ಕಾಸರಗೋಡು: ಅವ್ರೆಲ್ಲ ಸುಮಾರು 48 ದಿನಗಳ ವೃತಾಚರಣೆ ಮಾಡಿ ಅಯ್ಯಪ್ಪನ ಭಕ್ತಿಯಲ್ಲಿದ್ದರು. ಇನ್ನೇನು ಮಕರಜ್ಯೋತಿ ನೋಡಲು ಎರಡು ದಿನವಿರುವಾಗ ಇರುಮುಡಿ ಕಟ್ಟಿ ಅಯ್ಯಪ್ಪನ ನೋಡಲು ಕಾತರದಿಂದಿದ್ದರು. ಎರಡು ದಿನಗಳ ಮುನ್ನ ಇರುಮುಡಿ ಕಟ್ಟಿ ಅಯ್ಯಪ್ಪನ ನೋಡಲು ಮಂಗಳೂರಿನಿಂದ ಪ್ರಯಾಣ ಬೆಳೆಸಿದ್ರು.

ಸ್ವಾಮಿಗಳ ಅಂದ್ಮೇಲೆ ಶುದ್ಧ ಸಸ್ಯಹಾರ. ನಿಯಮಿತವಾದ ಆಹಾರವನ್ನ ಸೇವೆನೆ ಮಾಡುವಂತದ್ದು. ಹಾಗೆನೇ ಸ್ವಾಮಿಗಳು ಕಾಸರಗೋಡು ತಲುಪುತ್ತಿದ್ದಂತೆ ಭೋಜನಕ್ಕಾಗಿ ಹೋಟೆಲ್ ಒಂದರ ಬಳಿ ತಮ್ಮ ವಾಹನವನ್ನ ಪಾರ್ಕ್ ಮಾಡಿ ಊಟಕ್ಕೆ ತೆರಳಿದ್ದಾರೆ. ಅಷ್ಟೇ ಅಲ್ಲ ಆ ಹೋಟೆಲ್ ನ ಮಾಲೀಕ ಇಲ್ಲಿ ಬನ್ನಿ ಇದು ಶುದ್ಧ ಸಸ್ಯಹಾರಿ ಹೋಟೆಲ್ ಅಂತ ಹೇಳಿ ಕರೆಸಿಕೊಂಡಿದ್ದಾನೆ.

ಆದ್ರೆ ವೃತದಾರಿ ಸ್ವಾಮಿಗಳಿಗೆ ಮಾಂಸದ ಸಾಂಬಾರ್ ನೀಡಿ ವೃತಭಂಗ ಮಾಡಿದ್ದಲ್ಲದೆ, ಅಯ್ಯಪ್ಪನ ಸನ್ನಿಧಿ ತಲುಪದಂತೆ ಮಾಡಿದ್ದಾರೆ. ಹೌದು ಕಾಸರಗೋಡಿನ ಹಳ್ಳಿ ಮನೆ ಎಂಬ ಹೋಟೆಲ್ ನಲ್ಲಿ ಮಾಂಸದೂಟ ನೀಡಿ ಅಯ್ಯಪ್ಪ ಮಾಲಾಧಾರಿಗಳಿಗೆ ಅಪಮಾನ ಮಾಡಲಾಗಿದೆ. ಮುಸ್ಲಿಂ ಯುವಕನೊಬ್ಬನ ಹೋಟೆಲ್ ಆದ ಕಾರಣ ಸ್ವಲ್ಪ ಹೋಟೆಲ್ ನ ಪರಿಸರದಲ್ಲಿ ಉದ್ವಿಗ್ನ ವಾತಾವರಣವೂ ನಿರ್ಮಾಣವಾಗಿತ್ತು.

ಸ್ವಾಮಿಗಳು ಸಸ್ಯಹಾರಿ ಸೇವೆನೆ ಮಾಡೋದು ಎಲ್ಲರಿಗೂ ಗೊತ್ತಿರುವ ವಿಷಯ. ಇಷ್ಟೆಲ್ಲ ತಿಳಿದಿದ್ದರೂ ಆ ಹೋಟೆಲ್ ನವ್ರು ಮಾಂಸದ ಸಾಂಬಾರ್ ನೀಡಿ ವೃತಭಂಗ ಮಾಡಿದ್ದಾರೆ. ಅಯ್ಯಪ್ಪ ಮಾಲಾಧಾರಿಗಳಾಗಿದ್ದ ಕಾರಣ ಹೋಟೆಲ್ ನಲ್ಲಿ ಗಲಭೆ ಎಬ್ಬಿಸಲು ಸ್ವಾಮಿಗಳು ಮುಂದಾಗಿಲ್ಲ. ಹಾಗಾಗಿ ಹೋಟೆಲ್ ಮಾಲೀಕನಿಗೆ ಸ್ವಾಮಿಗಳು ನಿನ್ನನ್ನ ಆ ಅಯ್ಯಪ್ಪ ಸ್ವಾಮಿಯೇ ನೋಡಿಕೊಳ್ಳುತ್ತಾನೆ ಎಂದು ಶಾಪ ಹಾಕಿ ಹಿಂದಿರುಗಿದ್ದಾರೆ.