ಉಡುಪಿ: ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿದ ಕಾರಣ ಅವರನ್ನು ತರಗತಿಯಿಂದ ಹೊರ ಹಾಕಿ ಧಾರ್ಮಿಕ ತಾರತಮ್ಯ ಮೆರೆದ ಘಟನೆಯನ್ನು ಕ್ಯಾಂಪಸ್ ಫ್ರಂಟ್ ಖಂಡನೆ ಮಾಡಿದ್ದು ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದೆ.

ಭಾರತೀಯ ಸಂವಿಧಾನದ 25ನೇ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಮೂಲಭೂತ ಹಕ್ಕುಗಳಾಗಿ ಸೇರಿಸಿದೆ. ಇದರ ಪ್ರಕಾರ ಎಲ್ಲಾ ವ್ಯಕ್ತಿಗಳು ಮುಕ್ತವಾಗಿ ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ, ಪ್ರಚಾರ ಮಾಡುವ ಹಕ್ಕನ್ನು ಹೊಂದಿದ್ದಾರೆ ಇದಲ್ಲದೆ ಎಲ್ಲಾ ಪಂಗಡಗಳು ತಮ್ಮದೇ ಆದ ಧಾರ್ಮಿಕ ನಿರ್ವಹಣೆಯನ್ನು ಮಾಡಬಹುದಾಗಿದೆ ಎಂದು ಸಂವಿಧಾನದ ೨೬ನೇ ವಿಧಿಯು ಹೇಳುತ್ತದೆ. ಹೀಗಿರುವಾಗ ಹಿಜಾಬ್ ಧರಿಸಿದಾ ಕಾರಣಕ್ಕಾಗಿ ತರಗತಿಯಿಂದ ಬಹಿಷ್ಕರಿಸಿರುವುದು ಖಂಡನೀಯ ಎಂದು ಸಂಘಟನೆ ಹೇಳಿಕೊಂಡಿದೆ.

ಒಂದು ಮುಸ್ಲಿಂ ಮಹಿಳೆಗೆ ಹಿಜಾಬ್ ಧರಿಸುವುದು ಅವರ ಧಾರ್ಮಿಕ ನಂಬಿಕೆಗಳಲ್ಲಿ ಒಂದಾಗಿದೆ ಆದರೆ ಈ ಹಕ್ಕನ್ನು ಅವರಿಂದ ಕಸಿದುಕೊಳ್ಳಲಾಗುತ್ತಿದೆ. ಕಾಲೇಜಿನಲ್ಲಿ ಮುಸ್ಲಿಂ ಧರ್ಮವನ್ನು ಅಭ್ಯಸಿಸುವಾಗ ಅದನ್ನು ತಡೆಯಲಾಗತ್ತದೆ ಆದರೆ ಸಹೋದರ ಧರ್ಮದ ಪೂಜೆ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ತಡೆ ಇಲ್ಲದೆ ಅದನ್ನು ಶಿಕ್ಷಕರ ನೇತೃತ್ವದಲ್ಲಿ ಮಾಡಲಾಗುತ್ತದೆ. ಇಂತಹ ಧಾರ್ಮಿಕ ತಾರತಮ್ಯವು ನಡೆಯುತ್ತಿದೆ .ಬಹುಮುಖ್ಯವಾಗಿ ವಿದ್ಯಾರ್ಥಿನಿಯರು ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದರು ಆದರೆ ಇದೀಗ ಶಿಕ್ಷಕ ವೃಂದದ ಕೆಲವೊಬ್ಬರು ಹಿಜಾಬ್ ಧರಿಸಲು ತಡೆಯುತ್ತಿದ್ದಾರೆ ಹಾಗೂ ತರಗತಿಗೆ ಪ್ರವೇಶಿಸಲು ನಿರಾಕರಿಸುತ್ತಿದ್ದಾರೆ.

ಆ ವಿದ್ಯಾರ್ಥಿನಿಯರ ಪೋಷಕರು ಇದರ ಕುರಿತು ಮಾತನಾಡಲು ಹೋದಾಗ ಅಲ್ಲಿಯ ಪ್ರಾಂಶುಪಾಲರು ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ. ಹಾಗೂ ಕ್ಯಾಂಪಸ್ ಫ್ರಂಟ್ ನ ನಾಯಕರು ಹೋದಾಗ ಅವರಲ್ಲೂ ಚರ್ಚಿಸಲು ಪ್ರಾಂಶುಪಾಲರು ಬರಲಿಲ್ಲ ಎಂಬ ಆಕ್ರೋಷ ವ್ಯಕ್ತ ಪಡಿಸಿದ್ದಾರೆ.