ಚೆನ್ನೈ: ಪ್ರೇಮ ಸನ್ನಿವೇಶದ ಖಾಸಗಿ ಫೋಟೋಗಳನ್ನು ತೋರಿಸಿ ತಮ್ಮನ್ನು ಬ್ಲಾಕ್ಮೇಲ್ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚಿಗೆ ತಿರುವಳ್ಳೂರ್ ಜಿಲ್ಲೆಯ ಈಚಿಂಗಾಡು ಗ್ರಾಮದಲ್ಲಿ ವ್ಯಕ್ತಿಯೊಬ್ಬನ ರಕ್ತಸಿಕ್ತ ಹಲ್ಲು ಮತ್ತು ಕೂದಲು ಇರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಪೊಲೀಸರು ತನಿಖೆ ನಡೆಸಿದಾಗ, ಒಂದು ಜಾಗದಲ್ಲಿ ಶವ ಹೂತಿಟ್ಟಿರುವುದು ಪತ್ತೆಯಾಗಿದೆ. ಜೊತೆಗೆ ಕೊಲೆಯಾದವನ ಮೊಬೈಲ್ ಕೂಡ ಪೊಲೀಸರಿಗೆ ಸಿಕ್ಕಿದೆ. ಪರಿಶೀಲಿಸಿದಾಗ ಸತ್ತ ಯುವಕ ಪ್ರೇಮ್ ಕುಮಾರ್ ಎಂದು ತಿಳಿದು ಬಂದಿತ್ತು.
ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ, ಆತ ಇಬ್ಬರು ಬಾಲಕಿಯರೊಂದಿಗೆ ಪರಸ್ಪರ ತಿಳಿಯದಂತೆ ಸಂಬಂಧ ಹೊಂದಿದ್ದ. ಬಾಲಕಿಯರ ಜೊತೆ ಆಕ್ಷೇಪಾರ್ಹ ಫೋಟೋಗಳನ್ನು ತೆಗೆದುಕೊಂಡು, ಅವರನ್ನು ಬ್ಲಾಕ್ಮೇಲ್ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ಕೊಡದಿದ್ದರೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸುತ್ತಿದ್ದ. ಇಬ್ಬರಿಂದಲೂ 50 ಸಾವಿರ ರೂ. ಸುಲಿಗೆ ಮಾಡಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
ಆತ ಬೇಡಿಕೆಯಿಟ್ಟಿದ್ದ ಹಣವನ್ನು ಒದಗಿಸಲು ವಿದ್ಯಾರ್ಥಿನಿಯರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಮತ್ತೊಬ್ಬ ಯುವಕ ಅಶೋಕ ಎಂಬವನಿಗೆ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಅಶೋಕ್ ನೀಡಿದ ಸಲಹೆ ಮೇರೆಗೆ ಆ ಯುವಕನಿಗೆ ಕರೆ ಮಾಡಿ ಶೋಲವರಮ್ ಟೋಲ್ ಪ್ಲಾಜಾ ಬಳಿಗೆ ಬಾಲಕಿಯರು ಕರೆಸಿಕೊಂಡಿದ್ದಾರೆ.
ತದನಂತರ ಆತನನ್ನು ಅಪಹರಿಸಿ ಮೊಬೈಲ್ನಲ್ಲಿರುವ ಫೋಟೋಗಳನ್ನು ಡಿಲೀಟ್ ಮಾಡುವಂತೆ ಬಾಲಕಿಯರು ಕೇಳಿದ್ದಾರೆ. ನಂತರ ಅಶೋಕ್ ಮತ್ತು ಆತನ ಸ್ನೇಹಿತರು, ಈತನನ್ನು ಸಮೀಪದ ಈಚಂಗಾಡು ಗ್ರಾಮಕ್ಕೆ ಕರೆದೊಯ್ದು ಕೊಲೆ ಮಾಡಿ, ಹೂತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
3 Comments
My husband and i ended up being now delighted when Ervin could conclude his basic research with the precious recommendations he acquired out of your site. It’s not at all simplistic to simply always be giving out instructions that many most people may have been selling. And we take into account we need the writer to appreciate for this. The type of illustrations you have made, the straightforward web site navigation, the friendships you will aid to foster – it’s got most remarkable, and it’s really leading our son in addition to us recognize that this concept is exciting, which is certainly wonderfully pressing. Many thanks for the whole lot!
Nearly all of what you state happens to be supprisingly precise and that makes me ponder why I had not looked at this with this light before. Your article really did turn the light on for me as far as this issue goes. Nevertheless at this time there is actually 1 point I am not too comfortable with so while I try to reconcile that with the actual core idea of your point, allow me observe just what the rest of your readers have to say.Nicely done.
it is a cool statement