ಕರಾವಳಿಯಲ್ಲಿ ಇಂದು ಕೊರೊನಾ ಸ್ಪೋಟ!
News Editorದಕ್ಷಿಣ ಕನ್ನಡ
ಮಂಗಳೂರು: ಕರಾವಳಿಗೆ ಕೋವಿಡ್ ಮರ್ಮಾಘಾತ ನೀಡುತ್ತಿದ್ದು, ರವಿವಾರ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರೋಬ್ಬರಿ 147 ಮಂದಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.
ಕರಾವಳಿಯಲ್ಲಿ ದಕ್ಷಿಣ ಕನ್ನಡದಲ್ಲಿ ಇಂದು ಕೊರೋನಾ ಸ್ಪೋಟಗೊಂಡಿದ್ದು ೧೪೭ ಮಂದಿಗೆ ಸೊಂಕು ಕಂಡುಬಂದು ಅಘಾತಕ್ಕೀಡು ಮಾಡಿದೆ.
ಉಳ್ಳಾಲ ರ್ಯಾಂಡಮ್ ಟೆಸ್ಟ್ ನ 48 ಮಂದಿಗೆ, ILI 40 ಮಂದಿಗೆ, ಪ್ರಾಥಮಿಕ ಸಂಪರ್ಕದಿಂದ 35 ಜನರಿಗೆ, ಅಂತರಾಷ್ಟ್ರೀಯ ಪ್ರಯಾಣದಿಂದ 8 ಮಂದಿಗೆ, ಹೊರ ಜಿಲ್ಲೆಯಿಂದ ಬಂದ 7 ಮಂದಿಗೆ, SARI ಯಿಂದ 2 ಮಂದಿಗೆ, ಕೋವಿಡ್ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್, ಮಲೇಷಿಯಾದಿಂದ ಹಡಗಿನಲ್ಲಿ ಬಂದ ಇಬ್ಬರಿಗೆ, ಶಸ್ತ್ರ ಚಿಕಿತ್ಸೆಯ ಮೊದಲು ಮಾಡಿದ ಟೆಸ್ಟ್ ನಿಂದ ಒಬ್ಬರಿಗೆ, ಹೆರಿಗೆಯ ಸಂದರ್ಭ ಮಾಡಿದ ಟೆಸ್ಟ್ ನಿಂದ ಓರ್ವ ಮಹಿಳೆಗೆ ಹಾಗೂ ಸಂಪರ್ಕವೇ ಪತ್ತೆಯಾಗದ ಓರ್ವ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ.