ಮಂಗಳೂರು: ನಗರದ ಕಾಟಿಪಳ್ಳ-ಗಣೇಶಪುರ ಸಮೀಪದ ಶಾಲೆಯೊಂದರಲ್ಲಿ ಮಕ್ಕಳ ಕೈಯಲ್ಲಿದ್ದ ರಕ್ಷಾ ಬಂಧನವನ್ನು ಕಿತ್ತು ಕಸದ ಬುಟ್ಟಿಗೆ ಎಸೆದ ಘಟನೆ ವರದಿಯಾಗಿದೆ.
“ರಕ್ಷೆ ಅಂದರೆ ಅದು devil’s tie (ದೆವ್ವದ ಹಗ್ಗ), ಅದನ್ನು ಕಟ್ಟಿಕೊಳ್ಳಬಾರದು” ಎಂದು ಮುಗ್ಧ ಮಕ್ಕಳನ್ನು ಬೆದರಿಸಿದ್ದ ಶಿಕ್ಷಕಿಯೋರ್ವರು ರಕ್ಷೆಯನ್ನು ಬಲವಂತವಾಗಿ ಕತ್ತರಿಸಿ ಬಿಸಾಕಲು ಹೇಳಿದ್ದರು. ಶಿಕ್ಷಕಿಯ ಮಾತಿಗೆ ಬೆದರಿದ ಮಕ್ಕಳು ಈ ಘಟನೆಯನ್ನು ಮನೆಯವರಿಗೆ ತಿಳಿಸಿದ್ದರು. ಪರಿಣಾಮ ಪೋಷಕರು ಶಿಕ್ಷಕಿಯ ವಿರುದ್ಧ ಸಿಡಿದೆದ್ದು ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡಿಸಿದ್ದರು.

ಸದ್ಯ ಶಾಲೆಯ ಮುಖ್ಯೋಪಾಧ್ಯಾಯಿನಿ ಇಂದು ಎಲ್ಲರ ಮುಂದೆ ಕೈ ಮುಗಿದು, “ನಮ್ಮಿಂದ ತಪ್ಪಾಗಿದೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ, ದಯವಿಟ್ಟು ಕ್ಷಮಿಸಿ” ಎಂದು ಕ್ಷಮೆಯಾಚಿಸಿದ್ದಾರೆ. ಮಾತ್ರವಲ್ಲ, ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥರು ಕೂಡ ಪೋಷಕರಲ್ಲಿ ಕ್ಷಮೆ ಕೇಳಿದ್ದು, ಪ್ರಕರಣ ಇತ್ಯರ್ಥಗೊಂಡಿದೆ.
ಇದೇ ಸಂದರ್ಭದಲ್ಲಿ ಪೋಷಕರಲ್ಲಿ ಒಬ್ಬರು ಸ್ವತಃ ಶಾಲೆಯ ಮುಖ್ಯಸ್ಥರಿಗೆ ರಕ್ಷೆಯನ್ನು ಕಟ್ಟಿದ್ದಾರೆ. ಜೊತೆಗೆ ರಕ್ಷೆಯ ಮಹತ್ವವನ್ನು ವಿವರಿಸುತ್ತಾ, “ರಕ್ಷೆ ಈ ದೇಶದ ಗೌರವದ ಸಂಕೇತ, ಕೆಲವು ಮನಸ್ಥಿತಿಯವರು ಇದರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ, ದಯವಿಟ್ಟು ಅವರ ಮಾತಿಗೆ ಬೆಲೆ ಕೊಡಬೇಡಿ” ಎಂದು ಮುಖ್ಯಸ್ಥರಿಗೆ ತಿಳಿಸಿದ್ದಾರೆ.
1 Comment
Levitra Generique Danger buy ivermectin for scabies Viagra Cialis Levitra Online