ಮಂಗಳೂರು: ಕರಾವಳಿಯ ಯುವತಿಯರ ತಂಡವೊಂದು ಮಂಗಳೂರಿನಿಂದ ಎರಡು ಸಾವಿರ ಕಿಲೋಮೀಟರ್ ದೂರದಲ್ಲಿರುವ ರನ್ ಆಫ್ ಕಛ್‌ಗೆ ಹೊರಟು ನಿಂತಿದೆ.
ಹೌದು.. ಮಂಗಳೂರಿನ ಕೀರ್ತಿ ಉಚ್ಚಿಲ್, ಪೂಜಾ ಜೈನ್, ದಿವ್ಯಾ ಪೂಜಾರಿ, ಅಪೂರ್ವ ಮಂಗಳೂರಿನಿಂದ ರನ್ ಆಫ್ ಕಛ್‌ಗೆ ಬೈಕ್‌ನಲ್ಲಿ ಹೊರಟ ಯುವತಿಯರು. 2015ರಲ್ಲಿ ಆರಂಭವಾದ ಮಹಿಳಾ ಬೈಕರ್ಸ್‌ಗಳು ಮಾತ್ರ ಇರುವ ಮಂಗಳೂರು ಬೈಕರ್ನಿ ಗ್ರೂಪಿನ ಸದಸ್ಯರಾಗಿರುವ ಇವರು ಈಗ ಮಂಗಳೂರಿನಿಂದ ಗುಜರಾತ್‌ನ ರನ್ ಆಫ್ ಕಛ್‌ಗೆ ಹೊರಟಿದ್ದಾರೆ.

ಮಂಗಳೂರಿನ ಕೆಪಿಟಿಯಿಂದ ಹೊರಟ ಈ ಯುವತಿಯರು 11 ದಿನಗಳ ಕಾಲ ಬೈಕ್ ಯಾತ್ರೆ ಮಾಡಲಿದ್ದಾರೆ. ಸುಮಾರು ಎರಡು ಸಾವಿರ ಕಿಲೋಮೀಟರ್ ದೂರವನ್ನು ಈ ಯುವತಿಯರು ಬೈಕ್‌ನಲ್ಲಿ ಪ್ರಯಾಣಿಸಲಿದ್ದಾರೆ. ಈ ಯುವತಿಯರ ಪೈಕಿ ಕೀರ್ತಿ ಉಚ್ಚಿಲ್, ಪೂಜಾ ಜೈನ್, ದಿವ್ಯಾ ಪೂಜಾರಿ ಈ ಹಿಂದೆ ಕೂಡಾ ಕನ್ಯಾಕುಮಾರಿ, ರಾಮೇಶ್ವರ, ಊಟಿ, ಕೊಯಮತ್ತೂರು ಸೇರಿದಂತೆ ದಕ್ಷಿಣದ ಹಲವು ಭಾಗಗಳಿಗೆ ಭೇಟಿ ನೀಡಿದ್ದಾರೆ. ಕೇವಲ ಎರಡು ತಿಂಗಳ ಹಿಂದೆ ನೂತನ ಬೈಕ್ ಖರೀದಿಸಿರುವ ಅಪೂರ್ವ ಇದೇ ಮೊದಲ ಬಾರಿಗೆ ಲಾಂಗ್ ರೈಡ್ ಮಾಡಲಿದ್ದಾರೆ.
ಕೀರ್ತಿ ಉಚ್ಚಿಲ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಮಂಗಳೂರು ಬೈಕರ್ನಿ ಕ್ಲಬ್‌ನ ಸ್ಥಾಪಕರೂ ಆಗಿದ್ದಾರೆ. ಇನ್ನು ಪೂಜಾ ಜೈನ್ ಕರಾಟೆ ಪಟುವಾಗಿದ್ದು, ಮಂಗಳೂರಿನ ಸ್ವಂತ ಜವಳಿ ಮಳಿಗೆಯನ್ನು ಹೊಂದಿದ್ದಾರೆ. ದಿವ್ಯಾ ಪೂಜಾರಿ ಮೆಡಿಕಲ್ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದರೆ, ಅಪೂರ್ವ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಆರು ವರ್ಷದ ಮಗನನ್ನೂ ಹೊಂದಿದ್ದಾರೆ.
