ಮಂಗಳೂರು: ತರಂ‌ ಎಂಟರ್ ಟೈನ್‌ಮೆಂಟ್ ಇದರ ಪ್ರಾಯೋಜಕತ್ವದಲ್ಲಿ ಮತ್ತು ಸಿಟಿಝನ್ ಲೈವ್.ನ್ಯೂಸ್ ಇದರ ಸಹಯೋಗದೊಂದಿಗೆ ‘ಸ್ಟೈಲ್ ಫ್ರೂಟ್ ಫ್ಯಾಷನ್’ ‌ಆನ್ ಲೈನ್ ಸ್ಪರ್ಧೆಯನ್ನು ಲಾಕ್ ಡೌನ್ ಅವಧಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರನ್ನು ತರಂ ಎಂಟರ್ ಟೈನ್‌ಮೆಂಟ್ ನಿರ್ದೇಶಕಿ ಗೀತ್ ಬಂಗೇರ ಇವರು ಬಿಡುಗಡೆಗೊಳಿಸಿದ್ದಾರೆ.

ಸ್ಟೈಲ್ ಫ್ರೂಟ್ ಫ್ಯಾಷನ್ ಮಹಿಳೆಯರ‌ ವಿಭಾಗದಲ್ಲಿ ಜೊವಿಟಾ ಡಿಸೋಜ ಮೊದಲ‌ ಸ್ಥಾನ ತನ್ನದಾಗಿಸಿಕೊಂಡರೆ, ರನ್ನರ್ ಅಪ್ ಆಗಿ ಸುಷ್ಮಾ ಕುಮಾರ್ ಮತ್ತು ಮಿಸ್ ಕ್ರಿಯೇಟಿವ್ ಆಗಿ ರಕ್ಷಂದ ಸುವರ್ಣ ಹೊರಹೊಮ್ಮಿದ್ದಾರೆ.

ಇನ್ನು ಪುರುಷರ ವಿಭಾಗದಲ್ಲಿ ನಿಖಿಲ್ ಮೂರ್ತಿ ಮೊದಲ‌ ಸ್ಥಾನ ಪಡೆದರೆ, ರನ್ನರ್ ಅಪ್ ಆಗಿ ಅಜಿತ್ ಶೆಟ್ಟಿ ಮತ್ತು ಮಿಸ್ಟರ್ ಕ್ರಿಯೇಟಿವ್ ಆಗಿ ನಿಕ್ಷಿತ್ ಪೂಜಾರಿ ಹೊರಹೊಮ್ಮಿದ್ದಾರೆ.

ಸ್ಟೈಲ್ ಫ್ರೂಟ್ ಫ್ಯಾಷನ್ ಮಕ್ಕಳ ವಿಭಾಗದಲ್ಲಿ ಧಾತ್ರಿ ಪೂಜಾರಿ ಮೊದಲ‌ ಸ್ಥಾನ ಪಡೆದುಕೊಂಡಿದ್ದಾರೆ. ರನ್ನರ್ ಅಪ್ ಆಗಿ ಐಶ್ವರ್ಯ ವೈ ಪೈ ಮತ್ತು ಕ್ರಿಯೇಟಿವ್ ಕಿಡ್ಸ್ ಆಗಿ ಧೃಶ್ ಎಸ್ ಕುಲಾಲ್ ಹೊರಹೊಮ್ಮಿದ್ದಾರೆ.

ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, 2015 ರಿಂದ ಮಾಡಲಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತಿದ್ದೇನೆ. ತರಂ‌ ಎಂಟರ್ ಟೈನ್‌ಮೆಂಟ್ ಮೂಲಕ ಹೊಸ ಪ್ರಯತ್ನ ಎಂಬಂತೆ “ಫೇಸ್ ಆಫ್ ತರಂ” ನ್ನು 2018 ಯಶಸ್ವಿಯಾಗಿ ನಡೆಸಿದ್ದೆ, ಸ್ಟೈಲ್ ಫ್ರೂಟ್ ಫ್ಯಾಷನ್, ಮಾಡ್ಲಿಂಗ್ ನಲ್ಲಿ ಫ್ರೂಟ್ ಅನ್ನು ಯಾವರೀತಿ ಉಪಯೋಗಿಸಬಹುದು ಎಂಬ ವಿನೂತನವಾಗಿ ಈ ಸ್ಪರ್ಧೆಯನ್ನು ನಡೆಸಿದ್ದೆ. ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಇದಕ್ಕೆ ಸಹಕರಿಸಿದದ ಎಲ್ಲರಿಗೂ ಧನ್ಯವಾದಗಳು ಎಂದು ಗೀತ್ ಬಂಗೇರ ತಿಳಿಸಿದ್ದಾರೆ.

ಇನ್ನು ಡಿಸೆಂಬರ್ ತಿಂಗಳಲ್ಲಿ ತರಂ‌ ಎಂಟಟೈನ್‌ಮೆಂಟ್ ಮತ್ತು ಸಿಟಿಝನ್ ಲೈವ್.ನ್ಯೂಸ್ “ಫೇಸ್ ಆಫ್ ತರಂ-2” ಅಡಿಷನ್ ನಡೆಸಲಿದೆ.

Share.

Leave A Reply