ಬೆಂಗಳೂರು : ನಿನ್ನೆಷ್ಟೇ ನಟ ಜಗ್ಗೇಶ್ ದರ್ಶನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರ ಬಗ್ಗೆ ಅಭಿಮಾನಿಗಳು ಮುತ್ತಿಗೆ ಹಾಕಿ ಆಕ್ಷೇಪ ವ್ಯಕ್ತ ಪಡಿಸಿದ್ದರು. ಇದರಿಂದಾಗಿ ನಟ ಜಗ್ಗೇಶ್ ಅಭಿಮಾನಗಳ ಕ್ಷಮೆ ಕೇಳಿದ್ದರು.

ಇಂದು ದರ್ಶನ್ ಅಭಿಮಾನಿಗಳ ವಿರುದ್ಧ ತಿರುಗಿ ಬಿದ್ದಿರುವ ಅವರು, ಯಾವ ನಟನ ಅಭಿಮಾನಿಗಳು ಬುದ್ಧಿ ಹೇಳಬೇಕಿಲ್ಲ ಎಂಬುದಾಗಿ ಹೇಳುವ ಮೂಲಕ, ದರ್ಶನ್ ಅಭಿಮಾನಿಗಳಿಗೆ ಟಾಂಗ್ ನೀಡಿದ್ದಾರೆ.

ಈ ಕುರಿತಂತೆ ಮಾತನಾಡಿರುವಂತ ನಟ ಜಗ್ಗೇಶ್, ನಾನು ಇಂಡಸ್ಟ್ರೀಗೆ ಬಂದಾಗ ಯಾವ ನಟನೂ ಹುಟ್ಟಿರಲಿಲ್ಲ ಎನ್ನುವ ಮೂಲಕ ದರ್ಶನ್ ಗೆ ಮತ್ತೆ ಟಾಂಗ್ ನೀಡಿರುವ ಅವರು, ನನಗೂ ಅಭಿಮಾನಿಗಳಿದ್ದಾರೆ, ಸಂಘ ಇದೆ. ನನಗೆ ರೌಡಿಸಂ ಮಾಡೋಕೆ ಬರೋದಿಲ್ವಾ.? ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂಬುದಾಗಿ ಕಿಡಿಕಾರಿದ್ದಾರೆ.

ಈ ಮೂಲಕ ನಿನ್ನೆ ಕ್ಷಮೆ ಕೇಳಿದ್ದ ಜಗ್ಗೇಶ್, ಇಂದು ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

 

Share.

2 Comments

Leave A Reply