ಚೆನ್ನೈ: ಸ್ಪೈಸ್ ಜೆಟ್ ವಿಮಾನ ಸಂಸ್ಥೆಯನ್ನು ಮುಚ್ಚುವಂತೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ಬಾಕಿ ಮೊತ್ತ ಪಾವತಿಸುವಂತೆ ಕೋರಿ ಷೇರು ಸಂಸ್ಥೆ ಕ್ರೆಡಿಟ್ ಸ್ಯೂಸೆ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಕೋರ್ಟ್ ಆದೇಶ ನೀಡಿದೆ.

ಆದರೆ, ದಿವಾಳಿ ಹಂತ ತಲುಪಿರುವ ವಿಮಾನಯಾನ ಸಂಸ್ಥೆ, ಮೂರುವಾರಗಳ ಕಾಲಾವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮದ್ರಾಸ್ ಹೈಕೋರ್ಟ್ ಮೂರುವಾರಗಳ ತಡೆಯಾಜ್ಞೆ ಸಿಕ್ಕಿದೆ ಎಂದು ಸ್ಪೈಸ್‌ಜೆಟ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ ರಾಮಕೃಷ್ಣನ್ ಹೇಳಿದ್ದಾರೆ.
ಸೋಮವಾರದಿಂದ ಎರಡು ವಾರಗಳ ಅವಧಿಯಲ್ಲಿ 5 ಮಿಲಿಯನ್ ಡಾಲರ್ ಠೇವಣಿ ಇಡುವಂತೆ ಸ್ಪೈಸ್‌ಜೆಟ್‌ಗೆ ಷರತ್ತು ವಿಧಿಸಿ ನ್ಯಾಯಮೂರ್ತಿ ಆರ್ ಸುಬ್ರಮಣಿಯನ್ ಅವರು ತಡೆಯಾಜ್ಞೆ ನೀಡಿದರು.
ಸ್ಪೈಸ್‌ಜೆಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಆಸ್ತಿ ವಶಕ್ಕೆ ಪಡೆಯಬೇಕು, ಸಂಸ್ಥೆ ಅಧಿಕೃತವಾಗಿ ದಿವಾಳಿ ಎಂದು ಘೋಷಿಸಬೇಕು ಎಂದು ಷೇರು ಸಂಸ್ಥೆ ಮನವಿ ಸಲ್ಲಿಸಿತ್ತು. ಇದೀಗ ಮೂರುವಾರಗಳ ಬಳಿಕ ವಿಮಾನಯಾನ ಸಂಸ್ಥೆಯನ್ನು ಸಂಪೂರ್ಣವಾಗಿ ಜಪ್ತಿ ಮಾಡಿ, ಸ್ವಿಸ್ ಕಂಪನಿಗೆ ಬಾಕಿಮೊತ್ತ ಪಾವತಿಸಲಾಗುತ್ತದೆ. ಸ್ವಿಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ಸ್ಪೈಸ್ ಜೆಟ್ ಸುಮಾರು 24.01 ಮಿಲಿಯನ್ ಯುಎಸ್ ಡಾಲರ್ ಮೊತ್ತ ಬಾಕಿ ಉಳಿಸಿಕೊಂಡಿದೆ.
1 Comment
קמגרה תשדרג לכם את חיי המין ותאפשר לכם הנאה מרבית מהאקט. לטבע פלז’ר שלל פתרונות טבעיים נוספים שישדרגו לכם את חדר המיטות. נערות ליווי חזה ענק