ಉಡುಪಿ: ನಗರದ ಕೋಟದಲ್ಲಿ ಮೊನ್ನೆ ನಡೆದ ಮೆಹೆಂದಿ ಕಾರ್ಯಕ್ರಮದಲ್ಲಿ ಪೋಲಿಸ್ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥ ಪೊಲೀಸರ ವಿಚಾರಣೆ ಮುಗಿಯುವ ತನಕ ಕೋಟ ಠಾಣೆಯಿಂದ ಸ್ಥಳಾಂತರ ಮಾಡಿ ಉಡುಪಿ ಎಸ್ಪಿ ವಿಷ್ಣುವರ್ದನ ಆದೇಶ ನೀಡಿದ್ದಾರೆ.

ಕೊರಗ ಜನಾಂಗದ ಮೆಹಂದಿ ಕಾರ್ಯಕ್ರಮದಲ್ಲಿ ಲಾಠಿಚಾರ್ಜ ನಡೆಸಿದ ಆರೋಪ ಎದುರಿಸುತ್ತಿರುವ ಪಿಎಸ್ ಐ ಸಂತೋಷ್ ಮತ್ತು ಐವರು ಸಿಬ್ಬಂದಿಗಳನ್ನು ಠಾಣೆಯಿಂದ ಶಿಫ್ಟ್ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಪಿಎಸ್ ಐ ಮತ್ತು 5 ಮಂದಿ ಸಿಬ್ಬಂದಿಗಳು ಕೋಟ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತಿಲ್ಲ ಎಂದು ಉಡುಪಿ ಎಸ್ ಪಿ ವಿಷ್ಣುವರ್ಧನ್ ಆದೇಶ ಹೊರಡಿಸಿದ್ದಾರೆ.
ಪ್ರಕರಣ ಸಂಬಂಧ ಉಡುಪಿ ಡಿಎಸ್ ಪಿ ನೇತೃತ್ವದಲ್ಲಿ ತನಿಖೆಗೆ ನಡೆಯಲಿದ್ದು ,ನಾಳೆ ಸಂಜೆಯ ಒಳಗೆ ತನಿಖೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸುದ್ದಿಗೋಷ್ಢಿ ನಡೆಸಿ , ಘಟನೆ ನಿಜವಾಗಿದ್ದಲ್ಲಿ ಖಂಡಿತ ಕ್ರಮ ಕೈಗೊಳ್ಳುತ್ತೇವೆ.ಇಲಾಖೆ ಬಗ್ಗೆ ನಂಬಿಕೆ ಇರಲಿ.ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಘಟನೆಯ ವಿವರ: ಕೋಟತಟ್ಟು ಗ್ರಾ.ಪಂ ವ್ಯಾಪ್ತಿಯ ಕೊರಗ ಕಾಲನಿ ನಿವಾಸಿ ರಾಜೇಶ್ ಎನ್ನುವಾತನಿಗೆ ಕುಮಟಾದ ಯುವತಿಯೊಂದಿಗೆ ಮದುವೆ ನಡೆಯಬೇಕಿದ್ದು, ಈ ಪ್ರಯುಕ್ತ ವರನ ಮನೆಯಲ್ಲಿ ಸೋಮವಾರ ಮೆಹಂದಿ ಕಾರ್ಯಕ್ರಮ ನಡೆಯುತಿತ್ತು. ಈ ಸಂದರ್ಭ ಡಿಜೆ ಶಬ್ದದಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.
ಹೀಗಾಗಿ ಏಕಾಏಕಿ ಮನೆಗೆ ನುಗ್ಗಿದ ಪೊಲೀಸರು ಮಹಿಳೆಯರು, ಮಕ್ಕಳೆನ್ನದೆ ಎಲ್ಲರ ಮೇಲೂ ಲಾಠಿ ಚಾರ್ಜ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದು, ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
ಮೆಹಂದಿ ಮನೆಯಿಂದ ವರ ರಾಜೇಶ್ ಹಾಗೂ ಎಸ್ ಟಿ ಸಮುದಾಯದ ಮುಖಂಡ ಸಹಿತ ಐವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಇದರಿಂದ ಆಕ್ರೋಶಗೊಂಡ ಎಸ್ಟಿ ಸಮುದಾಯದವರು ರಾತ್ರೋರಾತ್ರಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬಳಿಕ ವಶಕ್ಕೆ ಪಡೆದವರನ್ನು ಬಿಡುಗಡೆಗೊಳಿಸಲಾಯಿತು.
ಪೊಲೀಸರ ದೌರ್ಜನ್ಯದ ಕುರಿತು ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
9 Comments
It¦s really a nice and helpful piece of info. I am glad that you just shared this helpful info with us. Please keep us informed like this. Thanks for sharing.
I like this site so much, saved to bookmarks. “I don’t care what is written about me so long as it isn’t true.” by Dorothy Parker.
Outstanding post, you have pointed out some great details , I as well think this s a very fantastic website.
Excellent read, I just passed this onto a friend who was doing a little research on that. And he just bought me lunch since I found it for him smile Therefore let me rephrase that: Thanks for lunch!
he blog was how do i say it… relevant, finally something that helped me. Thanks
What i do not realize is in truth how you’re not actually much more well-favored than you might be now. You’re so intelligent. You understand thus considerably in terms of this matter, produced me in my view consider it from so many various angles. Its like men and women aren’t fascinated until it¦s one thing to do with Lady gaga! Your own stuffs great. All the time handle it up!
My spouse and I absolutely love your blog and find a lot of your post’s to be precisely what I’m looking for. can you offer guest writers to write content for yourself? I wouldn’t mind writing a post or elaborating on most of the subjects you write about here. Again, awesome weblog!
Wonderful work! This is the type of info that are supposed to be shared around the net. Shame on the seek engines for no longer positioning this post upper! Come on over and visit my web site . Thanks =)
Hey, I think your site might be having browser compatibility issues. When I look at your website in Chrome, it looks fine but when opening in Internet Explorer, it has some overlapping. I just wanted to give you a quick heads up! Other then that, awesome blog!