ಬೆಂಗಳೂರು: ಯುವ ಕಾಂಗ್ರೆಸ್‍ನ ಅಧ್ಯಕ್ಷ ಸ್ಥಾನದ ಕುರಿತಂತೆ ಉಂಟಾಗಿರುವ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯಲು ಇಂದು ಮತ್ತು ನಾಳೆ ನವದೆಹಲಿಯಲ್ಲಿ ಮಹತ್ವದ ಸಭೆಗಳು ನಡೆಯಲಿವೆ. ಮೊಹಮ್ಮದ್ ಹ್ಯಾರಿಸ್, ರಕ್ಷಾ ರಾಮಯ್ಯ ಸೇರಿದಂತೆ 8 ಮಂದಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು.ಮೊಹಮ್ಮದ್ ನಲ್ಪಾಡ್ ಹ್ಯಾರಿಸ್ 64 ಸಾವಿರ ಮತಗಳನ್ನು ಪಡೆದು ಮುಂಚೂಣಿಯಲ್ಲಿದ್ದರು. ಆದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣವಿದೆ ಎಂಬ ಕಾರಣಕ್ಕಾಗಿ ಅವರ ಸ್ಪರ್ಧೆಯನ್ನು ಅನರ್ಹಗೊಳಿಸಲಾಗಿದೆ.

ಇದನ್ನು ಪ್ರಶ್ನೆ ಮಾಡಿ ಮೊಹಮ್ಮದ್ ನಲ್ಪಾಡ್ ಹ್ಯಾರಿಸ್ ಹೈಕಮಾಂಡ್‍ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ನಡುವೆ ರಕ್ಷಾ ರಾಮಯ್ಯ ಅವರ ಆಯ್ಕೆಯನ್ನು ಬದಲಾವಣೆ ಮಾಡಿ ನಲ್ಪಾಡ್ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ವದಂತಿಗಳು ಹರಡಿದ್ದವು.ಆದರೆ ಯೂತ್ ಕಾಂಗ್ರೆಸ್‍ನ ರಾಜ್ಯ ಉಸ್ತುವಾರಿ ನಾಯಕರು ಇದನ್ನು ತಳ್ಳಿ ಹಾಕಿದ್ದು , ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೂ ರಾಜ್ಯದ ಕೆಲವು ನಾಯಕರ ಒತ್ತಡದ ಮೇರೆಗೆ ಇಂದು ಮತ್ತು ನಾಳೆ ದೆಹಲಿಯಲ್ಲಿ ಸಮಾಲೋಚನೆಯನ್ನು ನಡೆಸಲಾಗುತ್ತಿದೆ. ಭವ್ಯ, ಎಂ.ಎಸ್.ರಕ್ಷಾ ರಾಮಯ್ಯ, ಎಚ್.ಎಸ್.ಮಂಜುನಾಥ್, ಮೊಹಮ್ಮದ್ ಹ್ಯಾರಿಸ್ ನಲ್ಪಾಡ್ , ಸಂದೀಪ್ ನಾಯಕ್ , ಸೈಯದ್ ಅಹಮದ್, ಮಿಥುನ್ ರೈ ಅವರುಗಳನ್ನು ದೆಹಲಿಗೆ ಆಹ್ವಾನಿಸಲಾಗಿದೆ.

7 ಮಂದಿ ಸಮ್ಮುಖದಲ್ಲಿ ಮತ್ತೊಮ್ಮೆ ಸಮಾಲೋಚನೆ ನಡೆಯುತ್ತಿದ್ದು, ಅಂತಿಮವಾಗಿ ಹೆಚ್ಚು ಮತ ಪಡೆದವರನ್ನು ವಿಜೇತರನ್ನಾಗಿ ಮಾಡಲಾಗುತ್ತದೆಯೋ ಅಥವಾ ರಕ್ಷಾ ರಾಮಯ್ಯ ಅವರನ್ನೇ ಮುಂದುವರೆಸಬೇಕು ಎಂಬ ನಿರ್ಧಾರ ಹೊರ ಬೀಳಲಿದೆ. ಕಳೆದ ಒಂದು ತಿಂಗಳಿನಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಚರ್ಚೆಗಳು , ಗೊಂದಲಗಳು ಏರ್ಪಟ್ಟಿವೆ.

ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ದರ ಹೆಚ್ಚಳ, ಕೋಮು ಸಾಮರಸ್ಯ ಕದಡುವ ದುರ್ಘಟನೆಗಳು, ಆಸ್ತಿ ತೆರಿಗೆ ಹೆಚ್ಚಳ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಕಣ್ಣೆದುರಿಗೇ ಇದ್ದರೂ ಯುವ ಕಾಂಗ್ರೆಸ್ ಕೈ ಕಟ್ಟಿ ಕೂರುವಂತಾಯಿತು. ಸರಿಯಾದ ದಂಡ ನಾಯಕನಿಲ್ಲದೆ ಪ್ರತಿಭಟನೆಗಳು ನಡೆಯುತ್ತಿಲ್ಲಇಂದು ಮತ್ತು ನಾಳೆ ನಡೆಯುವ ಸಭೆಗಳು ಅತ್ಯಂತ ಮಹತ್ವದ್ದಾಗಿದ್ದು ಅಂತಿಮ ನಿರ್ಧಾರ ಪ್ರಕಟಗೊಂಡು ಇನ್ನು ಮುಂದಾದರೂ ಯುವ ಕಾಂಗ್ರೆಸ್ ಸಕ್ರಿಯವಾಗಲಿದೆಯೇ ಎಂಬ ಪ್ರಶ್ನೆ ಕಾಂಗ್ರೆಸ್‍ನ ಯುವ ಕಾರ್ಯಕರ್ತರನ್ನು ಕಾಡುತ್ತಿದೆ.

Share.

2 Comments

  1. I bought it for my mother-in-law, and the logistics was very fast. She put it on when it arrived. The white hair was completely covered. The effect was natural. She looked much younger, and she was very satisfied. Praise!

Leave A Reply