ವಾಷಿಂಗ್ಟನ್: ಕಾಲೇಜುಗಳಲ್ಲಿ’ನೀಲಿ ಚಿತ್ರ’ (ಪೋರ್ನೊಗ್ರಫಿ) ಕೋರ್ಸ್ ಆರಂಭಕ್ಕೆ ಅಮೆರಿಕ ಸಿದ್ಧತೆ ನಡೆಸಿದೆ. ಅಮೆರಿಕದ ಉತ್ಹಾ ನಗರದ ವೆಸ್ಟ್- ಮಿನ್‌ಸ್ಟರ್ ಕಾಲೇಜು ಮೊಟ್ಟ ಮೊದಲ ಬಾರಿ ಅಂಥದ್ದೊಂದು ಕೋರ್ಸ್ ಆರಂಭಕ್ಕೆ ಚಿಂತನೆ ನಡೆಸಿದೆ.
”ನೀಲಿ ಚಿತ್ರ ಅನೇಕರ ದೃಷ್ಟಿಯಲ್ಲಿ ಅಶ್ಲೀಲವಾಗಿ ಕಾಣಿಸಿದರೂ ಅದರಲ್ಲಿ ಅಗಾಧ ಲಾಭ ಇದೆ. ತೆರೆಮರೆಯಲ್ಲಿ ಅಪಾರ ಹಣ ಗಳಿಸುವ ದಂಧೆಯಾಗಿ ಅದು ಬದಲಾಗಿದೆ. ಬದಲಾದ ಈ ಜಮಾನದಲ್ಲಿ ಮಡಿವಂತಿಕೆ ತೊರೆದು, ಬದುಕುವ ಕಲೆ ಕಲಿಯುವುದು ಅಗತ್ಯ,” ಎಂದು ಕಾಲೇಜಿನ ಮುಖ್ಯಸ್ಥರು ಅಭಿಪ್ರಾಯ ಪಟ್ಟಿದ್ದಾರೆ.
ಯೋಜಿಸಿದಂತೆ ಎಲ್ಲವೂ ನಡೆದರೆ ಬರುವ ಶೈಕ್ಷಣಿಕ ಸಾಲಿನಿಂದಲೇ ವೆಸ್ಟ್‌ಮಿನ್‌ಸ್ಟರ್ ಕಾಲೇಜಿನಲ್ಲಿ ಈ ‘ಹೊಸ ಕೋರ್ಸ್’ ಶುರುವಾಗಲಿದೆ. ಇದರಲ್ಲಿ ಶಿಕ್ಷಕರ ಜತೆಗೆ ಕುಳಿತು ವಿದ್ಯಾರ್ಥಿಗಳು ನೀತಿ ಚಿತ್ರ ವೀಕ್ಷಿಸಬಹುದಾಗಿದೆ. ”ಅಯ್ಯೋ ದುಡ್ಡಿದೆ ಎಂದು ಹೀಗೆಲ್ಲ ಮಾಡುವುದೇ? ಏನು ಕರ್ಮ ಮಾರಾಯ ಇದು,” ಎಂದು ಟೀಕಿಸುವವರಿಗೆ ಕಾಲೇಜು ಆಡಳಿತ ಮಂಡಳಿ ಸಮಜಾಯಿಷಿಯ ಉತ್ತರ ನೀಡಿದೆ.

”ಅದರಿಂದ ಬರೀ ದುಡ್ಡಷ್ಟೇ ಅಲ್ಲ, ಅತ್ಯುತ್ತಮ ಲೈಂಗಿಕ ಶಿಕ್ಷಣ ಸಿಗುತ್ತದೆ. ಸಮಾಜದ ವಿವಿಧ ಜನ ವರ್ಗಗಳಲ್ಲಿ ಇರುವ ಲೈಂಗಿಕ ಕಲೆಯ ಮಾಹಿತಿ ನಮ್ಮ ವಿದ್ಯಾರ್ಥಿಗಳಿಗೆ ಲಭಿಸುತ್ತದೆ. ಸಾಮಾಜಿಕ ಸಮಸ್ಯೆಯಾಗಿ ಅದು ಹೇಗೆ ಬದಲಾಗುತ್ತದೆ? ಅದನ್ನು ಸರಿಪಡಿಸುವುದು ಹೇಗೆ ಎನ್ನುವ ದಾರಿಗಳ ಕುರಿತೂ ಹೇಳಿಕೊಡಲಾಗುತ್ತದೆ. ಕೇಳುವವರಿಗೆ ಅದು ಅಶ್ಲೀಲ ಎನ್ನಿಸಿದರೂ ಮನುಷ್ಯನ ಅಸ್ತಿತ್ವಕ್ಕೆ ಅದು ಅನಿವಾರ್ಯ ಎನ್ನುವು-ದನ್ನು ಯಾರು ಮರೆಯಬಾರದು,” ಎಂದು ಕಾಲೇಜಿನ ಮುಖ್ಯಸ್ಥರು ಹೇಳಿದ್ದಾರೆ.
”ಛೆ ಛೆ ಅದೇನಾದರೂ ಇರಲಿ, ವಿದ್ಯಾರ್ಥಿಗಳ ಜತೆಗೆ ಶಿಕ್ಷಕರು ಕುಳಿತು ಫೋರ್ನ್ ವಿಡಿಯೊ ನೋಡುವುದೆಂದರೆ ಅದೆಂತಹ ಅಧ್ವಾನ? ಆ ಕೋರ್ಸ್ ಆರಂಭಕ್ಕೆ ನಾವು ಬಿಡುವುದಿಲ್ಲ,” ಎಂದು ಕೆಲವು ಮಡಿವಂತ ಅಮೆರಿಕನ್ನರು ಹೇಳಿದ್ದಾರೆ.
ಭಾರಿ ವಿರೋಧ ಮತ್ತು ವಿವಾದದ ಬಳಿಕ ಕಾಲೇಜು ತನ್ನ ಕೋರ್ಸ್‌ಗಳ ಪಟ್ಟಿಯಿಂದ ಪೋರ್ನೋಗ್ರಫಿ ಸಿನಿಮಾ ತರಗತಿಯನ್ನು ತೆಗೆದು ಹಾಕಿದೆ ಎಂದು ವರದಿಯಾಗಿದೆ. ಈ ಕಾಲೇಜು ಹಾಸ್ಯ, ಹಾರರ್, ಆಕ್ಷನ್ ಸೇರಿದಂತೆ ವಿಭಿನ್ನ ಬಗೆಯ ಸಿನಿಮಾಗಳ ಕುರಿತಾದ ಕೋರ್ಸ್‌ಗಳನ್ನು ಕಲಿಸುತ್ತದೆ.
1 Comment
I was excited to discover this website. I want to to thank you for your time for this wonderful read!! I definitely liked every part of it and i also have you book-marked to look at new things on your website.