳುವುದನ್ನು ಇದು ತಡೆಯುವುದು.
ಯಾರಿಗಾದರೂ ಚುಂಬಿಸುವ ವೇಳೆ ಸ್ವಯಂಪ್ರಜ್ಞೆಯು ತೀವ್ರವಾಗಿ ಹೆಚ್ಚಾಗುವುದು ಮತ್ತು ಇದರಿಂದ ಹಲವಾರು ಲಾಭಗಳು ಸಿಗುವುದು. ನಿಮ್ಮ ಭಾವನೆ, ನೋಟ ಉತ್ತಮವಾಗಿದ್ದರೆ, ಆಗ ಯಾವಾಗಲೂ ಉತ್ತಮ ಭಾವನೆ ಬರುವುದು. ಚುಂಬಿಸುವುದು ಅನ್ಯೋನ್ಯತೆಗೆ ಶ್ರೇಷ್ಠ ದಾರಿಯಾಗಿದೆ. ಇದರಿಂದ ಹಲವಾರು ಆರೋಗ್ಯ ಲಾಭಗಳು ಇವೆ.