ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟು ಕಾಪಿಕಾಡ್ ಪಾಯಿಂಟ್ ಸಮೀಪ ಗೃಹ ರಕ್ಷಕದಳ ಸಿಬ್ಬಂದಿ ಜಯಶ್ರೀ ಎಂಬವರಿಗೆ ಯುವಕರು ನಿಂದನೆ ಮಾಡಿದ ಘಟನೆ ವರದಿಯಾಗಿದೆ.
ನಗರದ ತೊಕ್ಕೊಟ್ಟು ಕಾಪಿಕಾಡ್ ಪಾಯಿಂಟ್ನಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಜಯಶ್ರೀ ಮೇಲಧಿಕಾರಿಗಳ ಸೂಚನೆಯಂತೆ ಕರ್ತವ್ಯ ನಿರತರಾಗಿದ್ದಾರು. ಮತ್ತು ಅವರು ಸಂಚಾರ ನಿಯಮ ಉಲ್ಲಂಘಿಸಿ ವಾಹನ ಸವಾರಿ ಮಾಡುವವರ ಪೋಟೋವನ್ನು ತೆಗೆಯುತ್ತಿದ್ದರು.
ಈ ಸಂದರ್ಭ ಉಳ್ಳಾಲ ಕಡೆಯಿಂದ ಕಾಫಿಕಾಡ್ಗೆ ರಾ.ಹೆ-66ರ ಏಕಮುಖ ರಸ್ತೆಗೆ ವಿರುದ್ಧವಾಗಿ ಸ್ಕೂಟರ್ವೊಂದರಲ್ಲಿ ಸವಾರನೋರ್ವ, ಸಹಸವಾರನನ್ನು ಕುಳ್ಳಿರಿಸಿಕೊಂಡು ಹೆಲ್ಮೇಟ್ ಹಾಕದೆ ಬರುತ್ತಿದ್ದರು. ಇವರಲ್ಲಿ ಹಿಂಬದಿ ಸವಾರ ಹಿಂಬದಿ ಮುಖಮಾಡಿ ಕುಳಿತ್ತಿದ್ದ. ಈ ವೇಳೆ ಜಯಶ್ರೀ ಅವರು ಸ್ಕೂಟರ್ನ ಫೋಟೋ ತೆಗೆಯಲು ಯತ್ನಿಸಿದಾಗ, ನಂಬರ್ ಪ್ಲೇಟ್ ಮುಚ್ಚುವ ಉದ್ದೇಶದಿಂದ ಸಹಸವಾರ ಕಾಲು ಅಡ್ಡ ಹಾಕಿದ್ದ. ಮಾತ್ರವಲ್ಲ, ಜಯಶ್ರೀ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.