ಮಂಗಳೂರು: ಐಸಿಸ್ ಸಂಘಟನೆಯ ಜೊತೆ ನಂಟು ಬೆಳೆಸಿರುವ ಶಂಕೆಯ ಮೇರೆಗೆ ಉಳ್ಳಾಲದ ದೀಪ್ತಿ ಮಾರ್ಲ ಯಾನೆ ಮರಿಯಂ ಎಂಬಾಕೆಯನ್ನು ಸೋಮವಾರ ಬಂಧಿಸಿದ್ದ ಎನ್‌ಐಎ ತಂಡವು ಹೆಚ್ಚಿನ ವಿಚಾರಣೆಗಾಗಿ ಮಂಗಳವಾರ ನಗರದಿಂದ ದೆಹಲಿಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ದೀಪ್ತಿ ಮಾರ್ಲ ಯಾನೆ ಮರಿಯಂ ಬಳಸುತ್ತಿದ್ದ ಮೊಬೈಲ್ ಫೋನನ್ನು ಎನ್‌ಐಎ ತಂಡವು ವಶಕ್ಕೆ ಪಡೆದಿದೆ. ಅಲ್ಲದೆ ಆಕೆ ಬಳಸುತ್ತಿದ್ದ ಲ್ಯಾಪ್‌ಟಾಪ್‌ನ್ನು ಎನ್‌ಐಎ ತಂಡವು ಈ ಹಿಂದೆಯೇ ವಶಪಡಿಸಿಕೊಂಡು ಹೋಗಿತ್ತು ಎಂದು ತಿಳಿದುಬಂದಿದೆ.
ಉಳ್ಳಾಲದ ಮಾಸ್ತಿಕಟ್ಟೆಯ ಇದಿನಬ್ಬರ ಮೂರನೇ ಮಗನಾಗಿರುವ ಬಿ.ಎಂ. ಪಾಷಾನ ಮೂರನೇ ಮಗನಾಗಿರುವ ಅನಾಸ್ ಅಬ್ದುಲ್ ರೆಹಮಾನ್‌ನ ಪತ್ನಿಯಾಗಿರುವ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂಳನ್ನು ಎನ್ಐಎ ವಶಕ್ಕೆ ಪಡೆದುಕೊಂಡಿದೆ. ಅನಾಸ್ ಅಬ್ದುಲ್ ರಹಿಮಾನ್‌ನನ್ನು ಪ್ರೀತಿಸಿ, ದೀಪ್ತಿ ಮಾರ್ಲ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಳು. ಮೂಲತಃ ಹಿಂದು ಧರ್ಮದವಳಾದ ದೀಪ್ತಿ ಮಾರ್ಲ ಕೊಡಗು ಮೂಲದವಳು. ಮುಸ್ಲಿಂ ಆಗಿ ಮತಾಂತರಗೊಂಡು ಹತ್ತು ವರ್ಷಗಳ ಹಿಂದೆ ಅನಾಸ್ ಅಬ್ದುಲ್ ರೆಹಮಾನ್‌ನನ್ನು ಮದುವೆಯಾಗಿದ್ದರು. ದೇಶದ ಹಲವೆಡೆ ಬಂಧನವಾಗಿರುವ ಐಸಿಸ್ ನೆಟ್‌ವರ್ಕ್ ಸಂಬಂಧಿ ಆರೋಪಿಗಳು ಈಕೆಯ ಹೆಸರನ್ನೇ ಹೇಳಿದ್ದರು. ಹೀಗಾಗಿ ಮರಿಯಂಳನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಕಳೆದ ಅಗಸ್ಟ್ 4ರಂದು ಜಮ್ಮು ಕಾಶ್ಮೀರದಲ್ಲಿ ಬಂಧನವಾಗಿದ್ದ ಆರು ಮಂದಿ ಉಗ್ರರ ಜೊತೆ ಮರಿಯಂ ಸಂಪರ್ಕ ಹೊಂದಿದ್ದಳು. ಅಲ್ಲದೇ ಜಮ್ಮು ಕಾಶ್ಮೀರಕ್ಕೆ ಹೋಗಿ ಉಗ್ರರನ್ನು ಭೇಟಿಯಾಗಿದ್ದಳು. ಆಗಸ್ಟ್ 4ರಂದು ಎನ್ಐಎ ಅಧಿಕಾರಿಗಳು ಮರಿಯಂಳನ್ನೂ ಬಂಧನ ಮಾಡಬೇಕಿತ್ತು. ಆದರೆ ಮರಿಯಂಳಗೆ ಚಿಕ್ಕ ಮಗುವಿದ್ದ ಕಾರಣ ಆರು ತಿಂಗಳು ಸಮಯಾವಕಾಶ ನೀಡಲಾಗಿತ್ತು. ಈಗ ಉಗ್ರ ಸಂಪರ್ಕ ಪ್ರಕರಣದ ಹಿನ್ನಲೆಯಲ್ಲಿ ಮರಿಯಂಳನ್ನು ಬಂಧನ ಮಾಡಲಾಗಿದೆ. ಕಳೆದ ಬಾರಿ ಆಗಸ್ಟ್ 4ರಂದು ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳ ತಂಡ, ಎರಡು ದಿನಗಳ ದಾಳಿಯ ಬಳಿಕ ಪಾಷಾ ಕಿರಿಯ ಪುತ್ರ ಅಮ್ಮರ್‌ನನ್ನು ಬಂಧಿಸಿತ್ತು. ಉಗ್ರರಿಗೆ ನೆರವಾಗಲು ಹಣ ಸಂಗ್ರಹ ಮಾಡುತ್ತಿದ್ದ ಅಮ್ಮರ್ ಖಾತೆಗೆ ವಿದೇಶದಿಂದ ನೂರಾರು ಕೋಟಿ ರೂಪಾಯಿ ಹರಿದು ಬಂದಿತ್ತು. ಈ ಹಣವನ್ನು ಅಮ್ಮರ್ ಉಗ್ರ ಸಂಘಟನೆಗಳಿಗೆ ನೆರವಾಗುವ ಜನರಿಗೆ ಹಣ ಹಂಚಿದ್ದ.
