ಲಕ್ನೋ: ಬಿಹಾರದಲ್ಲಿ ಮಹಿಳೆಯೊಬ್ಬಳು ಅಕ್ರಮ ಸಂಬಂಧವನ್ನು ಮುಚ್ಚಿಟ್ಟುಕೊಳ್ಳಲು ಪ್ರಿಯಕರನ ಸಹಾಯದಿಂದ ತನ್ನ ಗಂಡನನ್ನೇ ಕೊಲೆ ಮಾಡಿ, ರಾಸಾಯನಿಕದಲ್ಲಿ ಆ ಶವವನ್ನು ಮುಳುಗಿಸಿಟ್ಟ ಘಟನೆ ನಡೆದಿದೆ.
30 ವರ್ಷದ ರಾಕೇಶ್ ಎಂಬಾತ ಕೊಲೆಯಾದ ವ್ಯಕ್ತಿ. ಬಿಹಾರದ ಮುಜಾಫರ್ಪುರದ ಸಿಖಂದರಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬೇರೊಬ್ಬ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಗೆ ತನ್ನ ಗಂಡನ ಜೊತೆ ಸಂಸಾರ ಮಾಡಲು ಇಷ್ಟವಿರಲಿಲ್ಲ. ಹೀಗಾಗಿ, ಆತನನ್ನು ಕೊಂದರೆ ತಾವಿಬ್ಬರೂ ಒಟ್ಟಿಗೇ ಸಂತೋಷವಾಗಿ ಜೀವನ ನಡೆಸಬಹುದು ಎಂಬುದು ಆಕೆಯ ಯೋಚನೆಯಾಗಿತ್ತು. ಇದಕ್ಕಾಗಿ ಪ್ರಿಯಕರನ ಸಹಾಯ ಪಡೆದ ಆಕೆ ಗಂಡನನ್ನು ಕೊಲೆ ಮಾಡಿ, ಸಾಕ್ಷಿಗಳು ಸಿಗಬಾರದು ಎಂದು ರಾಸಾಯನಿಕ ಬಳಸಿ ಮನೆಯನ್ನೆಲ್ಲ ಕ್ಲೀನ್ ಮಾಡಿದ್ದಾಳೆ. ಬಳಿಕ ಗಂಡನ ಶವಕ್ಕೆ ರಾಸಾಯನಿಕ ಸಿಂಪಡಿಸಿದ್ದಾಳೆ. ಆದರೆ, ಇದೇ ಆಕೆಗೆ ಮುಳುವಾಯಿತು. ತನ್ನ ಕೃತ್ಯದ ಬಗ್ಗೆ ಗೊತ್ತಾಗಬಾರದು ಎಂದು ಆಕೆ ಮಾಡಿದ್ದ ಪ್ಲಾನ್ ಆಕೆಗೆ ಉಲ್ಟಾ ಹೊಡೆದಿದೆ.
ರಾಕೇಶ್ ಕೊಲೆಯ ಹಿಂಚೆ ಆತನ ಹೆಂಡತಿ ರಾಧಾ, ಆಕೆಯ ಪ್ರಿಯಕರ ಸುಭಾಷ್, ಆಕೆಯ ತಂಗಿ ಹಾಗೂ ತಂಗಿಯ ಗಂಡನ ಕೈವಾಡವಿದೆ. ಪ್ರೇಮಿಯ ಸಲಹೆಯಂತೆ ರಾಕೇಶನ ಶವವನ್ನು ಇಬ್ಬರೂ ಸೇರಿ ತುಂಡಾಗಿ ಕತ್ತರಿಸಿದ್ದರು. ನಂತರ ಅದಕ್ಕೆ ರಾಸಾಯನಿಕ ಸಿಂಪಡಿಸಿ, ವಾಸನೆ ಹರಡದಂತೆ ಮಾಡಿದ್ದರು. ಬಳಿಕ ಆ ಶವವನ್ನು ಕಟ್ಟಿ ತಮ್ಮ ಬಾಡಿಗೆ ಮನೆಯ ರೂಮಿನಲ್ಲಿ ಇಟ್ಟಿದ್ದರು. ಇದಕ್ಕೆ ರಾಧಾ ತನ್ನ ತಂಗಿ ಹಾಗೂ ತಂಗಿಯ ಗಂಡನ ಸಹಾಯವನ್ನೂ ಪಡೆದಿದ್ದಳು.
ಶವಕ್ಕೆ ಸಿಂಪಡಿಸಿದ್ದ ರಾಸಾಯನಿಕದಿಂದ ಶವ ತುಂಬಿಟ್ಟಿದ್ದ ಬ್ಯಾಗ್ ಜೋರಾಗಿ ಶಬ್ದವಾಗಿ ಸ್ಫೋಟವಾಗಿತ್ತು. ಇದರಿಂದ ಹೆದರಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಅಪಾರ್ಟ್ಮೆಂಟ್ಗೆ ಬಂದ ಪೊಲೀಸರು ಶಬ್ದ ಕೇಳಿದ ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ಶವವನ್ನು ಕಟ್ ಮಾಡಿದಾಗ ಬಿದ್ದಿದ್ದ ಸೂಕ್ಷ್ಮವಾದ ತುಂಡುಗಳನ್ನು ಗಮನಿಸಿದರು. ಅಲ್ಲದೆ, ಮನೆಯಲ್ಲಿ ರಾಸಾಯನಿಕ ಸಿಂಪಡನೆ ಮಾಡಿದ ಕುರುಹುಗಳಿದ್ದವು. ಇದರಿಂದ ಅನುಮಾನಗೊಂಡ ಅವರು ರೂಮನ್ನು ಪರಿಶೀಲಿಸಿದಾಗ ತುಂಡಾಗಿದ್ದ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ಅದು ರಾಕೇಶನ ಶವ ಎಂಬುದು ಖಚಿತವಾಗಿದೆ.
3 Comments
hello!,I like your writing very
so much! proportion we communicate extra approximately your post
on AOL? I need a specialist on this house to solve my problem.
May be that’s you!
Looking forward to see you.
I’ve read several just right stuff here.
Certainly worth bookmarking for
revisiting. I wonder how a lot effort you place to create this kind of great informative site.
Forum Cialis 20