ಉಡುಪಿ: ನಿಯಮ ಮೀರಿ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿ ಪೊಲೀಸ್ ಇಲಾಖೆಯು ಉಡುಪಿ ಜಿಲ್ಲೆಯ 345 ಧಾರ್ಮಿಕ ಹಾಗೂ ಇತರ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಿದೆ.
ಈವರೆಗೆ ಜಿಲ್ಲೆಯ 122 ಮಸೀದಿಗಳು, 120 ದೇವಸ್ಥಾನಗಳು, 44 ಚರ್ಚ್‌ಗಳು, ಎಂಟು ಪಬ್ಸ್ ಹಾಗೂ ಏಳು ಇತರ ಸಂಸ್ಥೆಗಳಿಗೆ ನೋಟೀಸ್ ನೀಡಲಾಗಿದ್ದು, ಇನ್ನು ಉಳಿದ ಸಂಸ್ಥೆಗಳನ್ನು ಗುರುತಿಸಿ ನೋಟೀಸ್ ನೀಡಲಾಗು ವುದು. ಮುಂದೆ ಈ ಬಗ್ಗೆ ಹೈಕೋರ್ಟ್ ಆದೇಶದಂತೆ ಕ್ರಮ ತೆಗೆದುಕೊಳ್ಳಲಾಗುವುದೆಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ತಿಳಿಸಿದ್ದಾರೆ.
1 Comment
tadalafil troche (lozenge) where to buy tadalafil generic