ನವದೆಹಲಿ: ಎರಡು ದಿನಗಳ ಶ್ರೀಲಂಕಾ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ತನ್ನ ವಾಯು ಪ್ರದೇಶ ಬಳಸಿಕೊಳ್ಳಲು ಭಾರತ ಒಪ್ಪಿಗೆ ನೀಡಿದೆ.

ಮಂಗಳವಾರ ಇಮ್ರಾನ್ ಖಾನ್ ಶ್ರೀಲಂಕಾಗೆ ಎರಡು ದಿನಗಳ ಪ್ರವಾಸದ ಸಲುವಾಗಿ ತೆರಳಲಿದ್ದು, ಭಾರತದ ವಾಯು ಪ್ರದೇಶ ಬಳಕೆ ಮಾಡಬೇಕಿದೆ. ಹೀಗಾಗಿ ಅನುಮತಿ ನೀಡಲಾಗಿದೆ. 2019ರ ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನಕ್ಕೆ ತನ್ನ ವಾಯುಪ್ರದೇಶ ಬಳಕೆಗೆ ಭಾರತ ನಿರ್ಬಂಧ ವಿಧಿಸಿತ್ತು.

ವಿವಿಐಪಿ ವಿಮಾನಗಳಿಗೆ ಸಾಮಾನ್ಯವಾಗಿ ಎಲ್ಲಾ ದೇಶಗಳೂ ಅನುಮತಿ ನೀಡುತ್ತವೆ. ಆದರೆ 2019ರಲ್ಲಿ ಪ್ರಧಾನಿ ಮೋದಿ ಅಮೆರಿಕ ಹಾಗೂ ಸೌದಿ ಅರೇಬಿಯಾ ಪ್ರವಾಸದ ಸಂದರ್ಭ ಭಾರತದ ವಿಮಾನ ಪಾಕಿಸ್ತಾನ ವಾಯುಪ್ರದೇಶವನ್ನು ಬಳಸಿಕೊಳ್ಳಲು ಪಾಕಿಸ್ತಾನ ಅನುಮತಿ ನಿರಾಕರಿಸಿದ್ದು ಅಸಹಜವೆನಿಸಿತ್ತು.

ಇದೇ ವೇಳೆ ಶ್ರೀಲಂಕಾ ಸಂಸತ್‌ನಲ್ಲಿ ನಿಗದಿಯಾಗಿದ್ದ ಇಮ್ರಾನ್ ಖಾನ್ ಭಾಷಣವನ್ನು ಶ್ರೀಲಂಕಾ ರದ್ದುಗೊಳಿಸಿದೆ. ಇಮ್ರಾನ್ ಭಾಷಣಕ್ಕೆ ಅವಕಾಶ ನೀಡುವುದು ಭಾರತದೊಂದಿಗೆ ವೈಮನಸ್ಸಿಗೆ ಕಾರಣವಾಗಬಹುದು ಎಂಬ ಉದ್ದೇಶದಿಂದ ಭಾಷಣ ರದ್ದುಗೊಳಿಸಿರುವುದಾಗಿ ತಿಳಿದುಬಂದಿದೆ.

Share.

2 Comments

  1. After receiving the goods, they have been sending news and harassment, letting praise. Sending, Taobao, SMS, everything comes every day, with this leisure time, it is better to take the time to improve the quality of the product itself!

Leave A Reply