ಮುಂಬೈ: ಬಾಲಿವುಡ್‌ನ ಪ್ರಖ್ಯಾತ ಜೋಡಿ ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಎರಡನೇ ಬಾರಿ ಅಪ್ಪ- ಅಮ್ಮ ಆಗಿದ್ದಾರೆ. ಇಂದು ನಸುಕಿನಲ್ಲಿ ಕರೀನಾ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ಮೊದಲು ಒಂದು ಗಂಡು ಮಗುವಿನ ಪಾಲಕರಾಗಿರುವ ಈ ಜೋಡಿ, ಇದೀಗ ಮತ್ತೊಂದು ಮಗನ ಪಾಲಕರಾಗಿದ್ದಾರೆ. ಮೊದಲ ಮಗ ತೈಮೂರ್‌ಗೆ ಈಗ ನಾಲ್ಕು ವರ್ಷ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ 4:45ರ ಸುಮಾರಿಗೆ ಡೆಲಿವರಿ ಆಗಿದೆ.

ಫೆಬ್ರವರಿ 15ರಂದು ಕರೀನಾ ಅವರಿಗೆ ಡೆಲಿವರಿ ದಿನಾಂಕ ನೀಡಲಾಗಿತ್ತು. ಆದರೆ ಒಂದು ವಾರ ಡೆಲಿವರಿ ಮುಂದಕ್ಕೆ ಹೋಗಿ ಇಂದು ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯದಿಂದ ಇರುವುದಾಗಿ ವೈದ್ಯರು ತಿಳಿಸಿದ್ದಾರೆ.

ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಕಳೆದ ಆಗಸ್ಟ್‌ನಲ್ಲಿ ಈ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದರು. ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಬಾರೀ ವೈರಲ್ ಆಗುತ್ತಿದ್ದು ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಕರೀನಾ ಕಪೂರ್ ಖಾನ್ ಗರ್ಭವತಿಯಾಗಿದ್ದ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳದೆ ತಮ್ಮೆಲ್ಲಾ ನಿಗದಿತ ಕೆಲಸಗಳನ್ನು ಮುಗಿಸುವಲ್ಲಿ ನಿರತರಾಗಿದ್ದರು. ಬಾಲಿವುಡ್ ಮೂಲದಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕರೀನಾ ಚಿತ್ರ ಹಾಗೂ ಜಾಹಿರಾತಿನ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ತಮ್ಮೆಲ್ಲಾ ಕೆಲಸಗಳನ್ನು ಡೆಲಿವರಿಗೆ ಮೊದಲೇ ಪೂರ್ಣಗೊಳಿಸಿದ್ದಾರೆ ಎಂದು ಹೇಳಲಾಗಿದೆ.

Share.

1 Comment

Leave A Reply