• ಮುಖಪುಟ
  • ಕರಾವಳಿ
    • ದಕ್ಷಿಣ ಕನ್ನಡ
    • ಉಡುಪಿ
    • ಕಾಸರಗೋಡು
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    • ಆರೋಗ್ಯ
    • ಪಾಕ ಶಾಲೆ
    • ಕಲಾಭೂಮಿಕೆ
    • ವಿಶೇಷ ಅಂಕಣ
    • ಸ್ಟೂಡೆಂಟ್ಸ್ ಗ್ಯಾಲರಿ
    • ತುಳು ಚಾವಡಿ
  • ಗ್ಯಾಲರಿ
Facebook Twitter Instagram
  • Advertising
  • Careers
  • Contact Us
Facebook Twitter LinkedIn Pinterest RSS
CitizenLive News
  • ಮುಖಪುಟ
  • ಕರಾವಳಿ
    1. ದಕ್ಷಿಣ ಕನ್ನಡ
    2. ಉಡುಪಿ
    3. ಕಾಸರಗೋಡು
    Featured

    ಕರಾವಳಿಯಲ್ಲಿ ಇಂದು ಮತ್ತೆ ಕೊರೋನಾ ಮಹಾ ಸ್ಪೋಟ

    By newscordinator newscordinator31/05/2020 : 7:35 PM11937
    Recent

    ಪುತ್ತೂರು: ಸಿಂಗಾಣಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

    15/08/2022 : 11:10 AM

    ಮಂಗಳೂರಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ

    15/08/2022 : 10:19 AM

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಾಟಿಂಗ್ ಮಾಡುತ್ತಿದ್ದ ಯುವಕ – ಯುವತಿಯ ತೀವ್ರ ತಪಾಸಣೆ

    14/08/2022 : 7:01 PM
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಸಿನಿಮಾ
  • ಕ್ರೈಂ – ಬುಕ್
  • ಸಿ – ಸ್ಪೆಶಲ್
    1. ಆರೋಗ್ಯ
    2. ಪಾಕ ಶಾಲೆ
    3. ಕಲಾಭೂಮಿಕೆ
    4. ವಿಶೇಷ ಅಂಕಣ
    5. ಸ್ಟೂಡೆಂಟ್ಸ್ ಗ್ಯಾಲರಿ
    6. ತುಳು ಚಾವಡಿ
    Featured

    186 ವರ್ಷದ ಬಳಿಕ ಅಂತ್ಯಕ್ರಿಯೆ ನಡೆಸಲ್ಪಟ್ಟ ಮಹಿಳೆ

    By News Editor29/05/2020 : 1:09 AM8495
    Recent

    ಆ ಸಂಭ್ರಮದ ದಿನಗಳು ಇನ್ನೆಲ್ಲಿ…

    23/09/2022 : 10:11 PM

    ಅಖಂಡವಾಗಿದ್ದ ಈ ರಾಷ್ಟ್ರ ತ್ರಿಖಂಡವಾದದ್ದು ಹೇಗೆ..?

    14/08/2022 : 10:08 AM

    ಕೃಷ್ಣನ ಆಶಯದಂತೆ ಭಾರತ ಉತ್ತುಂಗಕ್ಕೆ ಏರಲಿ.. ಅಖಂಡ ಭಾರತದ ಕನಸು ನನಸಾಗಲಿ

    14/08/2022 : 9:33 AM
  • ಗ್ಯಾಲರಿ
CitizenLive News
Home » ರಾಷ್ಟ್ರೀಯ » ನಮ್ಮ ಎಲ್ಲ ಚಿಂತನೆ, ನಡವಳಿಕೆಯಲ್ಲಿ ಭಾರತವೇ ಮೊದಲು ಎನ್ನುವ ಆಲೋಚನೆ ಬರಬೇಕು – ನಮೋ
ರಾಷ್ಟ್ರೀಯ

ನಮ್ಮ ಎಲ್ಲ ಚಿಂತನೆ, ನಡವಳಿಕೆಯಲ್ಲಿ ಭಾರತವೇ ಮೊದಲು ಎನ್ನುವ ಆಲೋಚನೆ ಬರಬೇಕು – ನಮೋ

News EditorBy News Editor15/08/2022 : 10:33 AMUpdated:15/08/2022 : 10:33 AM3 Comments2 Mins Read

ನವದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಇಂದು (ಆಗಸ್ಟ್ 15) ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ.

