ಸುರತ್ಕಲ್: ನಗರದ ಹೊರವಲಯದ ಸುರತ್ಕಲ್ ಪೇಟೆಯಲ್ಲಿ ʼಸಾವರ್ಕರ್ ವೃತ್ತʼ ಎಂಬ ಹೆಸರಿನ ಬ್ಯಾನರ್ ಪ್ರತ್ಯಕ್ಷವಾಗಿದು, ಸ್ಥಳಕ್ಕಾಗಮಿಸಿದ ಪೊಲೀಸರು ಅದನ್ನು ತೆರವುಗೊಳಿಸಿದ್ದಾರೆ.

ಸುರತ್ಕಲ್ ನಿಂದ ಕೃಷ್ಣಾಪುರ ಕಡೆ ತಿರುವು ಪಡೆಯುವ ಮೇಲ್ಸೇತುವೆಯ ಅಡಿಯಲ್ಲಿ ಸಾವರ್ಕರ್ ಭಾವಚಿತ್ರ ಹಾಗೂ ಸಾವರ್ಕರ್ ವೃತ್ತ ಎಂಬ ಬ್ಯಾನರ್ ಅಳವಡಿಸಲಾಗಿತ್ತು. ಬ್ಯಾನರ್ ಅಳವಡಿಸಿರುವ ಸ್ಥಳದಲ್ಲಿ ಪೊಲೀಸರು ಪ್ರತೀ ದಿನ ರಾತ್ರಿ ಹಗಲು ಗಸ್ತು ನಡೆಸುತ್ತಿದ್ದರು. ಅಲ್ಲದೆ, ಕೆಎಸ್ಸಾರ್ಪಿ ತುಕಡಿಯೊಂದನ್ನು ಇದೇ ಪ್ರದೇಶದಲ್ಲಿ ಇಡಲಾಗಿತ್ತು. ಇಷ್ಟೂ ಬಂದೋಬಸ್ತ್ ಮಾಡಿದ್ದರು ಹೇಗೆ ದುಷ್ಕರ್ಮಿಗಳು ಕೃತ್ಯ ಎಸಗಿದರು ಎಂದು ಜನರು ಪ್ರಶ್ನಿಸುತ್ತಿದ್ದರು.

1 Comment
I cling on to listening to the news update talk about getting boundless online grant applications so I have been looking around for the finest site to get one. Could you tell me please, where could i find some?