ಉಡುಪಿ: ಅಸನಿ ಚಂಡಮಾರುತ ಪರಿಣಾಮ ಮಲ್ಪೆಯಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಬೃಹತ್ ಅಲೆಗಳಿಂದಾಗಿ ನಾಲ್ಕು ದಿನಗಳ ಹಿಂದೆ ಬೀಚ್‌ನಲ್ಲಿ ಅಳವಡಿಸಲಾದ ತೇಲುವ ಸೇತುವೆಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಬೃಹತ್ ಅಲೆಗಳ ಕಾರಣಕ್ಕಾಗಿ ರವಿವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೀಚ್‌ನಲ್ಲಿ ವಾಟರ್ ಸ್ಪೋರ್ಟ್ಸ್ ಹಾಗೂ ತೇಲುವ ಸೇತುವೆ ಪ್ರವೇಶವನ್ನು ಸ್ಥಗಿತಗೊಳಿಸಲಾಗಿತ್ತು. ರಾತ್ರಿ ಸಮುದ್ರ ಇನ್ನಷ್ಟು ಪ್ರಕ್ಷುಬ್ಧಗೊಂಡಿದ್ದು, ರಕ್ಕಸ ಗಾತ್ರದ ಅಲೆಗಳು ತೀರ ಅಪ್ಪಳಿಸುತ್ತಿದ್ದವು. ಇದರ ಪರಿಣಾಮವಾಗಿ ತೇಲುವ ಸೇತುವೆಯು ಛಿದ್ರಗೊಂಡು ಸಮುದ್ರಪಾಲಾಗಿದೆ. ಸೇತುವೆಯ ಬಿಡಿಭಾಗಗಳು ಸಮುದ್ರದಲ್ಲಿ ತೇಲುವ ದೃಶ್ಯಗಳು ಕಂಡುಬಂದಿವೆ. ಇದನ್ನು ಮರು ಜೋಡಿಸುವ ಕಾರ್ಯ ಇದೀಗ ನಡೆಯುತ್ತಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಸದ್ಯಕ್ಕೆ ಮಲ್ಪೆ ಬೀಚ್‌ನಲ್ಲಿನ ವಾಟರ್ ಸ್ಪೋರ್ಟ್ಸ್ ಹಾಗೂ ತೇಲುವ ಸೇತುವೆ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಲ್ಪೆ ಬೀಚ್ ಉಸ್ತುವಾರಿ ಸುದೇಶ್ ಶೆಟ್ಟಿ, ಚಂಡಮಾರುತದ ಪರಿಣಾಮ ಭಾರೀ ಗಾತ್ರದ ಅಲೆಗಳಿಂದ ಸೇತುವೆಗೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿವೆ. ಸೇತುವೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಸೇತುವೆ ಸಂಪೂರ್ಣ ಸುರಕ್ಷತೆಯಿಂದ ಕೂಡಿದೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಪಚಾರ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಚಂಡಮಾರುತ ಕಾರಣಕ್ಕಾಗಿ ರವಿವಾರವೇ ನಾವು ಎಲ್ಲವನ್ನು ಸಂಪೂರ್ಣ ಬಂದ್ ಮಾಡಿದ್ದೇವೆ. ರವಿವಾರ ಸಂಜೆಯಿಂದ ಇಂದು ಮತ್ತು ನಾಳೆ ಕೂಡ ವಾಟರ್ ಸ್ಪೋರ್ಟ್ಸ್, ಸೈಂಟ್ ಮೇರಿಸ್ ದ್ವೀಪದ ಬೋಟು, ತೇಲುವ ಸೇತುವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
1 Comment
u.s online pharmacy buy online pharmacy uk