ಸಂವಿಧಾನ ನಿರ್ಮಾರ್ತೃಗಳನ್ನು ನಾನು ಗೌರವಿಸುತ್ತೇನೆ. ಕಾಲಘಟ್ಟ ಬೇರೆ ಇದ್ದರೂ ನಮ್ಮ ಆಶಯಗಳು ಪ್ರತ್ಯೇಕ ಅಲ್ಲ. ಭಾರತದ ಅಭಿವೃದ್ಧಿ ಎನ್ನುವುದು ನಾವು ಎಲ್ಲಿಯೇ ಇದ್ದರೂ ಗಮನದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ದೇಶದ ಹಲವು ರಾಜ್ಯಗಳು ಒಕ್ಕೂಟ ವ್ಯವಸ್ಥೆಯ ಬಲ ಹೆಚ್ಚಿಸಿವೆ. ನಾವು ಸಹಕಾರದ ಒಕ್ಕೂಟ ವ್ಯವಸ್ಥೆಯ ಜೊತೆಗೆ ನಮ್ಮ ರಾಜ್ಯಗಳಲ್ಲಿ ಆರೋಗ್ಯಕರ ಸ್ಪರ್ಧೆಯೂ ಇರಬೇಕು. ನಮ್ಮ ರಾಜ್ಯಗಳ ನಡುವೆ, ಸರ್ಕಾರಿ ಸೇವೆಗಳ ವಿಚಾರದಲ್ಲಿ ಸ್ಪರ್ಧೆಯ ವಾತಾವರಣ ಇರಬೇಕು ಎಂದಿದ್ದಾರೆ.

ಭಾರತವು 75 ವರ್ಷಗಳಲ್ಲಿ ಭಾರತದ ಸಾಧನೆಯಲ್ಲಿ ಮಹಿಳೆಯರ ಕೊಡುಗೆ ದೊಡ್ಡದು. ಈ ಅಮೃತ ಕಾಲದಲ್ಲಿ ನಮ್ಮ ಮಹಿಳಾ ಶಕ್ತಿಯನ್ನು ದೊಡ್ಡಮಟ್ಟದಲ್ಲಿ ಜೋಡಿಸಿಕೊಂಡರೆ ನಮ್ಮ ಕನಸು ಇನ್ನಷ್ಟು ದೊಡ್ಡದಾಗುತ್ತದೆ. ಬಹಳ ಬೇಗ ನಾವು ಗುರಿ ಮುಟ್ಟುತ್ತೇವೆ ಎಂದು ತಿಳಿಸಿದರು.

ಇಂದು ಮಹರ್ಷಿ ಅರವಿಂದರ ಜನ್ಮದಿನವೂ ಹೌದು. ‘ಸ್ವದೇಶಿಯಿಂದ ಸ್ವರಾಜ್ಯ, ಸ್ವರಾಜ್ಯದಿಂದ ಸುರಾಜ್ಯ’ ಎನ್ನುವುದು ಅವರು ಕೊಟ್ಟ ಮಂತ್ರ. ನಾವು ಸ್ವಾವಲಂಬಿಗಳಾಗಬೇಕು. ದೇಶಕ್ಕೆ ಅನ್ನದ ಅಗತ್ಯವಿದ್ದಾಗ ನಾವು ಬೇರೆ ಕಡೆಯಿಂದ ತರಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಆತ್ಮನಿರ್ಭರ್ ಭಾರತ್ ಎನ್ನುವುದು ಎಲ್ಲ ನಾಗರಿಕರು, ಎಲ್ಲ ಸರ್ಕಾರಗಳ ಜವಾಬ್ದಾರಿ ಆಗಬೇಕು. ಆತ್ಮನಿರ್ಭರ್ ಭಾರತ್ ಸರ್ಕಾರಿ ಕಾರ್ಯಕ್ರಮ ಅಲ್ಲ. ಇದು ಸಮಾಜದ ಜನಾಂದೋಲನ. 75 ವರ್ಷಗಳ ನಂತರ ಕೆಂಪುಕೋಟೆಯಲ್ಲಿ ಭಾರತದಲ್ಲಿ ತಯಾರಾದ ತೋಪುಗಳಿಂದ ಗೌರವ ಸಲ್ಲಿಕೆಯಾಗುತ್ತಿದೆ ಎಂದಿದ್ದಾರೆ.

ನಮ್ಮ ಎಲ್ಲ ಚಿಂತನೆ, ನಡವಳಿಕೆಯಲ್ಲಿ ಭಾರತವೇ ಮೊದಲು ಎನ್ನುವ ಆಲೋಚನೆ ಬರಬೇಕು. ಎಷ್ಟೆಲ್ಲಾ ವೈವಿಧ್ಯತೆಯಿದ್ದರೂ ದೇಶದ ಪ್ರಗತಿಗ ಒಗ್ಗಟ್ಟು ಅತ್ಯಂತ ಅಗತ್ಯ. ಯಾವುದೇ ಕಾರಣದಿಂದ ನಮ್ಮಲ್ಲಿ ವಿಕೃತಿ ಬಂದಿದ್ದರೂ ಅದನ್ನು ಬಿಡಬೇಕು. ಹೆಣ್ಣುಮಕ್ಕಳನ್ನು ಗೌರವಿಸಬೇಕು. ನಾವು ಸ್ವಭಾವದಿಂದ, ಸಂಸ್ಕಾರದಿಂದ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು ಎಂದು ಅವರು ಹೇಳಿದರು.

