ಮಂಗಳೂರು: ನಗರದ ಬೋಂದೆಲ್‌ನಲ್ಲಿ ಬಾಲಕಿಗೆ ಮೊಬೈಲ್ ನಂಬರ್ ಕೊಟ್ಟ ಆರೋಪದಲ್ಲಿ ಕಂಡಕ್ಟರ್‌ನನ್ನು ಬಸ್ಸಿನಿಂದ ಇಳಿಸಿದ ಬಾಲಕಿಯ ತಾಯಿ ಕಂಡಕ್ಟರ್‌ಗೆ ಹೊಡೆದ ಘಟನೆ ನಡೆದಿದೆ.
ಆರೋಪಿ ಬಸ್ ಕಂಡೆಕ್ಟರ್ ಬಾಲಕಿಗೆ ತನ್ನ ಮೊಬೈಲ್ ನಂಬರ್ ನೀಡಿದ್ದಲ್ಲದೆ ಕರೆ ಮಾಡಿ ಮಾತನಾಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಬಾಲಕಿಯ ತಾಯಿ ಬೋಂದೆಲ್‌ನಲ್ಲಿ ಬಸ್ಸನ್ನು ತಡೆದು ನಿಲ್ಲಿಸಿ ಕಂಡೆಕ್ಟರ್‌ನನ್ನು ಕೆಳಗಿಳಿಸಿ ಹಲ್ಲೆ ನಡೆಸಲಾಗಿದೆ. ಏಟು ತಿಂದ ಕಂಡಕ್ಟರ್ ಬಾಲಕಿಗೆ ಕೆಲವು ದಿನಗಳ ಹಿಂದೆ ಮೊಬೈಲ್ ನಂಬರ್ ನೀಡಿದ್ದ ಎನ್ನಲಾಗಿದ್ದು, ಬಸ್ಸಿನಿಂದ ಕೆಳಗಿಳಿಸಿ ಆತನಿಗೆ ಬಾಲಕಿಯ ತಾಯಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

8ನೇ ತರಗತಿ ಓದುತ್ತಿರುವ ಬಾಲಕಿ ಬಸ್‌ನಲ್ಲಿ ಪ್ರಯಾಣಿಸಿದ ಮೊದಲ ದಿನದಂದೇ ಕಂಡೆಕ್ಟರ್ ತನ್ನ ಮೊಬೈಲ್ ನಂಬರ್ ಕೊಟ್ಟಿದ್ದ ಎಂದು ಹೇಳಲಾಗಿದೆ. ಈ ವಿಚಾರವನ್ನು ಬಾಲಕಿ ಮನೆಯಲ್ಲಿ ತಿಳಿಸಿದ್ದು, ಆಕ್ರೋಶಗೊಂಡ ಬಾಲಕಿಯ ತಾಯಿ ಕಂಡೆಕ್ಟರ್‌ಗೆ ಹಲ್ಲೆಗೈದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಸದ್ಯ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
5 Comments
top online pharmacy india how to get prescription drugs from canada
dark web market tor markets 2022 [url=https://darkwebmarketspages.com/ ]deep web markets [/url]
canadian drugs without prescription which canadian pharmacy is legitimate
can i use hsa for canadian pharmacy reddit online pharmacy
I was excited to discover this website. I want to to thank you for your time for this wonderful read!! I definitely liked every part of it and i also have you book-marked to look at new things on your website.