ವಯಾಕಾಂ18ರ ಮುಂಚೂಣಿಯ ಆನ್-ಡಿಮ್ಯಾಂಡ್ ಸ್ಟ್ರೀಮಿಂಗ್ ಪ್ಲಾಟ್‍ಫಾರಂ ವೂಟ್ 8 ಸೀಸನ್‍ಗಳಿಂದ ಅಭೂತಪೂರ್ವ ಯಶಸ್ಸು ಗಳಿಸಿದ ಬಿಗ್ ಬಾಸ್ ಕನ್ನಡದ ಒಟಿಟಿ ಆವೃತ್ತಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಕನ್ನಡದ ಖ್ಯಾತ ನಟ `ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ ಈ ಕಾರ್ಯಕ್ರಮವನ್ನು ಹೊಚ್ಚಹೊಸ ಉತ್ಸಾಹಕರ ಮಾದರಿಯಲ್ಲಿ ಆಯೋಜಿಸಲಿದೆ.

ಈ ಕಾರ್ಯಕ್ರಮ ಪ್ರಾರಂಭ ಕುರಿತು ಕಿಚ್ಚ ಸುದೀಪ, “ಉತ್ಸಾಹಕರ 8 ಋತುಗಳನ್ನು ಆಯೋಜಿಸಿದ ನಂತರ ಬಿಗ್ ಬಾಸ್ ಕನ್ನಡ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಈ ವರ್ಷ ಮೊಟ್ಟಮೊದಲನೆಯ ಒಟಿಟಿ ಆವೃತ್ತಿಯ ಮೂಲಕ ಮನರಂಜನೆಯಲ್ಲಿ ಕಥೆಗೆ ಟ್ವಿಸ್ಟ್ ತರಲು ಬಹಳ ಸಂತೋಷ ಹೊಂದಿದ್ದೇವೆ. ನಾವು ವೂಟ್‍ನಲ್ಲಿ ಈ ಶೋ ಪ್ರದರ್ಶನಕ್ಕೆ ಸಜ್ಜಾಗಿದ್ದು ನಾನು ವೀಕ್ಷಕರಿಗೆ 24/7 ಲೈವ್ ಆಕ್ಷನ್, ಆಸಕ್ತಿದಾಯಕ ಸಂವಹನಗಳು ಮತ್ತು ಪ್ಲಾಟ್ ಟ್ವಿಸ್ಟ್‍ಗಳನ್ನು ವೀಕ್ಷಕರಿಗೆ ತರಲು ಉತ್ಸುಕನಾಗಿದ್ದೇನೆ, ಇದು ನಮ್ಮ ವೀಕ್ಷಕರನ್ನು ಸೆಳೆಯುತ್ತದೆ ಎಂಬ ಭರವಸೆ ನನ್ನದು” ಎಂದರು.

ಬಿಗ್ ಬಾಸ್ ಕನ್ನಡ ಹಿಂದಿನ ವರ್ಷಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ. ಈ ಸರಣಿಯಲ್ಲಿ ಆಸಕ್ತಿದಾಯಕ ಅಭ್ಯರ್ಥಿಗಳು ಮತ್ತು ಅವರ ಏರಿಳಿತಗಳನ್ನು ಕಾಣುವುದಲ್ಲದೆ ರಿಯಾಲಿಟಿ ಟಿ.ವಿ. ವಿಭಾಗದಲ್ಲಿ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿಸಿದೆ.
ಅನಿಯಮಿತ ನಾಟಕೀಯತೆ ಮತ್ತು ಮನರಂಜನೆ ಹೊಂದಿರುವ ವೂಟ್‍ನ ಒಟಿಟಿಯಲ್ಲಿ ಪ್ರಸಾರವಾಗಲಿರುವ ಇದು ಮನರಂಜನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆ ನೀಡುತ್ತದೆ.
3 Comments
Can I just say what a comfort to find somebody who truly understands what theyre talking about on the net. You certainly understand how to bring a problem to light and make it important. A lot more people really need to look at this and understand this side of the story. I cant believe youre not more popular because you definitely possess the gift.
Your blog is very well written and researched!
This is a very fantastic post! free download ringtone for android