ಮಸ್ಕತ್: ಒಮಾನ್‌ನಲ್ಲಿ ಧಾರಾಕಾರ ಮಳೆ ಸುರಿದು ಹಠಾತ್ ಪ್ರವಾಹ ಉಂಟಾಗಿ ಜನಜೀವನ ಸಂಪೂರ್ಣ ಅಸ್ಥವ್ಯಸ್ತಗೊಂಡಿದ್ದು, ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿದೆ.
ಮಳೆಯಿಂದಾಗಿ ದೇಶಾದ್ಯಂತ ವ್ಯಾಪಾರ, ವಾಹನಗಳು ಮತ್ತು ಬೆಳೆಗಳ ಅಪಾರ ಹಾನಿ ಉಂಟಾಗಿದೆ. ಮಂಗಳವಾರ ಶಾಲೆಗಳನ್ನು ಸ್ಥಗಿತಗೊಳಿಸಲಾಗಿತ್ತು. ವಿಪರೀತ ಮಳೆಯು ವಾರಾಂತ್ಯದವರೆಗೂ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

“ಹಲವು ದಿನಗಳವರೆಗೆ ಭಾರೀ ಮಳೆ ಮುಂದುವರಿಯುತ್ತದೆ ಮತ್ತು ಸಾರ್ವಜನಿಕರು ತಮ್ಮ ಪ್ರಯಾಣವನ್ನು ಮಿತಿಗೊಳಿಸಬೇಕಾಗುತ್ತದೆ. ರಸ್ತೆಗಳು ಜಾರುವುದರಿಂದ ಚಾಲಕರು ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು. ಏಳು ಮೀಟರ್‌ಗಳಷ್ಟು ಎತ್ತರಕ್ಕೆ ಅಲೆಗಳು ಏಳುವ ಸಾಧ್ಯತೆಗಳಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಪ್ರಾಧಿಕಾರ ಮುನ್ಸೂಚನೆ ನೀಡಿದೆ.
ಜಾಲಾವೃತವಾಗಿರುವ ಶಾಪಿಂಗ್ ಮಾಲ್‌ಗಳಲ್ಲಿ ಕಾರುಗಳು ಸಿಲುಕಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳು ತೋರಿಸಿವೆ. ಸರ್ಕಾರಿ ಸ್ವಾಮ್ಯದ ಓಮನ್ ಟೆಲಿವಿಷನ್ ಅಂಡರ್‌ಪಾಸ್‌ಗಳು ಮತ್ತು ನೀರಿನಿಂದ ತುಂಬಿರುವ ಸೇತುವೆಗಳ ಕ್ಲಿಪ್‌ಗಳನ್ನು ತೋರಿಸಿದೆ. ಕೆಲವು ಚಾಲಕರು ತಮ್ಮ ಕೆಲಸದ ಸ್ಥಳಗಳನ್ನು ತಲುಪಲು ಸಾಧ್ಯವಾಗದ ಕಾರಣ ಮನೆಗೆ ಮರಳಬೇಕಾಗಿದೆ. ಕೆಲ ಮಾಧ್ಯಮಗಳ ಪ್ರಕಾರ 6 ಮಂದಿ ಮಳೆ ಅವಘಡದಿಂದ ಪ್ರಾಣ ಕಳೆದು ಕೊಂಡಿರುವುದಾಗಿ ತಿಳಿದು ಬಂದಿದೆ.
5 Comments
I gotta favorite this website it seems very useful extremely helpful
You are my aspiration, I own few blogs and sometimes run out from to brand.
It?¦s truly a nice and helpful piece of info. I am glad that you just shared this helpful info with us. Please stay us informed like this. Thank you for sharing.
Hi, i think that i noticed you visited my weblog so i came to “return the favor”.I am trying to find things to improve my site!I guess its ok to make use of some of your ideas!!
I’d always want to be update on new content on this website , saved to favorites! .