ಮಂಗಳೂರು: ಹಂಚು ಮತ್ತು ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತಿದ್ದ ಜಾರ್ಖಂಡ್ ಮೂಲದ ದಂಪತಿಗಳ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಹತ್ಯೆಗೈದು ಮೃತದೇಹವನ್ನು ಚರಂಡಿಗೆ ಎಸೆದಿರುವ ಅಮಾನುಷ ಘಟನೆಯೊಂದು ಮಂಗಳೂರು ನಗರದ ಹೊರವಲಯದ ಗುರುಪುರ ಉಳಾಯಿಬೆಟ್ಟು ಪರಾರಿ ಎಂಬಲ್ಲಿ ರವಿವಾರ ಸಂಜೆ ಬೆಳಕಿಗೆ ಬಂದಿದೆ.

ಪರಾರಿ ಎಂಬಲ್ಲಿ ರಾಜ್ ಟೈಲ್ಸ್ ಎಂಬ ಹೆಸರಿನ ಹೆಂಚಿನ ಕಾರ್ಖಾನೆ ಕಾರ್ಯಾಚರಿಸುತ್ತಿದ್ದು , ಇಲ್ಲಿ ರಾಜ್ಯ, ಹೊರರಾಜ್ಯದ ಪುರುಷ ಮತ್ತು ಮಹಿಳಾ ಕಾರ್ಮಿಕರೂ ದುಡಿಯುತ್ತಿದ್ದಾರೆ. ಈ ಪೈಕಿ ಜಾರ್ಖಂಡ್ ಮೂಲದ ಮಹಿಳೆಯೋರ್ವರ 8 ವರ್ಷದ ಹೆಣ್ಣು ಮಗು ರವಿವಾರ ಸಂಜೆಯಿಂದ ನಾಪತ್ತೆಯಾಗಿತ್ತು.
ಮಧ್ಯಾಹ್ನದ ವೇಳೆಗೆ ಮಗು ನಾಪತ್ತೆಯಾಗಿದ್ದು, ಕೆಲಸದಲ್ಲಿದ್ದ ತಂದೆ ತಾಯಿಗೆ ಸಂಜೆ ನಾಲ್ಕು ಗಂಟೆಯ ವೇಳೆ ಗಮನಕ್ಕೆ ಬಂದಿದೆ. ಬಾಲಕಿಯ ನಾಪತ್ತೆಯಿಂದ ಆತಂಕಕ್ಕೊಳಗಾದ ಪೋಷಕರು ಹಾಗೂ ಇತರ ಕಾರ್ಮಿಕರು ಕಾರ್ಖಾನೆ ಸೇರಿದಂತೆ ಹಲವೆಡೆಗಳಲ್ಲಿ ಶೋಧ ನಡೆಸಿದ್ದು, ಈ ವೇಳೆ ಕಾರ್ಖನೆಯ ಪಕ್ಕದ ಚರಂಡಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಬಾಲಕಿಯನ್ನು ಬದುಕಿಸುವ ಕೊನೆಯ ಪ್ರಯತ್ನ ಎಂಬಂತೆ ಎನ್ನುವ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ, ಬಾಲಕಿ ಅದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಇನ್ನೂ ಕಾರ್ಖಾನೆಯ ಕಾರ್ಮಿಕರೇ ಈ ಕೃತ್ಯ ನಡೆಸಿದ್ದಾರೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದರಿಂದಾಗಿ ಪೊಲೀಸರು ಶಂಕಿತರನ್ನು ವಶಕ್ಕೆ ಪಡೆದು, ತನಿಖೆಯನ್ನು ಬಿರುಸುಗೊಳಿಸಿದ್ದಾರೆ.
ಹೆಚ್ಚ್ಹಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
6 Comments
q3e064
Great write-up, I’m regular visitor of one’s site, maintain up the excellent operate, and It is going to be a regular visitor for a lengthy time.
There is noticeably a bundle to learn about this. I assume you made sure good points in features also.
I really like what you guys tend to be up too. Such clever work and exposure! Keep up the wonderful works guys I’ve added you guys to my own blogroll.
Normally I do not read post on blogs, but I would like to say that this write-up very pressured me to take a look at and do it! Your writing taste has been amazed me. Thank you, very nice article.
Some really wonderful blog posts on this site, thank you for contribution. “The key to everything is patience. You get the chicken by hatching the egg, not by smashing it.” by Arnold Glasgow.