ಬೈಕ್‌ನಲ್ಲೇ ಸುತ್ತುವ ಆಸೆ ಬಗ್ಗೆ ಮಾತನಾಡಿದ ಮಂಗಳೂರು ಬೈಕರ್ನಿ ಗುಂಪಿನ ಸ್ಥಾಪಕಿ ಕೀರ್ತಿ, ಬೈಕ್‌ನಲ್ಲಿ ಹೋಗುವುದು ಅಂದ್ರೆ ಒಂದು ಸ್ವಾತಂತ್ರ್ಯ ಇದ್ದಂತೆ. ಬೈಕ್‌ನಲ್ಲಿ ಸಿಕ್ಕ ಖುಷಿ ಬೇರೆ ಯಾವುದರಲ್ಲೂ ನಮಗೆ ಸಿಕ್ಕಿರಲಿಲ್ಲ. ಪುರುಷರಂತೇ ಮಹಿಳೆಯರೂ ಎಲ್ಲಾ ಕ್ಷೇತ್ರದಲ್ಲಿ ಇದ್ದಾರೆ. ನಮ್ಮಲ್ಲಿ ಶಕ್ತಿ ಇದೆ. ಧೈರ್ಯನೂ ಇದೆ. ಹೀಗಾಗಿ ಬೈಕ್‌ನಲ್ಲಿ ಹೋಗುವುದಕ್ಕೆ ತೀರ್ಮಾನಿಸಿದೆವು ಎಂದು ಹೇಳುತ್ತಾರೆ.
ನಮ್ಮ ಗುಂಪಿನ ಎಲ್ಲರೂ ಉದ್ಯೋಗದಲ್ಲಿದ್ದಾರೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಹಿನ್ನಲೆಯಲ್ಲಿ ಎಲ್ಲರಿಗೆ ರಜೆ ಇದೆ. ದಕ್ಷಿಣದ ಹಲವು ಭಾಗಗಳಿಗೆ ಹೋದ ನಂತರ ಈಗ ಉತ್ತರ ಭಾರತದತ್ತ ಹೋಗಬೇಕು ಅಂತಾ ಯೋಚಿಸಿದೆವು. ಈಶಾನ್ಯ ರಾಜ್ಯಗಳಿಗೆ ಹೋಗಬೇಕು ಅಂತಾ ಆಸೆ ಇದ್ದರೂ, ತುಂಬಾ ದಿನ ಬೇಕಾಗಿರುವುದರಿಂದ ರಜೆಯ ಸಮಸ್ಯೆಯಾಗುತ್ತದೆ. ಹೀಗಾಗಿ ರನ್ ಆಫ್ ಕಛ್‌ಗೆ ಹೋಗುವ ಯೋಜನೆ ಮಾಡಿದೆವು. ಈಗ ರನ್ ಆಫ್ ಕಛ್‌ನಲ್ಲಿ ರನ್ ಉತ್ಸವ ನಡೆಯುತ್ತಿದೆ. ರನ್ ಆಫ್ ಕಛ್‌ನ್ನು ಬೈಕರ್ಸ್ ಪ್ಯಾರಡೈಸ್ ಅಂತಾನೂ ಕರೆಯುತ್ತಿದ್ದಾರೆ. ಹೀಗಾಗಿ ರನ್ ಅಫ್ ಕಛ್‌ಗೆ ಹೋಗುತ್ತಿದ್ದೇವೆ ಎಂದು ಕೀರ್ತಿ ಹೇಳಿದ್ದಾರೆ.
