ನವದೆಹಲಿ: ಪಾಕಿಸ್ತಾನದ ಜೈಲಿನಲ್ಲಿ ಬರೋಬ್ಬರಿ 18 ವರ್ಷಗಳ ಕಾಲ ಕಳೆದು ಕೆಲ ದಿನಗಳ ಹಿಂದಷ್ಟೇ ಭಾರತಕ್ಕೆ ಬಂದಿದ್ದ ಹಸೀನಾ ಬೇಗಂ ಎಂಬ ವೃದ್ಧೆ ಇದೀಗ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

18 ವರ್ಷಗಳ ಬಳಿಕ ಭಾರತಕ್ಕೆ ಬಂದ ಮಹಿಳೆ ತಮ್ಮ ಹುಟ್ಟೂರು ಔರಂಗಾಬಾದ್​​ಗೆ ವಾಪಸ್ಸಾಗುತ್ತಿದ್ದಂತೆಯೇ ನನಗೆ ಸ್ವರ್ಗಕ್ಕೆ ಬಂದಂತೆ ಭಾಸವಾಗುತ್ತಿದೆ ಎಂದು ಹೇಳಿಕೊಂಡಿದ್ದರು. ಆದರೆ ತಾಯ್ನಾಡಿಗೆ ಮರಳಿ ಕೆಲವೇ ವಾರಗಳ ಬಳಿಕ ಹಸೀನಾ ಬೇಗಂ ಹೃದಯಾಘಾತದಿಂದ ನಿಧನರಾಗಿದ್ದಾರೆ.

65 ವರ್ಷದ ಹಸೀನಾ 18 ವರ್ಷಗಳ ಹಿಂದೆ ತನ್ನ ಪತಿಯ ಕುಟುಂಬಸ್ಥರನ್ನ ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದ ಹಸೀನಾರನ್ನು ಪಾಸ್​ಪೋರ್ಟ್​ ಕಳೆದುಕೊಂಡ ಕಾರಣದಿಂದ ಪಾಕ್​ ಜೈಲಿಗೆ ಕಳಿಸಲಾಗಿತ್ತು. ಬರೋಬ್ಬರಿ 18 ವರ್ಷಗಳ ಕಾಲ ಪಾಕ್​ ಜೈಲಿನಲ್ಲಿದ್ದ ಹಸೀನಾ 2 ವಾರಗಳ ಹಿಂದಷ್ಟೇ ತಾಯ್ನಾಡಿಗೆ ಮರಳಿದ್ದರು. ಮಂಗಳವಾರ ಅವರು ಸಾವನ್ನಪಿದ್ದಾರೆ ಎಂದು ತಿಳಿದು ಬಂದಿದೆ.

 

Share.

1 Comment

  1. Because I lost a lot of hair after dyeing and scalding before, I bought bangs to try the effect. High cost performance, easy to wear, good hair quality, no color difference, and match your own hair color.

Leave A Reply