ಕೊರೊನಾ ಲಾಕ್‌ಡೌನ್ ಬಳಿಕ ಮತ್ತೆ ಗರಿಗೆದರುತ್ತಿರುವ ಕೋಸ್ಟಲ್‌ವುಡ್‌ಗೆ ಹೊಸ ನಟಿಯ ಆಗಮನವಾಗಿದೆ. ಉಡುಪಿಯ ಬೆಡಗಿ ಸ್ವಾತಿ ಶೆಟ್ಟಿ, ರಾಜೇಶ್ ಬ್ರಹ್ಮಾವರ ನಿರ್ಮಾಣದ ಸಂಜಯ್ ನಿರ್ದೇಶನದ ಹೊಸ ಸಿನಿಮಾದ ಮೂಲಕ ತುಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಉಡುಪಿಯ ಬೇಬಿ ಪಿ ಶೆಟ್ಟಿ ಮತ್ತು ಪ್ರಕಾಶ್ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಸ್ವಾತಿ ಶೆಟ್ಟಿ ಎಂಕಾಂ ಪದವೀಧರೆ.

ಮಿಲಾಗ್ರಿಸ್ ಪದವಿ ಕಾಲೇಜಿನಲ್ಲಿ ಶಿಕ್ಷಣ ಪಡೆದಿರುವ ಈಕೆ ಕಲಿಕೆಯಲ್ಲಿ ರ್‍ಯಾಂಕ್ ಸ್ಟೂಡೆಂಟ್. ಕಲಿಕೆ ಮಾತ್ರವಲ್ಲದೇ ಆಟೋಟಗಳಲ್ಲೂ ರಾಜ್ಯವನ್ನೂ ಪ್ರತಿನಿಧಿಸಿರುವ ಸ್ವಾತಿ ಶೆಟ್ಟಿ, ಉತ್ತಮ ನೃತ್ಯಪಟುವು ಹೌದು. ಕ್ಲಾಸಿಕ್, ಫ್ರೀ ಸ್ಟೈಲ್ ಹೀಗೆ ಹೀಗೆ ಹಲವಾರು ವಿಧದ ನೃತ್ಯಗಳನ್ನು ಕರಗತ ಮಾಡಿಕೊಂಡಿರುವ ಈಕೆ ಮಕ್ಕಳಿಗೆ ನೃತ್ಯ ತರಬೇತಿಯನ್ನು ನೀಡುತ್ತಿದ್ದಾರೆ.

ವಿದ್ಯಾಭ್ಯಾಸದ ಬಳಿಕ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ಈ ಚೆಲುವೆ ‘ಮಿಸ್ ಮಣಿಪಾಲ್ ಬಾಡಿ ಬ್ಯೂಟಿಪುಲ್’ ಎಂಬ ಪಟ್ಟದೊಂದಿಗೆ ಗುರುತಿಸಿಕೊಂಡಿದ್ದಾರೆ. ಮಲಬಾರ್ ಗೋಲ್ಡ್ ಮತ್ತು ಕರ್ಣಾಟಕ ಬ್ಯಾಂಕ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಸ್ವಾತಿ ಶೆಟ್ಟಿ ಈಗ ತಮ್ಮ ಚೊಚ್ಚಲ ತುಳು ಚಿತ್ರದ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟಿದ್ದಾರೆ. ನಾಯಕಿ ಪ್ರಧಾನವಾಗಿರುವ ಪ್ರೊಡಕ್ಷನ್ ನಂ.5 ಚಿತ್ರದಲ್ಲಿ ನಟಿಯಾಗಿ ವೃತ್ತಿ ಜೀವನ ಆರಂಭಿಸಿರುವ ಇವರಿಗೆ ಈ ಚಿತ್ರದಲ್ಲಿ ಸಾಕಷ್ಟು ಅಭಿನಯಿಸುವ ಅವಕಾಶ ಸಿಕ್ಕಿರುವ ಖುಷಿಯಿದೆ… ತುಳು ಚಿತ್ರದಲ್ಲಿ ನಟಿಸುತ್ತಿರುವಾಗಲೇ ಕನ್ನಡ ಚಿತ್ರರಂಗದಿಂದಲೂ ಅವಕಾಶಗಳು ಬರುತ್ತಿದ್ದು, ಕನ್ನಡ ಸಿನಿಮಾವೊಂದರ ಮಾತುಕತೆಯ ನಡೆಯುತ್ತಿದೆಯಂತೆ.

ತುಳು ಮಾತೃಭಾಷೆಯಾಗಿರುವುದರಿಂದ ತನ್ನ ವೃತ್ತಿ ಜೀವನ ತುಳು ಚಿತ್ರದಿಂದಲೇ ಆರಂಭವಾದ ಬಗ್ಗೆ ಅತೀವ ಸಂತಸವಿದೆ. ಕನ್ನಡ ಸಿನಿಮಾ, ಧಾರವಾಹಿಯಿಂದಲೂ ಅವಕಾಶಗಳು ಬರುತ್ತಿದ್ದು, ಅಭಿನಯಕ್ಕೆ ಮಹತ್ವವಿರುವ, ಉತ್ತಮ ಪಾತ್ರ ದೊರೆತ್ತಲ್ಲಿ ಆಸಕ್ತಿಯಿಂದ ಅಭಿನಯಿಸಲು ಸಿದ್ದವೆಂದು ಹುಮ್ಮಸ್ಸಿನಿಂದ ಹೇಳುತ್ತಾರೆ ಸ್ವಾತಿ ಶೆಟ್ಟಿ.

ಇನ್ನೂ ಸ್ವಾತಿ ಶೆಟ್ಟಿ ನಟಿಸುತ್ತಿರುವ ತುಳು ಸಿನಿಮಾದಲ್ಲಿ ನಾಯಕ ನಟನಾಗಿ ಕರಣ್ ಪೂಜಾರಿ ತೆರೆ ಹಂಚಿಕೊಂಡಿದ್ದಾರೆ. ವಿಜಯ್ ಕುಮಾರ್ ಕೊಡಿಯಾಲ್‌ಬೈಲ್, ವಿಸ್ಮಯ ವಿನಾಯಕ್ ಸೇರಿ ಬಹುತೇಕ ಹೊಸ ಪ್ರತಿಭೆಗಳು ಈ ಚಿತ್ರದಲ್ಲಿಅಭಿನಯಿಸುತ್ತಿದ್ದಾರೆ. ಚಿತ್ರಿಕರಣ ಇನ್ನೇನೂ ಮುಕ್ತಾಯದ ಹಂತದಲ್ಲಿದ್ದೂ, ಶೀಘ್ರವೇ ತೆರೆಗೆ ಬರುವ ನಿರೀಕ್ಷೆಯಿದೆ.
2 Comments
You are a very smart individual!
Wow! This can be one particular of the most useful blogs We have ever arrive across on this subject. Actually Fantastic. I’m also an expert in this topic so I can understand your effort.