ಇಸ್ಲಾಮಾಬಾದ್: ನಾನು ಭಾರತದ ವಿರೋಧಿಯೇ ಅಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಕರಾಚಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವೇಳೆ, ಈ ಅಂಶ ಪ್ರಸ್ತಾಪಿಸಿದ್ದಾರೆ. ಅಧಿಕಾರದಲ್ಲಿದ್ದ ವೇಳೆ ಭಾರತದ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದ ಅವರು, ಈಗ ಮಿತ್ರತ್ವದ ಮಾತಾಡಿರುವುದು ಗಮನಾರ್ಹ.

ನಾನು ಯಾವುದೇ ರಾಷ್ಟ್ರದ ವಿರೋಧಿಯಲ್ಲ. ಭಾರತ, ಐರೋಪ್ಯ ಒಕ್ಕೂಟ, ಅಮೆರಿಕದ ವಿರೋಧಿಯಲ್ಲ. ನಾನು ಮಾನವೀಯತೆ ಪರ. ಯಾವುದೇ ಸಮುದಾಯದ ವಿರೋಧಿ ನಾನಲ್ಲ ಎಂದು ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇಮ್ರಾನ್ ಖಾನ್ ನಮ್ಮ ಸರ್ಕಾರವನ್ನು ಕೆಡವಲು ಅಮೆರಿಕ ಪ್ರತಿಪಕ್ಷಗಳಿಗೆ ನೆರವು ನೀಡುತ್ತಿದೆ ಎಂದು ದೂರಿದ್ದರು.
ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಮತ ಹಾಕಿ ಎಂದು ಯುರೋಪ್ ಹೇಳಿದ್ದಕ್ಕೆ, ಯುರೋಪ್ ನಮ್ಮನ್ನು ಅವರ ಸೇವಕರು ಎಂದುಕೊಂಡಿದೆ ಎಂದು ಆರೋಪಿಸಿದ್ದರು.