ಉಳ್ಳಾಲ: ಉಳ್ಳಾಲದ ಅಬ್ಬಕ್ಕ ಸರ್ಕಲ್‌ನಲ್ಲಿ ಲಿಟಲ್ ಹಾರ್ಟ್ ಕಿಂಡರ್ ಗಾರ್ಟನ್ ಸಂಸ್ಥೆಯ ಮಾಲಕಿ ಹಾಗೂ ಶಿಕ್ಷಕಿ ಹರಿಣಾಕ್ಷಿ (50) ಅವರ ಮೃತದೇಹ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಬೆಳಗ್ಗೆ ನಾಪತ್ತೆಯಾಗಿದ್ದ ಹರಿಣಾಕ್ಷಿ ಅವರನ್ನು ಇಬ್ಬರು ಪುತ್ರರು ಮನೆ ಸಮೀಪ ಹುಡುಕಾಡಿ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಳ್ಳಾಲ ಪೊಲೀಸರು ಹುಡುಕಾಟ ನಡೆಸಿದಾಗ ಮಧ್ಯಾಹ್ನ ವೇಳೆ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಬಳಿ ಚಪ್ಪಲಿಗಳು ಪತ್ತೆಯಾಗಿತ್ತು.

ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಈಜುಗಾರರ ಮೂಲಕ ಹುಡುಕಾಟ ನಡೆಸಲಾಯಿತು. ಅನಂತರ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅವರು ಕೆಲವು ದಿನಗಳಿಂದ ಖನ್ನತೆಗೆ ಒಳಗಾಗಿದ್ದರು. ಮನೆಯಲ್ಲೇ ನರ್ಸರಿ, ಯುಕೆಜಿ ಹಾಗೂ ಟ್ಯೂಷನ್ ತರಗತಿ ಹೊಂದಿದ್ದರು. ಮೃತರ ಪತಿ ಬಸವರಾಜ್ ಶಿವಮೊಗ್ಗದಲ್ಲಿ ನ್ಯಾಯವಾದಿಯಾಗಿದ್ದಾರೆ. ಕೊರೊನಾ ಲಾಕ್ ಡೌನ್ ಸಂದರ್ಭ ಅಸಹಾಯಕರಿಗೆ ಆಹಾರ ಕಿಟ್ ಒದಗಿಸಿದ್ದರು. ಸುಮಾರು 30 ಫೀಟ್ ಅಳದ ಬಾವಿಗೆ ಇಳಿದ ಮೊಗವೀರಪಟ್ಣ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಧನ್‌ರಾಜ್ ಪುತ್ರನ್, ಯೋಗೀಶ್ ಅಮೀನ್ ಮೃತದೇಹವನ್ನು ಮೇಲೆತ್ತಲು ಯಶಸ್ವಿಯಾದರು.
1 Comment
ليس العار في أن نسقط .. و لكن العار أن لا تستطيع النهوض