ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಅಂಕೆ ಮೀರಿ ಹರಡುತಿದ್ದು, ಸೋಂಕಿನ ಕಾರಣದಿಂದ ಇಂದು ಮತ್ತೋರ್ವ ಸಾವನ್ನಪ್ಪಿದ್ದು, ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ 23ಕ್ಕೇರಿದೆ.
ಮಂಗಳೂರು ಹೊರಲಯದ ತೊಕ್ಕೋಟಿನ ಸಂತೋಷ್ ನಗರ ನಿವಾಸಿ ಇಂದು ಸಾವನ್ನಪ್ಪಿದ್ದಾರೆ. 52 ವರ್ಷ ಪ್ರಾಯದ ಅವರು ಹೃದಯರೋಗ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ದಕ್ಷಿಣ ಕನ್ನಡದಲ್ಲಿ ನಿನ್ನೆ ಕೊರೋನಾ ಸ್ಪೋಟಗೊಂಡಿದ್ದು 147 ಮಂದಿಯಲ್ಲಿ ಸೊಂಕು ಕಂಡುಬಂದು ಅಘಾತಕ್ಕೊಂಡು ಮಾಡಿತ್ತು.