ನವದೆಹಲಿ: ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರ ಪ್ರಕರಣ ಹಾಗೂ ಕೆಂಪುಕೋಟೆ ಮೇಲೆ ಧ್ವಜ ಹಾರಿಸಲು ಪ್ರೇರಣೆ ನೀಡಿದ ಪ್ರಕರಣ ಸಂಬಂಧ ಪಂಜಾಬಿ ನಟ ದೀಪ್ ಸಿಧುರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಜನವರಿ 26ರಂದು ರೈತರು ದೆಹಲಿಯಲ್ಲಿ ನಡೆಸಿದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತ್ತು. ಅಲ್ಲದೇ ಕೆಂಪುಕೋಟೆಯ ಮೇಲೆ ಧಾರ್ಮಿಕ ಧ್ವಜ ಹಾರಿಸುವ ಮೂಲಕ ದೀಪ್ ಸಿಧು ವಿವಾದಕ್ಕೆ ಕಾರಣರಾಗಿದ್ದರು. ರೈತರಿಗೆ ಬೆಂಬಲ ನೀಡುವ ಹೆಸರಲ್ಲಿ ಹಿಂಸಾಚಾರಕ್ಕೆ ಪ್ರೇರಣೆ ನೀಡಿದ್ದಾರೆ ಎಂದು ರೈತ ಮುಖಂಡರೇ ದೀಪ್ ಸಿಧು ವಿರುದ್ಧ ತಿರುಗಿಬಿದ್ದಿದ್ದರು. ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ದೀಪ್ ಸಿಧು ಕಳೆದ 14 ದಿನಗಳಿಂದ ತಲೆಮರೆಸಿಕೊಂಡಿದ್ದರು.

ಇದರ ಬೆನ್ನಲ್ಲೇ ದೆಹಲಿ ಪೊಲೀಸರು ದೀಪ್ ಸಿಧು ಬಗ್ಗೆ ಮಾಹಿತಿ ನೀಡಿದರೆ 1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಈ ನಡುವೆ ಸಿಧು ತನ್ನ ಗೆಳತಿಯ ಫೋನ್ ಬಳಕೆ ಮಾಡಿದ್ದು, ಇದರ ಆಧಾರದ ಮೇಲೆ ಇದೀಗ ದೆಹಲಿ ಪೊಲೀಸರು ದೀಪ್ ಸಿಧುರನ್ನು ಬಂಧಿಸಿದ್ದಾರೆ.

 

Share.

Leave A Reply