ಮಂಗಳೂರು: ಬಂಧನ ವಾರಂಟ್ ಇರುವ ಆರೋಪಿಯೊಬ್ಬನನ್ನು ಬಂಧಿಸಲು ತೆರಳಿದ ವೇಳೆ ಆರೋಪಿಯ ತಂದೆ ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಆರೋಪಿ ಡ್ರ್ಯಾಗರ್‌ನಿಂದ ಇರಿದು ಕೊಲೆಗೆ ಯತ್ನಿಸಿ, ಜೀವಬೆದರಿಕೆ ಹಾಕಿದ ಘಟನೆ ಶುಕ್ರವಾರ ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೊಹಮ್ಮದ್ ಫೈಜಲ್ ಯಾನೆ ಕ್ಯಾಬರೆ ಫೈಜಲ್ ಬಂಧಿತ ಆರೋಪಿ. ಮೂಡುಬಿದಿರೆ ಪೊಲೀಸ್ ಠಾಣೆಯ ನಾನಾ ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿದ್ದು, ಮೂಡುಬಿದಿರೆ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಿಂದ ಈತನ ವಿರುದ್ಧ ಬಂಧನ ವಾರಂಟ್ ಜಾರಿಯಲ್ಲಿತ್ತು. ಆರೋಪಿ ಆತನ ಮನೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮೂಡುಬಿದಿರೆ ಠಾಣೆ ಎಎಸ್‌ಐ ರಾಜೇಶ್ ಮತ್ತು ಸಿಬ್ಬಂದಿ ಆತನನ್ನು ಬಂಧಿಸಲು ತೆರಳಿದ್ದರು.
ಮಧ್ಯಾಹ್ನ 2 ಗಂಟೆ ವೇಳೆಗೆ ಹಿದಾಯತ್ ನಗರದಲ್ಲಿರುವ ಆರೋಪಿಯ ಮನೆಗೆ ತೆರಳಿದ್ದು, ಆತನನ್ನು ವಶಕ್ಕೆ ಪಡೆಯಲು ಮುಂದಾದಾಗ ಮನೆಯಲ್ಲಿದ್ದ ಆತನ ತಂದೆ ಹಮೀದ್ ಎಂಬಾತನು ಮನೆಯ ಮುಂಭಾಗಿನಲ್ಲಿ ಅಡ್ಡವಾಗಿ ನಿಂತು ಪೊಲೀಸರನ್ನು ಹೀನಾಯವಾಗಿ ನಿಂದಿಸಿ, ಪೊಲೀಸರನ್ನು ಹಿಡಿದು ತಳ್ಳಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಈ ಸಂದರ್ಭ ಫೈಜಲ್ ಹಿಂಬಾಗಿಲಿನ ಮೂಲಕ ತಪ್ಪಿಸಲು ಯತ್ನಿಸಿದಾಗ ಕೂಡಲೇ ಪೊಲೀಸ್ ಕಾನ್‌ಸ್ಟೆಬಲ್ ಅಯ್ಯಪ್ಪ ಮನೆಯ ಹಿಂಬಾಗಿಲಿನ ಕಡೆ ಓಡಿ ಹೋಗಿ ಫೈಜಲ್ ತಪ್ಪಿಸಿಕೊಂಡು ಹೋಗದಂತೆ ಅಡ್ಡಲಾಗಿ ನಿಂತಿದ್ದಾರೆ.
ಈ ಸಂದರ್ಭ ಅಯ್ಯಪ್ಪನನ್ನು ಕೊಲೆ ಮಾಡಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಹರಿತವಾದ ಡ್ರ್ಯಾಗರ್‌ನಿಂದ ಹೊಟ್ಟೆಗೆ ತಿವಿಯಲು ಹೋಗಿದ್ದು, ಈ ಸಂದರ್ಭ ಅಯ್ಯಪ್ಪ ತಪ್ಪಿಸಿಕೊಂಡಿದ್ದು ಇದರಿಂದ ಬಲಗೈಗೆ ಗಾಯವಾಗಿದೆ. ಎಎಸ್‌ಐ ರಾಜೇಶ್ ಅವರು ಅಯ್ಯಪ್ಪ ಅವರ ಸಹಾಯಕ್ಕಾಗಿ ಓಡಿದಾಗ ಆರೋಪಿ ಫೈಜಲ್ ಅವರಿಗೂ ಡ್ರ್ಯಾಗರ್ ತೋರಿಸಿ ಕೊಲೆ ಬೆದರಿಕೆ ಹಾಕಿ ಮನೆಯ ಹಿಂಭಾಗದ ಹಾಡಿ ಪ್ರದೇಶಕ್ಕೆ ಓಡಿ ಹೋಗಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಪಡೆದು ಪಿಎಸ್‌ಐಗಳಾದ ಸುದೀಪ್, ದಿವಾಕರ್ ಸೇರಿದಂತೆ ಹೆಚ್ಚಿನ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಗಾಗಿ ಶೋಧ ನಡೆಸಿದ್ದಾರೆ. ಈ ಸಂದರ್ಭ ಆರೋಪಿ ತೋಡಾರಿನ ಬದ್ರಿಯಾ ಸುನ್ನಿ ಜುಮ್ಮಾ ಮಸೀದಿ ಹಿಂಭಾಗದಲ್ಲಿರುವ ಹಾಡಿಯಲ್ಲಿ ಅವಿತು ಕುಳಿತಿರುವುದನ್ನು ಪತ್ತೆ ಹಚ್ಚಿ, ಆರೋಪಿಯನ್ನು ಡ್ರ್ಯಾಗರ್ ಸಹಿತ ಬಂಧಿಸಲಾಗಿದೆ. ಆರೋಪಿ ಫೈಜಲ್ ಮತ್ತು ಆತನ ತಂದೆ ಹಮೀದ್ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಫೈಜಲ್ ವಿರುದ್ಧ ಮೂಡುಬಿದಿರೆ, ವೇಣೂರು, ಬಜಪೆ, ಮಂಗಳೂರು ಗ್ರಾಮಾಂತರ, ಲಿಂಗದಹಳ್ಳಿ, ಅಜೆಕಾರು ಸೇರಿದಂತೆ ನಾನಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಈತನ ಬಂಧನಕ್ಕೆ ಹಲವು ಸಮಯದಿಂದ ಪೊಲೀಸರು ಬಲೆ ಬೀಸಿದ್ದರು.

4 Comments
Thanks for every other informative blog. Where else could I get that kind of info written in such a perfect method? I have a mission that I’m just now working on, and I have been at the look out for such information.
Magnificent goods from you, man. I have be mindful your stuff previous to and you’re just extremely great. I really like what you have received here, really like what you are saying and the best way by which you say it. You are making it enjoyable and you still care for to keep it wise. I can’t wait to read far more from you. This is really a wonderful web site.
What i don’t understood is actually how you’re now not actually much more smartly-liked than you might be now. You’re very intelligent. You realize therefore considerably relating to this topic, made me personally believe it from so many numerous angles. Its like men and women don’t seem to be involved unless it is something to accomplish with Lady gaga! Your individual stuffs excellent. All the time deal with it up!
ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತ್ರಿವರ್ಣ ಧ್ವಜ ಹಾರಾಡುತ್ತಿದೆ – ಮೋದಿ