ಒಟ್ಟು ಹನ್ನೊಂದು ದಿನದ ಬೈಕ್ ರೈಡ್ ಇದಾಗಿದ್ದು, ಡಿ.29ರ ಬೆಳಗ್ಗೆ ರನ್ ಆಫ್ ಕಛ್‌ನ್ನು ತಲುಪಲಿದ್ದೇವೆ. ಡಿ.30ರ ಬೆಳಗ್ಗೆ ಮತ್ತೆ ಮಂಗಳೂರು ಕಡೆಗೆ ಪ್ರಯಾಣ ಬೆಳೆಸಲಿದ್ದೇವೆ. ದಿನಕ್ಕೆ 500- 600 ಕಿ.ಮೀ ಸಂಚಾರ ಮಾಡುವ ಗುರಿ ಹೊಂದಿದ್ದೇವೆ ಅಂತಾ ಕೀರ್ತಿ ತಮ್ಮ ಬೈಕ್ ಯಾತ್ರೆ ತಯಾರಿ ಬಗ್ಗೆ ಹೇಳಿದ್ದಾರೆ.
ಇನ್ನು ಮೊದಲ ಬಾರಿಗೆ ಲಾಂಗ್ ರೈಡ್ ಹೋಗುತ್ತಿರುವ ಬಗ್ಗೆ ಅಪೂರ್ವ ಮಾತನಾಡಿ, “”ಈ ರೈಡ್‌ಗಾಗಿ ಎರಡು ತಿಂಗಳ ಹಿಂದೆ ಬೈಕ್ ಖರಿದೀಸಿ ಬೈಕ್ ಅಭ್ಯಾಸ ಮಾಡಿದ್ದೇನೆ. ಉತ್ಸಾಹ ಮತ್ತು ನಂಬಿಕೆ ಇದೆ. ಅದರ ಜೊತೆಗೆ ದೂರ ಪ್ರಯಾಣದ ಭಯವೂ ಇದೆ. ಉತ್ತರದಲ್ಲಿ ಚಳಿ ವಿಪರೀತವಿರುವ ಬಗ್ಗೆ ಗೊತ್ತಾಗಿದೆ. ಹೀಗಾಗಿ ಎಲ್ಲಾ ಮುನ್ನಚ್ಚೆರಿಕಾ ಕ್ರಮ ವಹಿಸಿದ್ದೇವೆ. ಹುಡುಗಿಯರೂ ಲಾಂಗ್ ರೈಡ್ ಹೋಗಬಹುದು ಎನ್ನುವುದನ್ನು ಸಾಬೀತುಪಡಿಸುವ ವಿಶ್ವಾಸವಿದೆ.
ಈಗಾಗಲೇ ಡಿ.29ರ ರನ್ ಆಫ್ ಕಛ್‌ನ ಪ್ಯಾಕೇಜ್ ನಿಗದಿ ಮಾಡಿದ್ದೇವೆ. ನಮ್ಮ ಪ್ರತಿದಿನದ ನಿಗದಿಯ ಗುರಿ ತಲುಪಿದರೆ ಅಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ. ಮನೆಯವರಿಗೆ ನಾನು ಬೈಕ್‌ನಲ್ಲೂ ಹೋಗಬಲ್ಲೆ ಎಂಬುವುದನ್ನು ಸಾಧಿಸಿ ತೋರಿಸಬೇಕೆಂಬ ಆಸೆ ಇದೆ ಅಂತಾ ಅಪೂರ್ವ ಹೇಳಿದ್ದಾರೆ.
4 Comments
❤️ Rita is interested in your profile! Click Here: http://bit.do/fSYTr?h=1bfe1b27079878f2ef1fbd2d0f56fbb5- ❤️
Primestocks Ultra Review – Does It Really Works in 2022?
Indepth Look Inside Primestocks Ultra™ By A Real User. Bonus + Earlybird Discounted Price.
Check My Honest Primestocks Ultra Review From Real User & Get
$5000 Bonus, 90% Discount. Trusted By All. Without Any Budget.
Lifetime access & support. Where to get Prime stocks ultra cheap“>”>”>'”>
Tһanks for finally talking abοut > ಮಂಗಳೂರು: ರನ್
ಆಫ್ ಕಛ್‌ಗೆ ಕರಾವಳಿಯ ಯುವತಿಯರ ಬೈಕ್ ರೈಡ್ – CitizenLive News < Liked it!
Verу energetic article, I ⅼiked that a lot. Will thегe bе
a рart 2?