ಭಾರತದಲ್ಲಿ ಕುಟುಂಬ ರಾಜಕಾರಣದಿಂದ ನಮ್ಮ ದೇಶದ ಪ್ರತಿಭೆ, ಸಾಮರ್ಥ್ಯ ಹಾಳಾಗುತ್ತಿದೆ. ಭ್ರಷ್ಟಾಚಾರಕ್ಕೆ ಇದೂ ಒಂದು ಕಾರಣವಾಗುತ್ತಿದೆ. ಪರಿವಾರವಾದದಿಂದಲೂ ನಾವು ಬಿಡಿಸಿಕೊಳ್ಳಬೇಕು. ನಾವು ನಮ್ಮ ಸಂಸ್ಥೆಗಳನ್ನು ಉಳಿಸಿಕೊಳ್ಳಬೇಕು. ರಾಜಕಾರಣದಲ್ಲಿಯೂ ಪರಿವಾರವಾದವು ಪರಿವಾರ ಭದ್ರಪಡಿಸಿಕೊಳ್ಳಲು ಯತ್ನಿಸುತ್ತದೆಯೇ ಹೊರತು ದೇಶದ ಅಭಿವೃದ್ಧಿಗೆ ಗಮನ ಕೊಡುವುದಿಲ್ಲ. ಬನ್ನಿ, ಭಾರತದ ರಾಜಕಾರಣವನ್ನು ಶುದ್ಧೀಕರಣಗೊಳಿಸಲು ನಾವು ದೇಶದ ಪರಿವಾರವಾದವನ್ನು ಕೊನೆಗಾಣಿಸೋಣ. ಇದು ಇಂದಿನ ಅನಿವಾರ್ಯತೆ ಎಂದು ಮೋದಿ ಹೇಳಿದ್ದಾರೆ.

ಸಮಾಜದಲ್ಲಿ ಎಲ್ಲಿಯವರೆಗೆ ಭ್ರಷ್ಟಾಚಾರದ ಬಗ್ಗೆ ಅಸಹ್ಯದ ಭಾವನೆ ಬರಬೇಕು. ಸಮಾಜದಲ್ಲಿ ಭ್ರಷ್ಟಾಚಾರಿಗಳಿಗೆ ಗೌರವ ಇಲ್ಲದ ವಾತಾವರಣ ಮೂಡಬೇಕು. ಭ್ರಷ್ಟಾಚಾರದ ಬಗ್ಗೆ ಜಾಗ್ರತೆ ಬರಬೇಕು ಎಂದು ತಿಳಿಸಿದ್ದಾರೆ.

Share. Facebook Twitter Pinterest LinkedIn Tumblr Email
Previous Articleಮಂಗಳೂರಲ್ಲೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ; ದ.ಕ. ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ
Next Article ಅನಾಮಧೇಯ ಹೋರಾಟಗಾರರಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಮರ್ಪಿಸುತ್ತಿದ್ದೇನೆ – ಬೊಮ್ಮಾಯಿ

Related Posts

ಇಂಡೋ-ಪಾಕ್ ಪ್ರೇಮ ಕಥೆ – ಪೋಲೀಸರ ಬಲೆಗೆ ಬಿದ್ದ ಇಕ್ರಾ-ಯಾದವ್ ಜೋಡಿ!

24/01/2023 : 1:32 PM

‘ಗೌಜಿ ಗಮ್ಮತ್‌’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ – ಶೀಘ್ರದಲ್ಲೇ ಸಿನಿಮಾ ಬೆಳ್ಳಿತೆರೆಗೆ!

19/01/2023 : 10:54 PM

ಆ ಸಂಭ್ರಮದ ದಿನಗಳು ಇನ್ನೆಲ್ಲಿ…

23/09/2022 : 10:11 PM

3 Comments

  1. zorivare worilon on 19/08/2022 : 4:59 PM 4:59 PM

    I’ve been absent for some time, but now I remember why I used to love this site. Thanks , I’ll try and check back more often. How frequently you update your web site?

  2. this article on 27/08/2022 : 2:59 PM 2:59 PM

    Some truly fantastic posts on this internet site, thank you for contribution. “Careful. We don’t want to learn from this.” by Bill Watterson.

  3. my blog on 27/08/2022 : 4:33 PM 4:33 PM

    Good – I should definitely pronounce, impressed with your site. I had no trouble navigating through all tabs and related info ended up being truly easy to do to access. I recently found what I hoped for before you know it in the least. Reasonably unusual. Is likely to appreciate it for those who add forums or anything, site theme . a tones way for your client to communicate. Excellent task.

Copyright © 2019 CitizenLive News | Designed by:
  • About
  • Privacy
  • Contact

Type above and press Enter to search. Press Esc to cancel.