ಪುತ್ತೂರು: ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಬಪ್ಪಳಿಗೆಯ ಸಿಂಗಾಣಿ ಪರಿಸರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಂಗಾಣಿ ಪರಿಸರದ ಜನತೆ ಸಿಹಿತಿಂಡಿ ಹಂಚುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಂಡರು.

ಇನ್ನು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪುತ್ತೂರಿನ ಪೊಲೀಸ್ ಸಿಬ್ಬಂದಿ ಸ್ಕರಿಯ, ಇಂದು ಐತಿಹಾಸಿಕ ದಿನವಾಗಿದ್ದು, ಜಗತ್ತಿನಾದ್ಯಂತ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಇಡೀ ದೇಶ ಇಂದು ಹೊಸ ಸಂಕಲ್ಪ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬೀಟ್ ಪೊಲೀಸ್ ಭೀಮ್ ಸೇನ್, ಸಿಂಗಾಣಿ ಪರಿಸರಕ್ಕೆ ನಗರಸಭಾ ನೀರು ಸರಬರಾಜು ಮಾಡುವ ಸಿಬ್ಬಂದಿ ಗೋಪಾಲ ನೆಲ್ಲಿಗುಂಡಿ, ಸಿಂಗಾಣಿ ವಲಯದ ಲೈನ್ ಮ್ಯಾನ್ ಸತೀಶ್ ಹಾಗೂ ಸಿಂಗಾಣಿ ಪರಿಸರದ ಜನತೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೃಷ್ಣ ಪ್ರಸಾದ್ ಬಪ್ಪಳಿಗೆ ನಿರೂಪಿಸಿದರು.
4 Comments
Absolutely written content material, Really enjoyed looking through.
Nice post. I was checking continuously this weblog and I’m impressed! Very helpful information particularly the last part 🙂 I take care of such information much. I used to be seeking this certain information for a long time. Thank you and good luck.
I just could not depart your site prior to suggesting that I actually enjoyed the usual info an individual supply in your guests? Is gonna be back incessantly to check out new posts.
ಪುತ್ತೂರು: ಸಿಂಗಾಣಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