ಇದರ ಮುಂದುವರಿದ ಭಾಗವಾಗಿ ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ದಿ. ಇದಿನಬ್ಬ ಪುತ್ರ ಬಿ.ಎಂ. ಪಾಷಾ ಮನೆಗೆ ಎನ್‌ಐಎ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ದೆಹಲಿಯಿಂದ ಬಂದಿದ್ದ ಎನ್‌ಐಎ ತನಿಖಾಧಿಕಾರಿ ಡಿಎಸ್ಪಿ ಕೃಷ್ಣಕುಮಾರ್ ನೇತೃತ್ವದ ಮೂವರ ತಂಡ ಈ ದಾಳಿ ನಡೆಸಿದೆ.
ಈ ಸಂದರ್ಭದಲ್ಲಿ ಬಿ.ಎಂ. ಪಾಷಾ ಸೊಸೆ ದೀಪ್ತಿ ಮಾರ್ಲಾ ಆಲಿಯಾಸ್ ಮರಿಯಂಳನ್ನು ಉಗ್ರ ಸಂಘಟನೆ ಐಸಿಸ್ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಬಂಧಿಸಿದೆ. ದೀಪ್ತಿ ಮಾರ್ಲಳನ್ನು ಬಂಧಿಸಿ ಉಳ್ಳಾಲದ ಮನೆಯಿಂದ ಟೆಂಪೋ ಟ್ರಾವೆಲರ್ ವಾಹನದಲ್ಲಿ ಕರೆದುಕೊಂಡು ಎನ್‌ಐಎ ತಂಡ ವೆನ್‌ಲಾಕ್ ಜಿಲ್ಲಾಸ್ಪತ್ರೆಗೆ ಕರೆ ತಂದಿತ್ತು. ಮರಿಯಂ ಆರೋಗ್ಯ ತಪಾಸಣೆ ಬಳಿಕ ಜಿಲ್ಲಾ ಕೋರ್ಟ್‌ಗೆ ಹಾಜರುಪಡಿಸಿ ದೆಹಲಿಗೆ ಹೆಚ್ಚಿನ ವಿಚಾರಣೆಗೆ ಕರೆದೊಯ್ದಿದ್ದಾರೆ.
6 Comments
Simply desire to say your article is as astounding. The clearness in your post is just nice and i could suppose you are knowledgeable in this subject. Fine with your permission let me to grab your feed to stay up to date with imminent post. Thanks one million and please continue the gratifying work.
Heya i’m for the first time here. I found this board and I find It really useful & it helped me out a lot. I hope to give something back and help others like you aided me.
Thank you for another informative blog. Where else could I get that type of info written in such an ideal way? I have a project that I’m just now working on, and I have been on the look out for such info.
Hello! I could have sworn I’ve been to this blog before but after browsing through some of the post I realized it’s new to me. Anyways, I’m definitely happy I found it and I’ll be book-marking and checking back frequently!
I was looking at some of your posts on this website and I believe this site is real instructive! Continue posting.
I haven¦t checked in here for a while as I thought it was getting boring, but the last few posts are great quality so I guess I¦ll add you back to my daily bloglist. You deserve it my friend 🙂