ಉಡುಪಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಅದರ ಪರಿಣಾಮ ಕರಾವಳಿ ಕಡಲ ತೀರ ಉಡುಪಿ ಜಿಲ್ಲೆ ಮೇಲೂ ಬಿದ್ದಿದೆ. ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ತಾಲೂಕುಗಳಲ್ಲಿ ಭಾರೀ ಮಳೆಯಾಗಿದೆ.
ಮಧ್ಯಾಹ್ನದವರೆಗೆ ಕಾರ್ಕಳ ಹೆಬ್ರಿಯಲ್ಲಿ ಭಾರೀ ಬಿಸಿಲಿತ್ತು. ಎರಡು ಗಂಟೆ ಕಳೆಯುತ್ತಿದ್ದಂತೆ ವಾತಾವರಣದ ಚಿತ್ರಣ ದಿಢೀರ್ ಬದಲಾಯ್ತು. ಮೋಡ ಕವಿದು ಮಳೆ ಆರಂಭವಾಯ್ತು. ಉಡುಪಿ, ಕುಂದಾಪುರ ನಗರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ನಗರ ಪ್ರದೇಶದಲ್ಲಿ ರೈನ್ ಕೋಟ್ ತಾರದ ದ್ವಿಚಕ್ರ ವಾಹನ ಸವಾರರು ಪರದಾಡಿದರು.
ಉಡುಪಿ ಜಿಲ್ಲೆಯಾದ್ಯಂತ ನೂರಾರು ಧಾರ್ಮಿಕ, ಕೌಟುಂಬಿಕ ಕಾರ್ಯಕ್ರಮ ಇಂದು ನಿಗದಿಯಾಗಿತ್ತು. ದಿಢೀರ್ ಮಳೆ ಅಲ್ಲೆಲ್ಲ ಜನರಿಗೆ ಸಮಸ್ಯೆ ತಂದಿಟ್ಟಿತು. ಒಂದೆರಡು ಗಂಟೆ ಮಳೆ ಬಿದ್ದ ಕೂಡಲೇ ಉಡುಪಿಯಲ್ಲಿ ವಾತಾವರಣ ಸಂಪೂರ್ಣ ತಂಪಾಗಿದೆ.
ಮಳೆ ಮುಂದುವರಿಯುವ ಸಾಧ್ಯತೆ ಇದೆ. ಅಡಿಕೆ, ಗೇರು ಮಾವಿನ ಬೆಳೆ ಮೇಲೆ ಅಡ್ಡ ಪರಿಣಾಮ ಬೀಳಲಿದೆ. ತರಕಾರಿ, ಆಹಾರದ ಬೆಳೆ ಈ ಭಾಗದಲ್ಲಿ ಕಡಿಮೆ ಬೆಳೆಯುವ ಕಾರಣ ದೊಡ್ಡ ಪ್ರಮಾಣದ ನಷ್ಟ ಆಗಲಿಕ್ಕಿಲ್ಲ. ಮುಂಜಾನೆ ಚಳಿ, ಮಧ್ಯಾಹ್ನ ಬಿಸಿಲು, ಸಂಜೆ ಮಳೆ ಹೀಗೆ ಒಂದೇ ದಿನ ಮೂರು ತರದ ವಾತಾವರಣ ಉಡುಪಿಯಲ್ಲಿ ಕಾಣಿಸಿಕೊಂಡಿತು.
2 Comments
Your style is very unique in comparison to other folks I’ve read stuff from.
Many thanks for posting when you have the opportunity, Guess I will
just book mark this blog.
Thanks for this post, I am a big fan of this site would like to proceed updated.